ಪೋಲಿಯೋ ಮುಕ್ತ ಭಾರತ ಸಂಭ್ರಮಾಚರಣೆ ಕಾರ್ಯಕ್ರಮವನ್ನು ಕೊಪ್ಪಳ ರೋಟರಿ ಕ್ಲಬ್‌ನಿಂದ ಮೇ.೨೨ ರಂದು ಸಂಜೆ ೬.೦೦ ಗಂಟೆಗೆ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಏರ್ಪಡಿಸಲಾಗಿದೆ.
ಜಿಲ್ಲಾ ರೋಟರಿ ಗವರ್ನರ್ ಆರ್.ಗೋಪಿನಾಥ ಅವರು ಸಂಸ್ಥೆಗೆ ಅಧಿಕೃತ ಭೇಟಿ ನೀಡುತ್ತಿರುವ ಹಿನ್ನಲೆಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ನ್ಯಾಯಾಧೀಶರಾದ ಶ್ರೀಕಾಂತ ದಾ.ಬಬಲಾದಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಶ್ರೀಕಾಂತ ಬಾಸೂರ ಅವರು ಆಗಮಿಸಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷೆ ಇಂದಿರಾ ಭಾವಿಕಟ್ಟಿ ಹಾಗೂ ಕಾರ್ಯದರ್ಶಿ ಎ.ಜಿ.ಶರಣಪ್ಪ ತಿಳಿಸಿದ್ದಾರೆ.
0 comments:
Post a Comment