PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ: ಜು: ೦೪:ಕೊಪ್ಪಳ ಜಿಲ್ಲಾ ವಕೀಲರ ಸಂಘದ ವತಿಯಿಂದ ನೂತನ ಸಂಸತ್ ಸದಸ್ಯರಾದ   ಸಂಗಣ್ಣ ಕರಡಿಯವರಿಗೆ ಕೊಪ್ಪಳ ಜಿಲ್ಲಾ ವಕೀಲರ ಸಂಘದಲ್ಲಿ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ   ಎ.ವಿ.ಕಣವಿ ವಕೀಲರು ಇವರು ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಕಾಂತ ಬಬಲಾದಿಯವರು, ಹಿರಿಯ ಶ್ರೇಣಿ ನ್ಯಾಯಾಧೀಶರಾದ ಬಿ.ದಶರಥರವರು, ರಾಜ್ಯ ವಕೀಲರ ಪರಿಷತ್ತಿನ ಸದಸ್ಯರಾದ
ಸಂದ್ಯಾ.ಬಿ.ಮಾದಿನೂರ ಅವರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಆರ್.ವಿ.ಮಠದ, ಖಜಾಂಚಿ ರವಿ ಬೆಟಗೇರಿ, ಸಂಘದ ಸದಸ್ಯರುಗಳಾದ ವಿ.ಎಂ.ಭೂಸನೂರಮಠ, ಎಸ್.ಆರ್.ಹಿರೇಮಠ, ರಾಜು ಬಾಕಳೆ, ಪಿ.ಎಂ.ನಾಯಕ, ವಿ.ಎಲ್.ಮಾಲಗಿತ್ತಿ, ಜಿ.ಎಫ್.ಹಮ್ಮಿಗಿ, ವಿ.ಜಿ.ಕಟ್ಟಿಮನಿ ಮತ್ತು ಸಂಘದ ಸರ್ವ ಸದಸ್ಯರು ಸಮಾರಂಭದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು ಎಂದು ವಕೀಲರಾದ ಬಸವರಾಜ ಸಿದ್ನೆಕೊಪ್ಪಮಠ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

0 comments:

Post a Comment

 
Top