PLEASE LOGIN TO KANNADANET.COM FOR REGULAR NEWS-UPDATES

 ಮೂಲ ದ್ರಾವಿಡ ಭಾಷೆಯಿಂದ ಹುಟ್ಟಿಕೊಂಡಿರುವ ಕನ್ನಡ ಭಾಷೆಯಿಂದ ತೆಲುಗು ಭಾಷೆ ಅಭಿವೃದ್ಧಿ ಹೊಂದಿರುವದರಿಂದ ಕನ್ನಡಕ್ಕೆ ತೆಲುಗು ಭಾಷೆ ತಂಗಿಯಾಗುತ್ತಾಳೆ. ಭಾಷಾ ಪರಿಜ್ಞಾನ ಇಲ್ಲದವರು ಕನ್ನಡ ತೆಲುಗು ಭಾಷಾ ಬಾಂಧವ್ಯದ ಬಗ್ಗೆ ವಿವಾದ ಎಬ್ಬಿಸಿರುವುದು ಖಂಡನೀಯವೆಂದು ಭಾರದ್ವಾಜ್   ತಿಳಿಸಿದ್ದಾರೆ.
ಭಾರತದಲ್ಲಿ ಮೊದಲನೇ ಭಾಷೆಯಾಗಿದ್ದ ಮೂಲ ದ್ರಾವಿಡ ಭಾಷೆಯಿಂದ ಹುಟ್ಟಿಕೊಂಡಂತಹ ಭಾಷೆಗಳಾದ ತಮಿಳು, ಕನ್ನಡ, ತೆಲುಗು, ಮಲಯಾಳಂ, ತುಳು ಭಾಷೆಗಳು ಒಂದೇ ಕುಟುಂಬಕ್ಕೆ ಸೇರಿದವಾಗಿರುತ್ತವೆ. ಅದರಲ್ಲಿ ಕನ್ನಡ ದಿಂದ ಅಭಿವೃದ್ಧಿಗೊಂಡ ತೆಲುಗು ಭಾಷೆ ಕನ್ನಡ ಭಾಷೆಗೆ ತಂಗಿ ಭಾಷೆಯಾಗುತ್ತಾಳೆ. ಸುಮಾರು ೧೦೦ ವರ್ಷಗಳಿಂದ ಎರಡು ಭಾಷೆಯ ಸಂಶೋಧಕರು ಎರಡು ಭಾಷೆಗಳಿಗೆ ಏಕಲಿಪಿ ತಯಾರಿಸುತ್ತಿದ್ದಾರೆ.  ಇದರ ಬಗ್ಗೆ ವಿಷಯಗ್ರಹಿಕೆ ಇಲ್ಲದ ಕೆಲವರು ಅಕ್ಕ-ತಂಗಿಯರ ಬಾಂಧವ್ಯದ ಬಗ್ಗೆ ವಿವಾದ ಎಬ್ಬಿಸಿರುವುದು ವಿಷಾದನೀಯವೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭಾರತದಲ್ಲಿ ಆರ್ಯ ಮೂಲದ ಸಂಸ್ಕೃತ ಭಾಷೆಯಿಂದ ಹುಟ್ಟಿಕೊಂಡಿರುವಂತಹ ಅನೇಕ ಭಾಷೆಗಳಿದ್ದಾವೆ. ಆದಿವಾಸಿಗಳ ಬುಡಕಟ್ಟು ಜನಾಂಗಗಳು ತಮ್ಮದೇ ಆದ ಭಾಷೆ ಮತ್ತು ಸಂಸ್ಕೃತಿಯೊಂದಿಗೆ ಬಾಳುತ್ತಿದ್ದಾರೆ. ಮೂಲ ದ್ರಾವಿಡ ಭಾಷೆಯಿಂದ ಹುಟ್ಟಿದಂತಹ ಭಾಷೆಗಳು ದಕ್ಷಿಣ ಭಾರತದಲ್ಲಿ ಅಧಿಕೃತವಾಗಿರುತ್ತವೆ.  
ನಾವು ಭಾರತೀಯರಾಗಿ ಎಲ್ಲಾ ಭಾಷೆಗಳ ಬಾಂಧವ್ಯಗಳನ್ನು ಒಪ್ಪಿಕೊಂಡು ಬೆಳೆಸುತ್ತೇವೆ. ಕನ್ನಡದೊಂದಿಗೆ ಹಿಂದಿ, ಉರ್ದು, ಮರಾಠಿ ಮೊದಲಾದ ಭಾಷೆಗಳ ಬಾಂಧವ್ಯಕ್ಕೂ ತೆಲುಗು ಭಾಷೆಯೊಂದಿಗಿರುವ ರಕ್ತ ಸಂಬಂಧಕ್ಕೂ ವ್ಯತ್ಯಾಸವಿದೆ ಅಷ್ಟರಲ್ಲಿಯೇ ತಮಿಳು, ಮಲಯಾಳಂ, ತುಳು ಭಾಷೆಗಳು ನಮ್ಮ ಕೌಟುಂಬಿಕ ಭಾಷೆಗಳು. ಕನ್ನಡಿಗರು ಎಲ್ಲಾ ಭಾಷೆಗಳೊಂದಿಗೆ ಸೌಹಾರ್ದ ಮತ್ತು ಬಾಂಧವ್ಯದಿಂದ ನಡೆದುಕೊಳ್ಳುತ್ತಾರೆ. ಆದರೆ ಕನ್ನಡದಿಂದ ಹುಟ್ಟಿಕೊಂಡ ತೆಲುಗು ಭಾಷೆಯನ್ನು ನಾವು ದೂರ ಮಾಡಲಾಗುವುದಿಲ್ಲವೆಂದು ವಿವಾದ ಎಬ್ಬಿಸಿದವರು ತಿಳಿದುಕೊಳ್ಳಬೇಕು.

Advertisement

0 comments:

Post a Comment

 
Top