PLEASE LOGIN TO KANNADANET.COM FOR REGULAR NEWS-UPDATES


ಇಡೀ ರಾಜ್ಯದ ಪೊಲೀಸ್ ಇಲಾಖೆಯೇ ತಲೆತಗ್ಗಿಸುವಂತೆ ಮಾಡಿದ ಎಡಿಜಿಪಿ ಡಾ. ಪಿ.ರವೀಂದ್ರನಾಥ ಪ್ರಕರಣದಲ್ಲಿ ಕಾಫಿ ಶಾಫ್‌ನಲ್ಲಿ ಅನ್ಯಾಯಕೊಳ್ಳಗಾದ ಯುವತಿಗೆ ನ್ಯಾಯ ಓದಗಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ( ನಾರಾಯಣಗೌಡ ಬಣ) ತಾಲೂಕ ಘಟಕ ಒತ್ತಾಯಿಸಿದೆ.
ಈ ಕುರಿತು ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ತಹಶೀಲ್ದಾರಿಗೆ  ಸಲ್ಲಿಸಿ, ಪೊಲೀಸರ ವಿವಾದದಲ್ಲಿ ಬಲಿಪಶುವಾಗಿರುವ ಮಹಿಳೆಗೆ ನ್ಯಾಯ ಓದಗಿಸಬೇಕು. ಈಗಾಗಲೇ ಸರಕಾರ ತಿರ್ಮಾನಗಳನ್ನು ಗಮನಿಸಿದರೆ ಯುವತಿಗೆ ನ್ಯಾಯ ಸಿಗಬಹುದಾದ ನಂಬಿಕೆ ಹುಸಿಯಾಗಿದೆ. ಈ ಕುರಿತು ಸರಕಾರ ಸೂಕ್ಷವಾಗಿ ಪರಿಶೀಲಿಸಿ ನೊಂದ ಮಹಿಳೆಗೆ ನ್ಯಾಯ ದೊರಕಿಸಿಕೋಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಯಿತು. ವೇದಿಕೆ ತಾಲುಕಾಧ್ಯಕ್ಷ ಪ್ರವೀಣ ಬ. ಬ್ಯಾಹಟ್ಟಿ (ಕವಲೂರು),  ಜಿಲ್ಲಾ ಪ್ರ.ಕಾ.ವಿದ್ಯಾರ್ಥಿ ಘಟಕದ ಜೀವನಕುಮಾರ ಹಿರೇಮಠ, ವಿದ್ಯಾರ್ಥಿ ಘಟಕದ ತಾಲೂಕಾಧ್ಯಕ್ಷ ಪೃತ್ವಿರಾಜ ಚಾಕಲಬ್ಬಿ, ನ.ವಿ.ಘ. ಉಪಾಧ್ಯಕ್ಷ ಗವಿಸಿದ್ದಪ್ಪ ಹಂಡಿ,  ಚೇತನ ಕುಮಾರ ಹಿರೇಮಠ, ರಿಯಾಜ್ ಕುದರಿಮೋತಿ, ಮಂಜುನಾಥ ಯಲಬುರ್ಗಿ, ಶರಣು ಹಿರೇಮಠ, ಶಿವು ಕಟಗರ, ರಮೇಶ ಜಮೆದಾರ, ರಾಮು ನಾಯಕ, ಕಿರಣ ಜೈನ್, ಮಂಜುನಾಥ ಬೆಲ್ಲದ, ಮಂಜುಜೈನ್, ಕಳಕಪ್ಪ ಗೆಜ್ಜಿ, ಮಂಜುನಾಥ ಹಿರೇಮಠ, ಆನಂದ ಕುಂಬಾರ, ವಿನೋದ ಜೈನ್, ಗೌಸ ಹುಬ್ಬಳ್ಳಿ ಸೇರಿದಂತೆ ಅನೇಕರು ಉಪಸ್ಥಿರಿದ್ದರು.

Advertisement

0 comments:

Post a Comment

 
Top