PLEASE LOGIN TO KANNADANET.COM FOR REGULAR NEWS-UPDATES

 ಕೋಟಿ ಶ್ರೀ ಗಾಯತ್ರಿ ಮಂತ್ರ       ಜಪಯಜ್ಞ : ನಗರಕ್ಕೆ ಇಂದು ಶ್ರೀಗಳೂ




  ಕೊಪ್ಪಳ. ೧೨- ವಿಠ್ಠಲಕೃಷ್ಣ ದೇವರ ಪ್ರತಿ ಷ್ಠಾಪನಾ ಮತ್ತು ದಶಮಾನೋ ತ್ಸವದ ಅಂಗವಾಗಿ ಕೋಟಿ ಶ್ರೀ ಗಾಯತ್ರಿಮಂತ್ರ ಜಪಯಜ್ಞ ಸಾಂಗತಾ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು  ಇಂದು ದಿ. ೧೩, ೧೪ ಮತ್ತು ೧೫ ರಂದು ಜರುಗ ಲಿದೆ .
  ಈ  ಕಾರ್ಯಕ್ರಮದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದ್ದು, ರಾಜ್ಯದ ವಿವಿಧ ಭಾಗಗಳಿಂದ ಗ್ರಾಯತ್ರಿ ಆರಾಧ ಕರು ಮತ್ತು ಬ್ರಾಹ್ಮಣ ಸಮಾಜದ ಹಾಗೂ ಕೊಪ್ಪಳ ನಗರದ ಎಲ್ಲ ಧರ್ಮದವರು ಭಾಗ ವಹಿಸಲಿದ್ದಾರೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಧಾರ್ಮಿಕ ನೇತೃತ್ವ ವಹಿಸಿರುವ ವೇ.ವಿ. ಕೊಟ್ರೇಶ ಚಾರ್ಯ ಅಗ್ನಿಹೋತ್ರಿ ಮಾತನಾಡಿ ಲೋಕ ಕಲ್ಯಾಣಾರ್ಥ ವಾಗಿ ಈ ಜಪಯಜ್ಞ ಹಾಗೂ ಹೋಮ ಹಮ್ಮಿಕೊಳ್ಳಲಾಗಿದ್ದು. ಸರ್ವರು ಇದರ ಸದುಪಯೋಗ ಪಡೆದು ಧರ್ಮ ಜಾಗೃತಿಯಲ್ಲಿ ಭಾಗವಹಿಸಿ ಎಂದರು.
ಇಂದು ದಿ. ೧೩ ರಂದು ಶೋಭಾ ಯಾತ್ರೆ : ರವಿವಾರ ಸಂಜೆ ೫ಕ್ಕೆ ಕೊಪ್ಪಳ ಶ್ರೀ ವೆಂಕಟೇಶ್ವರ ದೇವಸ್ಥಾನದಿಂದ ಶ್ರೀ ವಿಠ್ಠಲ ಕೃಷ್ಣ ದೇವಸ್ಥಾನದವರೆಗೆ ಶೋಭಾಯಾತ್ರೆ ಜರುಗಲಿದ್ದು, ಶ್ರೀ ನಾರಾಯಣ, ಶ್ರೀ ಗಾಯತ್ರಿ, ವೇದಗ್ರಂಥ, ಶ್ರೀ ಕೃಷ್ಣ ಹಾಗೂ ಶ್ರೀ ಯಾಜ್ಞವಲ್ಕ್ಯ ಗುರುಗಳ ಭಾವಚಿತ್ರಗಳೊಂದಿಗೆ ಹೂಣಸಿ ಹೊಳಿ ಶ್ರೀ ವಿದ್ಯಾ ಭಾಸ್ಕರತೀರ್ಥ ಸ್ವಾಮಿಗಳು, ಮಂತ್ರಾ ಲಯದ ಶ್ರೀ ಸುಬುದೇಂದ್ರತೀರ್ಥ ಸ್ವಾಮಿಗಳು, ಸ್ವರ್ಣ ವಲಯ ಶ್ರೀ ಗಂಗಾವಧ ರೇಂದ್ರ ಸರಸ್ವತಿ ಸ್ವಾಮಿ ಗಳು ಮೆರವಣಿಗೆ ಜರುU ಲಿದ್ದು, ನೂರಕ್ಕೂ ಅಧಿಕ ಭಜನಾ ಮಂಡಳಿಗಳು ಹಾಗೂ ವಿವಿಧ ವಾದ್ಯಗಳು ಆಗಮಿಸಲಿವೆ ಎಂದರು.
ದಿ. ೧೪ ರಂದು ಸೋಮವಾರ  ಶ್ರೀಗಳ ಸಾನಿಧ್ಯದಲ್ಲಿ ಕೋಟಿ ಶ್ರೀ ಗಾಯತ್ರಿ ಜಪ ಸಾಂಗತಾ ನವಕುಂಡಾತ್ಮಕ ಮಹಾಯಜ್ಞ,  ಪ್ರಾರಂಭ, ಮೂಲ ಸುಂದರ ಕಾಂಡ ಹೋಮ, ಶಿಖರ ಕಳಸಾರೋಹಣ ಹೋಮ, ಶಿಖರ ಸಂಸ್ಕಾರ, ದೇವರ ಪೂಜೆ, ಶ್ರೀಗಳಿಂದ ಕಳಸಾರೋಣ ಜರುಗಲಿದೆ ಎಂದು ತಿಳಿಸಿದರು.
ದಿ. ೧೫ ರಂದು ಮಂಗಳವಾರ  -  ಶ್ರೀ ಸುಂದರಕಾಂಡ ಹೋಮ, ಶ್ರೀ ಲಕ್ಷ್ಮೀಶೋಭಾನ ಹವಿರ್ಯಜ್ಙವೇದ ಸಹಿತ ಸವಿತೃನಾರಾಯಣ ಹೋಮ, ಸಂಜೆ ೫ಕ್ಕೆ ಶ್ರೀ ಸುಧರ್ಮ ಆಚಾರರವರಿಂದ ಶ್ರೀ ಹನುಮಾನ್ ಚಾಲಿಸ್ ಉಪನ್ಯಾಸ ಜರುಗಲಿದೆ.
ಪ್ರವಚನ : ದಿ. ೧೩ ರಂದು ರವಿವಾ ಬೆಳಿಗ್ಗೆ ೧೦ಕ್ಕೆ ಆನಂದವನ ಅಗಡಿಯ ಪೂಜ್ಯ ಶ್ರೀ ಗುರುದತ್ತ ಚಕ್ರವರ್ತಗಳು ಹಾಗೂ ಕಕಿಹಳ್ಳಿಯ ಸಂತಶ್ರೇಷ್ಠ ಸುರೇಶ ಪಾಟೀಲರಿಂದ ಪ್ರವಚನ ಜರುಗಲಿದೆ.
ದಿ. ೧೪ ರಂದು ಮಧ್ಯಾಹ್ನ ೧೨-೩೦ಕ್ಕೆ ಸ್ವರ್ಣವಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿ ಗಳಿಂದ ಹಾಗೂ ಹುಣಸಿಹೋಳಿ ಶ್ರೀ ವಿದ್ಯಾಭಾಸ್ಕರತೀರ್ಥ ಶ್ರೀಗಳು ಮತ್ತು ಗವಿಮಠದ ಅಭಿನವ ಶ್ರೀ ಗವಿಸಿದ್ಧೇಶ್ವರ ಸ್ವಾಮಿಗಳು, ಶ್ರೀ ಬಾಲಕೃಷ್ಣಾನಂದ ಸ್ವಾಮಿಗಳು ಪ್ರವಚನ ನೀಡಲಿದ್ದಾರೇಂದು ತಿಳಿಸಿದರು.
ಮುಖಂಡ ಮಂಜುನಾಥ ಹಳ್ಳಿಕೇರಿ ಮಾತನಾಡಿ, ಧಾರ್ಮಿಕ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮ ಗಳು ಸಹ ಜರುಗಲಿದ್ದು, ದಿ. ೧೪ ರಂದು ಸಂಜೆ ೭ಕ್ಕೆ ಖ್ಯಾತ ಸಂಗೀತ ಗಾರ ಪುತ್ತೂರ ನರಸಿಂಗ ನಾಯಕರಿಂದ ಭಕ್ತ ಸಂಗೀತ ಕಾರ್ಯಕ್ರಮ ಜರುಗಲಿದೆ.
ನಗೆ ಸಂಜೆ : ದಿ. ೧೫ ರಂದು ಮಂಗಳವಾರ ಸಂಜೆ ೬.೩೦ಕ್ಕೆ ಖ್ಯಾತ ಹಾಸ್ಯಗಾರ ಪ್ರಾಣೇಶ ಬೀಜಿ ನೇತೃತ್ವದ ತಂಡದಿಂದ ನಗೆ ಸಂಜೆ ಜರುಗಲಿದ್ದು, ಮೂರು ದಿನಗಳ ಕಾರ್ಯಕ್ರಮದ ನಿರೂಪಣೆಯನ್ನು ಹಾಸ್ಯ ಕಲಾವಿದ ನರಸಿಂಗ ಜೋಷಿ ನಡೆಸಿ ಕೊಡಲಿದ್ದಾ ರೇಂದು ತಿಳಿಸಿದ್ದಾರೆ.

Advertisement

0 comments:

Post a Comment

 
Top