ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು, ಕ್ರೀಡೆ, ಸಂಸ್ಕೃತಿ ಹಾಗೂ ಸಮುದಾಯ ಅಭಿವೃದ್ಧಿ ಕ್ಷೇತ್ರಗಳಲ್ಲಿ ೨೦೧೩-೧೪ ನೇ ಸಾಲಿನಲ್ಲಿ ಉತ್ತಮವಾದ ಕಾರ್ಯ ಚಟುವಟಿಕೆಗಳನ್ನು ನಿರ್ವಹಿಸಿರುವ ಯುವಜನರಿಗೆ ಹಾಗೂ ಯುವಕ/ಯುವತಿ ಸಂಘಗಳಿಗೆ ರಾಜ್ಯ ಯುವ ಪ್ರಶಸ್ತಿ ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಯುವಕ / ಯುವತಿಯರಿಗಾಗಿ ವೈಯಕ್ತಿಕ ೦೧ ಪ್ರಶಸ್ತಿ ಹಾಗೂ ಯುವಜನ ಸಂಘಕ್ಕೆ ೦೧ ಪ್ರಶಸ್ತಿ ಮಾತ್ರ ನೀಡಲು ಅವಕಾಶವಿದೆ. ೨೦೧೨ ರ ಏಪ್ರಿಲ್ ೦೧ ರಿಂದ ೨೦೧೩ ರ ಮಾರ್ಚ್ ೩೧ ವರೆಗೆ ಯುವಕ/ ಯುವತಿ ಮಂಡಳಿ ಹಾಗೂ ಯುವಕ/ಯುವತಿಯರು ಕೈಗೊಂಡಿರುವ ಕಾರ್ಯಕ್ರಮಗಳ ಸಾಧನೆಗಳನ್ನು ಮಾತ್ರ ಪ್ರಶಸ್ತಿಗಾಗಿ ಪರಿಗಣಿಸಲಾಗುವುದು.
ಅರ್ಜಿದಾರರು ೧೫ ರಿಂದ ೩೫ ವರ್ಷ ವಯೋಮಿತಿಯೊಳಗೆ ಇರಬೇಕು ೨೦೧೪ರ ಮಾರ್ಚ್ ೩೧ ಕ್ಕೆ ೩೫ವರ್ಷ ಮೀರಿರಬಾರದು. ವಯೋಮಿತಿ ಬಗ್ಗೆ ವಯಸ್ಸಿನ ಪ್ರಮಾಣ ಪತ್ರವನ್ನು ಗೆಜೆಟೆಡ್ ಅಧಿಕಾರಿಗಳಿಂದ ದೃಢೀಕರಿಸಿ ಸಲ್ಲಿಸಬೇಕು. ಅಲ್ಲದೆ ಯಾವುದೇ ಕ್ರೀಮಿನಲ್ ಮುಖದ್ದಮೆಗಳಿಲ್ಲದಿರುವ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿಗಳಿಂದ ದೃಢೀಕರಣದ ಮೂಲ ಪ್ರತಿಗಳೊಂದಿಗೆ ಅರ್ಜಿ ಸಲ್ಲಿಸಬೇಕು. ೨೦೧೨-೧೩ ರ ಅವಧಿಯಲ್ಲಿ ನಡೆಸಿದ ಕಾರ್ಯಕ್ರಮಗಳ ವಿವರ, ಪತ್ರಿಕಾ ವರದಿ, ಛಾಯಾಚಿತ್ರ ಬ್ಯಾನರಗಳು ಸ್ಪಷ್ಟವಾಗಿ ಕಾಣುವಂತೆ ಒದಗಿಸಬೇಕು. ವಿವರಗಳೊಂದಿಗೆ ಪ್ರಸ್ತಾವನೆಗಳನ್ನು ಸಹಾಯಕ ನಿರ್ದೇಶಕರು, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕ್ರೀಡಾಂಗಣ ಮಳೇಮಲ್ಲೇಶ್ವರ ರಸ್ತೆ ಕೊಪ್ಪಳ ಇವರಿಂದ ನಿಗದಿತ ನಮೂನೆಯನ್ನು ಪಡೆದು ಭರ್ತಿಮಾಡಿ, ಸಾಧನೆಗಳ ದಾಖಲೆಗಳೊಂದಿಗೆ ಜೂ. ೨೫ ರ ಒಳಗಾಗಿ ತ್ರಿಪ್ರತಿಯಲ್ಲಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕಛೇರಿ ದೂರವಾಣಿ ಸಂಖ್ಯೆ :೦೮೫೩೯-೨೦೧೪೦೦ ಅಥವಾ ಕೆ.ಎಂ. ಪಾಟೀಲ್ -೯೯೪೫೫೫೫೩೨೦ ಕ್ಕೆ ಸಂಪರ್ಕಿಸಬಹುದು.
0 comments:
Post a Comment