PLEASE LOGIN TO KANNADANET.COM FOR REGULAR NEWS-UPDATES

ನಿಯೋಜಿತ ಕೊಪ್ಪಳ ಮೆಡಿಕಲ್ ಕಾಲೇಜ್ ಪ್ರಾಧ್ಯಾಪಕ ಹುದ್ದೆಗಳ ನೇಮಕಾತಿಯಲ್ಲಿ ಮೀಸಲಾತಿ ಅನ್ಯಾಯ
ಕೊಪ್ಪಳ, ಫೆ. ೨೨: ದಿ.೦೩-೦೨-೧೪ರಂದು ಇಲಾಖೆಯ ಪ್ರಕಟಣೆಗೆ ಸಂಬಂಧಿಸಿದಂತೆ ಗಮನ ಸೆಳೆಯುವದೇನೆಂದರ್ ಗುಲಬರ್ಗಾ ಮೆಡಿಕಲ್ ಕಾಲೇಜಿಗೆ ೨೫% ಮೀಸಲಾತಿ ದೊರಕಿದೆ. ಆದರೆ ಕೊಪ್ಪಳದ ಮೆಡಿಕಲ್ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೋಫೆಸರ್ ಹುದ್ದೇಗೆ ಮಾತ್ರ ಮೀಸಲಾತಿ ನೀಡಿ (ಅಂದರೆ ೨೫%) ಇನ್ನೂ ೫೦% ಮೀಸಲಾತಿ ನೀಡಲಾಗಿಲ್ಲ ಹೈ.ಕ ಹೊರಗಿನವರಿಗೆ ೨೫% ಮೀಸಲಾತಿ ನೀಡಿ ಹೈ.ಕ.ದವರಿಗೆ ೨೫% ನೀಡಿ ಭಾರಿ ಅನ್ಯಾಯ ಮಾಡಲಾಗಿದೆ.
ಇದನ್ನು ಹೈದ್ರಾಬಾದ ಕರ್ನಾಟಕ ಹೋರಾಟ ಸಮಿತಿ ತುಂಬ ಗಂಭೀರವಾಗಿ ಪರಿಗಣಿಸಿ ಖಂಡಿಸುತ್ತದೆ.
ವೈದ್ಯಕೀಯ ಶಿಕ್ಷಣ ಇಲಾಖೆಯ ಸಚಿವರಾದ ಡಾ- ಶರಣಪ್ರಕಾಶ ಪಾಟೀಲ್ ಅವರೊಂದಿಗೆ ಪೋನಿನಲ್ಲಿ ಮಾತಾಡಿ ಈ ಅನ್ಯಾಯ ಸರಿಪಡಿಸಲು ಒತ್ತಾಯಿಸಲಾಗಿದೆ. ಆದರೆ ಅವರು ಇಲಾಖೆಯ ಕಡೆ ಬೆರಳು ಮಾಡಿ ತೋರಿಸುತ್ತಿದ್ದಾರೆ. ಈ ಅನ್ಯಾಯವನ್ನು ಕೂಡಲೇ ಸರಿಪಡಸಿದ್ದರೆನೇಮಕಾತಿ ತಡೆ ಹಿಡಿಯಲು ಒತ್ತಾಯಿಸಿ ಪ್ರತಿಭಟಿಸಲಾಗುವುದು ಅಲ್ಲದೆ ನ್ಯಾಯಾಂಗಕ್ಕೆ ಮೊರೆ ಹೋಗಲಾಗುವದು. ಎಂದು ಹೈ.ಕಾ. ಹೋರಾಟ ಸಮಿತಿ ಅಧ್ಯಕ್ಷರಾದ ಎಚ್.ಎಸ್.ಪಾಟೀಲ್ ಹಾಗೂ ಕಾರ್ಯದರ್ಶಿಗಳಾದ ಅಲ್ಲಮಫ್ರಭು ಬೆಟ್ಟದೂರು ತಿಳಿಸಿದ್ದಾರೆ.

Advertisement

0 comments:

Post a Comment

 
Top