PLEASE LOGIN TO KANNADANET.COM FOR REGULAR NEWS-UPDATES

  ದಿ. ೧೨.  ರಂದು ಕೊಪ್ಪಳ ನಗರದಲ್ಲಿ ಶ್ರೀನಿವಾಸ ಹೋಟೆಲ್, ಗಾರ್ಡನ ಹೋಟೆಲ್, ಧರ್ಮಶಾಸ್ರ್ತ ಹೋಟೆಲಗಳ ಆವರಣದಲ್ಲಿ ಚಾಯ್ ಪೆ ಚರ್ಚಾ ಎಂಬ ವಿನೂತನ ಕಾರ್ಯಕ್ರಮವನ್ನು ಸಿಟಿಜನ್ ಅಕೌಂಟೆಬಲ್ ಗೌವರ್‌ನ್ಸೆ ( ಸಿ.ಎ.ಜಿ) ಎಂಬ ಸಂಸ್ಥೆಯಿಂದ ನರೇಂದ್ರ ಮೋದಿಯವರ ಬಗ್ಗೆ ಯು ಪಿ ಎ ಸರಕಾರದ ಕ್ಯಾಬಿನೇಟ್ ಮಂತ್ರಿಯಾದ ಮಣಿಶಂಕರ ಅಯ್ಯರ್ ರವರು, ಬಿ.ಜೆ.ಪಿ ಯಿಂದ ಭಾರತ ದೇಶದ ಒಬ್ಬ ಚಹಾ ಮಾರುವನು ಈ ದೇಶದ ಪ್ರಧಾನಿ ಆಗುವ ಕನಸನ್ನು ಕಾಣುತ್ತಿದ್ದಾನೆ  ಎಂದು ದುಡಿದು ತಿನ್ನುವರ ಬಗ್ಗೆ ಕಿಳುಮಟ್ಟವಾಗಿ ಹೇಳಿಕೆಯನ್ನು ನೀಡುವ ಈ ಕಾಂಗ್ರೆಸ್‌ನ ಗುಲಾಮಗಿರಿಯನ್ನು ಎತ್ತಿ ತೋರಿಸುತ್ತದೆ. ಕಾಂಗ್ರೆಸ್ಸಿನ ಪ್ರಕಾರ ಯಾವುದೇ ಒಬ್ಬ ಹಿಂದುಳಿದ ವರ್ಗಕ್ಕೆ ಅಥವಾ ಸಾಮನ್ಯ ಜನರು ಸಾಮರ್ಥ್ಯವಿದ್ದರು  ದೇಶವನ್ನು ಆಳುವ ಹಕ್ಕು ಅವರಿಗಿಲ್ಲ ಅದು ಎಂದಿದ್ದರು ನೆಹರು ಮತ್ತು ಇಂದಿರಾ ಗಾಂಧಿ ಮನೆತನದವರಿಗೆ ಮಾತ್ರ ಸಿಮೀತ ಎಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡ     ಬಿ ಜೆ ಪಿ ಜಿಲ್ಲಾಧ್ಯಕ್ಷರಾದ ಕರಡಿ ಸಂಗಣ್ಣನವರು ಮಾತನಾಡಿದರು.
             
   
 ಈ ಸಂದರ್ಭದಲ್ಲಿ ಬಿ ಜೆ ಪಿ ಮುಖಂಡರಾದ ಡಾ.ಕೆ.ಜಿ.ಕುಲಕರ್ಣಿ, ವಿ.ಎಮ್ ಬೂಸನೂರಮಠ, ಅಪ್ಪಣ್ಣ ಪದಕಿ, ಸಂಗಪ್ಪ ವಕ್ಕಳದ, ನರಸಿಂಗರಾವ್ ಕುಲಕರ್ಣಿ, ರಾಜು ಬಾಕಳೆ, ಶಿವಪ್ಪ ಮುತ್ತಾಳ, ತೋಟಪ್ಪ ಮೇಟಿ, ಮಲ್ಲಿಕಾರ್ಜುನ ಗಡಗಿ, ಶಂಕ್ರಪ್ಪ ಪೊಳಟಗಿ, ಸಂಗಯ್ಯ ಬಾನಾಪೂರ, ಸಣ್ಣಸುಗಪ್ಪ ಕಾರಟಗಿ, ಶಾಮಲಾ ಕೋನಾಪೂರ, ಆರ್.ಬಿ.ಪಾನಘಂಟಿ, ಪ್ರಾಣೇಶ ಮಾದಿನೂರು, ಪ್ರಾಣೇಶ ಮಹೇಂದ್ರಕರ, ಗವಿಸಿದ್ದಪ್ಪ ನರಸಾಪೂರ, ಮಂಜುನಾಥ ಅಂಗಡಿ, ಉಮೇಶ ಕುರಡೆಕರ್, ಮಹೇಶ ಅಂಗಡಿ, ದತ್ತುವೈದ್ಯ, ಮಾರುತಿ ಕಾರಟಗಿ, ಮೋಹನ್‌ಗಾರ್ಡನ, ಸಂಜಯ ಕಾಠವಟೆ, ವಿರೇಶ ಕೂಲಿ, ರಾಕೇಶ ಪಾನಘಂಟಿ, ಸಂಕೇತ ಪಾಟೀಲ, ಸಿ.ಎ.ಜಿ ಕಾರ್ಯಕರ್ತರಾದ ರವಿಕುಮಾರ ಗಾಯಕವಾಡ್, ಹಾಗೂ ಬಿ ಜೆ ಪಿ ಜಿಲ್ಲಾ ವಕ್ತಾರರಾದ ಚಂದ್ರಶೇಖರಗೌಡ ಪಾಟೀಲ ಹಲಗೆರಿ

Advertisement

0 comments:

Post a Comment

 
Top