PLEASE LOGIN TO KANNADANET.COM FOR REGULAR NEWS-UPDATES

 

ಬದುಕಿನಲ್ಲಿ ಪಠ್ಯಗಳಿಗೆ ಕೊಡುವಷ್ಟೇ ಮಹತ್ವ ಪಠ್ಯೇತರ ಚಟುವಟಿಕೆಗಳಿಗೂ ನೀಡಬೇಕು. ಅದರಲ್ಲೂ ಕ್ರೀಡೆಯೂ ಅವಿಬಾಜ್ಯ ಅಂಗವಾಗಬೇಕು. ಕ್ರೀಡೆ ಸದೃಡ ದೇಹವನ್ನು ನಿರ್ಮಿಸುವುದಷ್ಟೇ ಅಲ್ಲ ಸದೃಡ ಮನಸ್ಸಿನ ನಿರ್ಮಾಣಕ್ಕೂ ಕಾರಣವಾಗುತ್ತೆ ಹೀಗಾಗಿ ಇಂತಹ ಕ್ರೀಡಾಕೂಟಗಳು ನಿರಂತರವಾಗಿ ನಡೆಯಬೇಕು ಎಂದು ಸಂಸದ ಕರಡಿ ಸಂಗಣ್ಣ ಹೇಳಿದರು.
ಅವರು ಜಿಲ್ಲಾ ಕ್ರೀಡಾಂಗಣದಲ್ಲಿ  ಸರಸ್ವತಿ ವಿದ್ಯಾಮಂದಿರ ಪ್ರೌಢಶಾಲೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಕೊಪ್ಪಳ ಪೂರ್ವ ವಲಯ ಮಟ್ಟದ ಪ್ರೌಢಶಾಲಾ ಮಕ್ಕಳ ಕ್ರೀಡಾಕೂಟವನ್ನು ಶಾಟ್‌ಪುಟ್ ಎಸೆಯುವುದರ ಮೂಲಕ ಉದ್ಘಾಟಸಿ ಮಾತನಾಡುತ್ತಿದ್ದರು.
ಇತ್ತೀಚಿನ ದಿನಗಳಲ್ಲಿ ಕ್ರೀಡೆಗೂ ಮಹತ್ವ ಸಿಗುತ್ತಿರುವುದು ಗಮನಾರ್ಹ ಸಂಗತಿ. ನಮ್ಮ ಭಾಗದ ಮಕ್ಕಳು ರಾಜ್ಯ,ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಯಶಸ್ಸನ್ನು ಪಡೆಯಲಿ. ಅದಕ್ಕೂ ಪೂರಕವಾದ ಸೌಲಭ್ಯಗಳನ್ನು ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.  
         ಕಾರ‍್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ   ಶ್ರೀನಿವಾಸ ಗುಪ್ತಾ ಅಧ್ಯಕ್ಷರು ಲಯನ್ಸ್ ಕ್ಲಬ್ ಕೊಪ್ಪಳ, ರಾಘವೇಂದ್ರ ಪಾನಘಂಟಿ ಹಿರಿಯ ನ್ಯಾಯವಾದಿಗಳು,ಅಧ್ಯಕ್ಷರು ಜಿಲ್ಲಾ ಖಾಸಗಿ ಶಾಲಾ ಮಂಡಳಿಗಳ ಒಕ್ಕೂಟ ಹಾಗೂ ವಿಜಯ ಕವಲೂರ ಜಯಕರ್ನಾಟಕ ಸಂಘಟನೆಯ ಉತ್ತರಕರ್ನಾಟಕ ಅಧ್ಯಕ್ಷರು, ಪತ್ರೆಪ್ಪ ಪಲ್ಲೇದ,ಪ್ಯಾಟಿ ಈಶ್ವರ ದೇವಸ್ಥಾನ ಸಮಿತಿ ಗೌರವಾಧ್ಯಕ್ಷರು, ಮಲ್ಲಪ್ಪ ಕವಲೂರ ನಗರಸಭೆ ಸದಸ್ಯರು, ದೈಹಿಕ ಶಿಕ್ಷಕಕರ ಸಂಘದ ಜಿಲ್ಲಾಧ್ಯಕ್ಷ ಪ್ರಭು ಹಿರೇಮಠ ಹಾಗೂ ಸಂಸ್ಥೆಯ ಕಾರ್ಯದರ್ಶಿ ಆರ್.ಎಚ್.ಅತ್ತನೂರ ಉಪಸ್ಥಿತರಿದ್ದರು. 
ಪ್ರತಿಜ್ಞಾ ವಿದಿಯನ್ನು ಸರಸ್ವತಿ ವಿದ್ಯಾಮಂದಿರದ ಮುಖ್ಯೋಪಾಧ್ಯಾಯನಿ ಶ್ರೀಮತಿ ರೇಣುಕಾ ಅತ್ತನೂರ ಭೋದಿಸಿದರು.
ವಿವಿಧ ಶಾಲೆಗಳಿಂದ ಬಂದಂತಹ ದೈಹಿಕ ಶಿಕ್ಷಕರು,ವಿದ್ಯಾರ್ಥಿ/ವಿದ್ಯಾರ್ಥಿನಿಯರೂ ಸೇರಿದಂತೆ ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. 

Advertisement

0 comments:

Post a Comment

 
Top