PLEASE LOGIN TO KANNADANET.COM FOR REGULAR NEWS-UPDATES

 

ತಾಲೂಕಿನ ಕಾತರಕಿ ಗ್ರಾಮದಲ್ಲಿ ಮಾರುತೇಶ್ವರ ಜಾತ್ರೆ ಮೂರು ದಿನಗಳ ಕಾಲ ಸಂಭ್ರಮದಿಂದ ನಡೆಯಿತು. ಶ್ರೀ ಅವಿನಾಳೇಶ್ವರ ಓಕಳಿ ಪ್ರಯುಕ್ತ ಮುಳ್ಳು ಗಿಡ ಪವಾಡ ನಡೆಯತು ಸುತ್ತ ಮುತ್ತಲ ಗ್ರಾಮಗಳ ಭಕ್ತರು ದಾಸೋಹ ನಡೆಸಿದರು. ನಂತರ ಮಾರುತೇಶ್ವರ ಉಚ್ಛಾಯ ನೆರವೇರಿಸಲಾಯಿತು, ಎರಡನೇ ದಿನ ಶ್ರೀ ಮಾರುತೇಶ್ವರನಿಗೆ ಅಭಿಷೇಕ ಮಹಾಮಂಗಳಾರತಿ ನಡೆದು ಸಾಯಂಕಾಲ ೫:೩೦ ಕ್ಕೆ ಮಹಾರಥೋತ್ಸವವು ಬಾಜಾ ಬಜಂತ್ರಿ ಮತ್ತು ಡೊಳ್ಳು ಕುಣಿತದೊಂದಿಗೆ ವಿಜ್ರಂಭಣೆಯಿಂದ ಜರುಗಿತು, ಮೂರನೇ ದಿನ ಮಾರುತೇಶ್ವರ ಬ್ಯಾಟಿ ಗಿಡ (ಮುಳ್ಳುಗಿಡ) ಮುಳ್ಳುಪಲ್ಲಕ್ಕಿ ಉತ್ಸವ,ಅಗ್ನಿಕೊಂಡ ನಂತರ ನೀರು ಕೊಂಡ ಕಾರ್ಯಕ್ರಮಗಳು ನಡೆದವು. ರಾತ್ರಿ ೮:೦೦ ಗಂಟೆಗೆ ಶ್ರೀ ಗವಿಸಿದ್ದೇಶ್ವರ ಸಂಗೀತ ವಿದ್ಯಾ ಪೀಠ ಗವಿಮಠ ಕೊಪ್ಪಳ ಇವರಿಂದ ಸುನಾದ ಸಂಪದ ಸಂಗೀತ ಕಾರ್ಯಕ್ರಮ ನಡೆಯಿತು ಶ್ರೀ ತಾಯಮ್ಮ ದೇವಿ ಭಜನಾ ಯುವಕ ಮಂಡಳಿಯವರಿಂದ ಕುರುಕ್ಷೇತ್ರ, ಬಯಲಾಟ ಪ್ರದರ್ಶಿಸಲಾಯಿತು.

Advertisement

0 comments:

Post a Comment

 
Top