PLEASE LOGIN TO KANNADANET.COM FOR REGULAR NEWS-UPDATES

 ವಿಶ್ವಗುರು ಬಸವೇಶ್ವರ ಚಾರಿಟೇಬಲ್ ಟ್ರಸ್ಟ್‌ನ ಮಾಸಿಕ ಕಾರ್ಯಕ್ರವಾದ ೪೦ ನೇ ಶರಣ ಹುಣ್ಣಿಮೆಕಾರ್ಯಕ್ರಮ ಹಾಗೂ ಶಿವಯೋಗಿ ಸಿದ್ದರಾಮೇಶ್ವರರ ಜಯಂತಿಯನ್ನು ದಿನಾಂಕ : ೧೬-೦೧-೨೦೧೪ ಗುರುವಾರದಂದು ಸಂಜೆ:೬.೩೦ ಕ್ಕೆ ಹುಡ್ಕೋಕಾಲೋನಿಯಲ್ಲಿ  ಕಾರ್ಯಕ್ರಮ ಜರುಗಲಿದೆ.
   ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸಕಾರಗಿ ಹೊಸಪೇಟೆ ಆಕಾಶವಾಣಿಯ ಪ್ರಸಾರ ನಿರ್ವಾಹಕರಾದ      ಮಂಜುನಾಥ ಡೊಳ್ಳಿನ್’ ರವರು ಶಿವಯೋಗಿ ಸಿದ್ದರಾಮೇಶ್ವರ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಅತಿಥಿಗಳಾಗಿ,  ಹುಲಗಪ್ಪ ಕಟ್ಟಿಮನಿ ಅಧ್ಯಕ್ಷರು ಮಾಸ್ತಿ ಪಬ್ಲಿಕ್ ಸ್ಕೂಲ್ ಕೊಪ್ಪಳ ಇವರು ಆಗಮಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಸಂಗಮೇಶ ಡಂಬಳ್ ಮಾಜಿ ಅಧ್ಯಕ್ಷರು ಪಿ.ಎಲ್.ಡಿ ಬ್ಯಾಂಕ್ ಕೊಪ್ಪಳ ವಹಿಸಲಿದ್ದು ವಚನ ಪಠಣವನ್ನು ಕುಮಾರ|| ರಾಮು ಪೂಜಾರರವರು ಮಾಡಲಿದ್ದಾರೆ. ಕಾರಣ ಎಲ್ಲಾ ನಾಗರಿಕ ಬಂಧುಗಳು ಆಗಮಿಸಿ ಕಾರ್ಯಕ್ರಮವನ್ನು ಯಶ್ವಸಿಗೊಳಿಸಬೇಕಾಗಿ ವಿನಂತಿಸಿ ಟ್ರಸ್ಟ್‌ನ  ರಾಜೇಶ್ ಸಸಿಮಠರವರು  ತಿಳಿಸಿದ್ದಾರೆ. 

Advertisement

0 comments:

Post a Comment

 
Top