ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘವು ಕಾರ್ಮಿಕ ಇಲಾಖೆಯ ಸಹಯೋಗದೊಂದಿಗೆ ಕೊಪ್ಪಳ ತಾಲೂಕಿನ ವಿವಿಧ ಕೋಳಿಫಾರಂಗಳಿಗೆ ದಾಳಿ ಮಾಡಿ ೧೦ ಬಾಲಕಾರ್ಮಿಕರನ್ನು ಪತ್ತೆ ಮಾಡಿದ್ದು, ಕೋಳಿ ಫಾರಂ ಮಾಲೀಕರ ಮೇಲೆ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕ ಬಸವರಾಜ್ ಅವರು ತಿಳಿಸಿದ್ದಾರೆ.
ಕಳೆದ ಹದಿನೈದು ದಿನಗಳಿಂದ ಈವರೆಗೆ ತಾಲೂಕಿನ ವಿವಿಧ ಕೋಳಿ ಫಾರಂ ಹಾಗೂ ವಾಣಿಜ್ಯ ಮಳಿಗೆಗಳಲ್ಲಿ ಕೈಗೊಂಡ ಬಾಲಕಾರ್ಮಿಕ ಶೋಧ ಕಾರ್ಯದಲ್ಲಿ ಒಟ್ಟು ೧೦ ಬಾಲಕಾರ್ಮಿಕರನ್ನು ಪತ್ತೆ ಮಾಡಲಾಗಿದೆ. ತಾಲೂಕಿನ ಅಬ್ಬಿಗೇರಿಯ ಹೋಬಳ ಪೌಲ್ಟ್ರಿ ಫಾರಂ, ಬೋಡಾ ಪೌಲ್ಟ್ರಿ ಫಾರಂ, ಇಂದರಗಿಯ ಶಶಿಧರ ಪೌಲ್ಟ್ರಿ ಫಾರಂ ಹಾಗೂ ಕೆರೆಹಳ್ಳಿಯ ಮಾಣಿಕ್ಯಂ ಪೌಲ್ಟ್ರಿ ಫಾರಂ ನಲ್ಲಿ ಕೆಲಸ ಮಾಡುತ್ತಿದ್ದ ಒಟ್ಟು ೧೦ ಬಾಲಕಾರ್ಮಿಕರನ್ನು ಪತ್ತೆ ಮಾಡಲಾಗಿದ್ದು, ಜಿಲ್ಲಾಧಿಕಾರಿಗಳ ಸೂಚನೆಯಂತೆ ಮಾಲೀಕರ ವಿರುದ್ಧ ಕ್ರಮ ಕೈಗೊಂಡು, ಮಕ್ಕಳ ಪುನರ್ವಸತಿಗೆ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ಬಾಲಕಾರ್ಮಿಕರನ್ನು ನೇಮಿಸಿಕೊಳ್ಳದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ದಾಳಿ ತಂಡದಲ್ಲಿ ಬಾಲಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕ ಬಸವರಾಜ, ಕ್ಷೇತ್ರಾಧಿಕಾರಿ ವೀರಣ್ಣ ಕುಂಬಾರ, ಮಾರುತಿ ನಾಯ್ಕರ್ ಭಾಗವಹಿಸಿದ್ದರು.
0 comments:
Post a Comment