ಜಿಲ್ಲೆಯ ಕುಷ್ಟಗಿ ತಾಲೂಕಿನ ಮೇಣದಾಳ ಗ್ರಾಮದ ಬೇಲಿಯಲ್ಲಿ ಕಳೆದ ೨೦೧೩ ರ ನವಂಬರ್-೦೬ ರಂದು ಅನಾಥ ನವಜಾತು ಗಂಡು ಶಿಶು ಪತ್ತೆಯಾಗಿದ್ದು, ಇದುವರೆಗೂ ಯಾರೂ ಸಂಪರ್ಕಿಸಿಲ್ಲ. ಮಗುವಿನ ಕುರಿತು ಇಲಾಖೆಯನ್ನು ಸಂಪರ್ಕಿಸಲು ಸಂಬಂಧಪಟ್ಟ ಪಾಲಕರು/ಪೋಷಕರಿಗೆ ಸರಕಾರಿ ಬಾಲಕರ ಬಾಲಮಂದಿರದ ಅಧೀಕ್ಷಕರು ೬೦ ದಿನಗಳ ಗಡುವು ನೀಡಿದ್ದಾರೆ.
ಈ ಮಗು ೩ ತಿಂಗಳದ್ದಾಗಿದ್ದು, ಸಾದ ಕಪ್ಪು (ಕಪ್ಪು ಮಿಶ್ರಿತ ಸಾಧಾರಣ ಮೈ ಬಣ್ಣ), ೨.೫ ಕೆ.ಜಿ. ತೂಕ ಹೊಂದಿರುತ್ತದೆ. ಒಂದು ವೇಳೆ ೬೦ ದಿನಗಳ ಒಳಗಾಗಿ ಯಾರೂ ಸಂಪರ್ಕ ಮಾಡದೇ ಇದ್ದಲ್ಲಿ ಮಗುವನ್ನು ಕಾನೂನು ಪ್ರಕಾರ ದತ್ತು ಎಂದು ಘೋಷಣೆ ಮಾಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ, ಕೊಪ್ಪಳ ಮೊ.೯೮೮೦೧೨೯೨೨೭ ಕ್ಕೆ ಸಂಪರ್ಕಿಸಬಹುದಾಗಿದೆ .
0 comments:
Post a Comment