PLEASE LOGIN TO KANNADANET.COM FOR REGULAR NEWS-UPDATES

   ಹೈದ್ರಾಬಾದ್-ಕರ್ನಾಟಕ ಪ್ರದೇಶದ ಜಿಲ್ಲೆಯ ಅಭ್ಯರ್ಥಿಗಳಿಗೆ ನೇಮಕಾತಿಯಲ್ಲಿ ವಿಶೇಷ ಮೀಸಲಾತಿ ಸೌಲಭ್ಯ ಒದಗಿಸುವ ಕಾರ್ಯಕ್ರಮ ಜಾರಿಗೆ ಬಂದಿದ್ದು, ಇದಕ್ಕೆ ಸಂಬಂಧಿಸಿದಂತೆ ಅರ್ಹತಾ ಪ್ರಮಾಣಪತ್ರ ಪಡೆಯಬಯಸುವ ಅಭ್ಯರ್ಥಿಗಳು ಆಯಾ ತಹಸಿಲ್ದಾರರಿಂದ ನಿಗದಿತ ನಮೂನೆಯಲ್ಲಿ ವಾಸಸ್ಥಳ ಪ್ರಮಾಣ ಪತ್ರ ಪಡೆದು, ನಂತರವೇ ಉಪವಿಭಾಗಾಧಿಕಾರಿಗಳ ಕಚೇರಿಗೆ ಅರ್ಜಿ ಸಲ್ಲಿಸಬೇಕು ಎಂದು ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ್ ಅವರು ಸೂಚನೆ ನೀಡಿದ್ದಾರೆ.
  ಹೈದ್ರಾಬಾದ್ ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ ನಿಯಮಗಳು-೨೦೧೩ ರ ಕಲಂ ೩೭೧ ಜೆ ಅಡಿಯಲ್ಲಿ ಹೈ-ಕ ಭಾಗದ ವಿದ್ಯಾರ್ಥಿಗಳು ಹಾಗೂ ನೌಕರರು ಅಧಿಸೂಚನೆಯನ್ವಯ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಪಡೆಯಲು ಅರ್ಹತಾ ಪ್ರಮಾಣಕ್ಕಾಗಿ ನೇರವಾಗಿ ಉಪವಿಭಾಗಾಧಿಕಾರಿಗಳ ಕಚೇರಿಗೆ ಅರ್ಜಿ ಸಲ್ಲಿಸುತ್ತಿರುವುದು ಕಂಡುಬಂದಿದೆ.  ಆದರೆ ಅಧಿಸೂಚನೆಯನ್ವಯ ನಿಗದಿತ ನಮೂನೆಯಲ್ಲಿ ಆಯಾ ತಹಸಿಲ್ದಾರರಿಂದ ವಾಸಸ್ಥಳ ಪ್ರಮಾಣ ಪತ್ರವನ್ನು ಪಡೆದು, ನಂತರ ಅರ್ಹತಾ ಪ್ರಮಾಣಪತ್ರಕ್ಕಾಗಿ ನಿಗದಿತ ನಮೂನೆಯಲ್ಲಿ ಉಪವಿಭಾಗಾಧಿಕಾರಿಗಳ ಕಚೇರಿಗೆ ಅರ್ಜಿ ಸಲ್ಲಿಸಬೇಕಿರುತ್ತದೆ.    ಈಗಾಗಲೆ ಕಚೇರಿಗೆ ಸುಮಾರು ೧೦ ರಿಂದ ೧೫ ಅರ್ಜಿಗಳು ಸ್ವೀಕೃತವಾಗಿದ್ದು, ಇವುಗಳಲ್ಲಿ ಕೆಲವರು ಅರ್ಜಿಯೊಂದಿಗೆ, ತಹಸಿಲ್ದಾರರು ನಿಗದಿತ ನಮೂನೆಯಲ್ಲಿ ನೀಡುವ ವಾಸಸ್ಥಳ ಪ್ರಮಾಣಪತ್ರವನ್ನು ಲಗತ್ತಿಸಿ ಸಲ್ಲಿಸದೇ ಇರುವುದರಿಂದ, ಅಭ್ಯರ್ಥಿಗಳ ವಾಸಸ್ಥಳದ ಬಗ್ಗೆ ವರದಿ ನೀಡುವಂತೆ ಆಯಾ ತಹಸಿಲ್ದಾರರೊಂದಿಗೆ ಪತ್ರ ವ್ಯವಹಾರ ಮಾಡಬೇಕಿದ್ದು, ಇದರಿಂದ ಅನಗತ್ಯ ವಿಳಂಬವಾಗುವ ಸಾಧ್ಯತೆ ಇರುತ್ತದೆ.  ಅಪೂರ್ಣ ಮಾಹಿತಿ ಹಾಗೂ ದಾಖಲೆ ರಹಿತವಾಗಿ ಅರ್ಜಿ ಸಲ್ಲಿಸಿದಲ್ಲಿ, ವಿನಾಕಾರಣ ವಿಳಂಬವಾಗುವುದರಿಂದ, ಇದಕ್ಕೆ ಅವಕಾಶ ನೀಡದೆ, ಅಭ್ಯರ್ಥಿಗಳು ಆಯಾ ತಹಸಿಲ್ದಾರರಿಂದ ನಿಗದಿತ ನಮೂನೆಯಲ್ಲಿ ವಾಸಸ್ಥಳ ಪ್ರಮಾಣಪತ್ರ ಪಡೆದು, ನಂತರ ಅರ್ಜಿ ಸಲ್ಲಿಸಿದಲ್ಲಿ, ಅಂತಹ ಅಭ್ಯರ್ಥಿಗಳಿಗೆ ತಕ್ಷಣವೇ ಅರ್ಹತಾ ಪ್ರಮಾಣ ಪತ್ರ ವಿತರಿಸಲು ಸಾಧ್ಯವಾಗಲಿದೆ.  ಅರ್ಹತಾ ಪ್ರಮಾಣಪತ್ರವು ಅರ್ಹ ಅಭ್ಯರ್ಥಿಗಳಿಗೆ ಮಾತ್ರ ವಿತರಣೆಯಾಗುವಂತೆ ನೋಡಿಕೊಳ್ಳಲು, ಪೂರ್ಣ ಪರಿಶೀಲನೆ ನಡೆಸುವುದು ಅಗತ್ಯವಾಗಿರುವುದರಿಂದ, ಅಭ್ಯರ್ಥಿಗಳು ಹಾಗೂ ನೌಕರರು ಅಗತ್ಯ ದಾಖಲೆಗಳೊಂದಿಗೆ ಮಾತ್ರ ಅರ್ಜಿ ಸಲ್ಲಿಸಬೇಕು ಎಂದು ಕೊಪ್ಪಳ ವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ್  ತಿಳಿಸಿದ್ದಾರೆ.

Advertisement

0 comments:

Post a Comment

 
Top