PLEASE LOGIN TO KANNADANET.COM FOR REGULAR NEWS-UPDATES

ತಾಲೂಕಿನ ಹೊಸಬಂಡಿಹರ್ಲಾಪುರ ಗ್ರಾಮದ ಸಮೀಪದ ನಗರಗಡ್ಡಿ ಮಠದ ಶ್ರೀ ಶಾಂತಲಿಂಗೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಸಾಮೂಹಿಕ ವಿವಾಹ ಕಾರ್ಯಕ್ರಮ ಏ.೧೩ ರಂದು ಜಾತ್ರಾ ಮಹೋತ್ಸವ, ಧ್ವಜಾರೋಹಣ ಕಾರ್ಯಕ್ರಮ ಜರುಗಲಿದೆ.
ಕಂಪ್ಲಿಯ ಕಲ್ಮಠದ ಶ್ರೀ ಅಭಿನವ ಪ್ರಭುಮಹಾಸ್ವಾಮಿಗಳು ಇವರು ಧ್ವಜಾರೋಹಣ ನೆರವೇರಿಸಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಅದೇ ದಿನ ಬೆಳಿಗ್ಗೆ ಜಂಗಮ ವಟುಗಳಿಗೆ ಅಯ್ಯಾಚಾರ ಕಾರ್ಯಕ್ರಮ ಬೆದವಟ್ಟಿ ಹಿರೇಮಠದ ಶಿವಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ನೆರವೇರಿಸುವರು. ವಿವಿಧ ಮಠಾಧೀಶರಾದ ಶ್ರೀ ಹಿರಿಶಾಂತವೀರ ಸ್ವಾಮಿಗಳು, ಶ್ರೀ ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು, ಶ್ರೀ ಗುರುಲಿಂಗ ಶಿವಾಚಾರ್ಯ ಸ್ವಾಮಿಗಳು, ಶ್ರೀ ರಾಘವಾಂಕ ಶಿವಾಚಾರ್ಯ ಸ್ವಾಮಿಗಳು, ಶ್ರೀ ಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು  ಸಮಾರಂಭದ ಸಾನಿಧ್ಯ ವಹಿಸಲಿದ್ದಾರೆ. 
ಮುಖ್ಯ ಅತಿಥಿಗಳಾಗಿ ಕೆ.ವೆಂಕಟಯ್ಯ, ದೇವಪ್ಪ ಮೇಕಾಳಿ, ಬ್ರಹ್ಮಯ್ಯ, ಟಿ.ಮಲ್ಲಣ್ಣ, ವೆಂಕಟೇಶ, ಗಿರೀಶ ಜಿ.ಹಿರೇಮಠ, ಮಂಜುನಾಥ ಕಲಾಲ್, ವೆಂಕಟರತ್ನಂ ಚಲಸಾನಿ, ಶಿವಪ್ಪ ಕರಡಿ, ಸಿದ್ದರಾಮಪ್ಪ ಬಟ್ಟರ್, ಯಮನೂರಪ್ಪ, ಬೆಳ್ಳೆಪ್ಪ ಪೌರಾದ್, ಯರಿಸ್ವಾಮಿ, ಮಲ್ಲಿಕಾರ್ಜುನಯ್ಯ ಶಿರೂಳಮಠ, ಎಂ.ಶ್ರೀನಿವಾಸರಾವ್, ಎಸ್.ಎಂ.ವೀರಭದ್ರಯ್ಯ ಸೇರಿದಂತೆ ಅನೇಕರು ಭಾಗವಹಿಸುವರು. ಅಲ್ಲದೇ ಅಂದು ರಾತ್ರಿ ೯.೦೦ ಗಂಟೆಗೆ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಅದೇ ರೀತಿ ದಿ.೧೪ ರ ಬೆಳಿಗ್ಗೆ ೧೦.೩೦ ಕ್ಕೆ ಧರ್ಮಸಭೆ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮ ಜರುಗಲಿದೆ, ಸಾನಿಧ್ಯವನ್ನು ಮುಂಡರಗಿ ಸಂಸ್ಥಾನಮಠದ ಡಾ|| ಶ್ರೀ ಅನ್ನದಾನೇಶ್ವರ ಸ್ವಾಮಿಗಳು, ಕೊಪ್ಪಳ ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು, ಕನಕಗಿರಿ ವೀರಕ್ತಮಠದ ಡಾ|| ಶ್ರೀ ಚನ್ನಮಲ್ಲಮಹಾಸ್ವಾಮಿಗಳು, ಬಳ್ಳಾರಿ ಶಿವಲಿಂಗ ಸ್ವಾಮಿ ಮಠದ ಶ್ರೀ ಕರಿಬಸವ ರಾಜೇಂದ್ರ ಸ್ವಾಮಿಗಳು, ಸಂಡೂರ ವೀರಕ್ತ ಮಠದ ಶ್ರೀ ಪ್ರಭು ಮಹಾಸ್ವಾಮಿಗಳು, ಬಳ್ಳಾರಿ ಕಮ್ಮೂರು ಜೇಡು ಮಠದ ಶ್ರೀ ಕಲ್ಯಾಣ ಸ್ವಾಮಿಗಳು, ಕೂಡ್ಲಗಿ ಹಿರೇಮಠದ ಶ್ರೀ ಪ್ರಶಾಂತ ಸಾಗರ ಶಿವಾಚಾರ್ಯ ಸ್ವಾಮಿಗಳು, ಮಸ್ಕಿ ಗಟ್ಟಿನಮಠದ ಶ್ರೀ ರುದ್ರಮುನಿ ದೇವರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಲಿದ್ದಾರೆ.
ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ಮಾಜಿ ಶಾಸಕ ಸಂಗಣ್ಣ ಕರಡಿ, ಕಸಾಪ ಜಿಲ್ಲಾಧ್ಯಕ್ಷ ವೀರಣ್ಣ ನಿಂಗೋಜಿ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಜಿ.ಎಸ್.ಗೋನಾಳ, ಸುದಿನ ಸ್ಥಾನಿಕ ಸಂಪಾದಕ ಹರೀಶ ಹೆಚ್.ಎಸ್., ಜಿ.ಪಂ.ಅಧ್ಯಕ್ಷ ಟಿ.ಜನಾರ್ಧನ ಹುಲಿಗಿ, ಜಿ.ಪಂ.ಸದಸ್ಯ ಕೆ.ರಮೇಶ ಹಿಟ್ನಾಳ ಸೇರಿದಂತೆ ಅನೇಕ ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳ ಮುಖ್ಯಸ್ಥರು ಪಾಲ್ಗೊಳ್ಳಲಿದ್ದಾರೆ.
ಅಂದು ಮಧ್ಯಾಹ್ನ ೧.೦೦ ಗಂಟೆಗೆ ಗಂಗಾವತಿಯ ಹಾಸ್ಯ ಕಲಾವಿದ ಮರಿಯಪ್ಪರಿಂದ ನಗೆಹಬ್ಬ, ಗುಲ್ಬರ್ಗಾದ ಹಾಸ್ಯ ಭಾಷಣಕಾರರಾದ ಶ್ರೀಮತಿ ಇಂದುಮತಿ ಸಾಲಿಮಠ ನಡೆಸಿಕೊಡಲಿದ್ದಾರೆ. ಸಾಯಂಕಾಲ ೫.೦೦ ಗಂಟೆಗೆ ರಥೋತ್ಸವ, ಸಂಜೆ ೭.೦೦ ಗಂಟೆಗೆ ಮದ್ದು ಸುಡುವ ಕಾರ್ಯಕ್ರಮ ಜರುಗಲಿದೆ. ಜಿಲ್ಲೆಯ ಎಲ್ಲಾ ಗ್ರಾಮಗಳ ಸಕಲ ಸದ್ಬಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಈ ಜಾತ್ರೆಯನ್ನು ಯಶಸ್ವಿಗೊಳಿಸಬೇಕೆಂದು ಶ್ರೀ ನಗರಗಡ್ಡಿ ಮಠದ ಸದ್ಬಕ್ತಾಧಿಗಳು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ. 

Advertisement

0 comments:

Post a Comment

 
Top