ಕೊಪ್ಪಳ : ನಗರದ ಸರಸ್ವತಿ ವಿದ್ಯಾಮಂದಿರದ ಪ್ರಾಥಮಿಕ ಪ್ರೌಢಶಾಲೆಯಲ್ಲಿ ಪಂಡಿತ್ ಜವಾಹರ್ ಲಾಲ್ ನೆಹರೂರವರ (ಮಕ್ಕಳ ದಿನಾಚರಣೆ) ಜನ್ಮದಿನಾಚರಣೆ ಯಶಸ್ವಿಯಾಗಿ ನೆರವೇರಿತು ಕಾರ‍್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಹಿರಿಯ ರಂಗಭೂಮಿ ಕಲಾವಿದೆ ಸರೋಜಮ್ಮ ದುತ್ತರಗಿ , ಈಟಿವಿ ಜಿಲ್ಲಾ ವರದಿಗಾರ ಶರಣಪ್ಪ ಬಾಚಲಾಪೂರ ಕಾಂಗ್ರೆಸ್ ಮುಖಂಡ ಮುನೀರ್ ಸಿದ್ದಿಖಿ ಆಗಮಿಸಿದ್ದರು. ಸಂಸ್ಥೆಯ ಕಾರ‍್ಯದರ್ಶಿ ಆರ್.ಎಚ್.ಅತ್ತನೂರ ಹಾಗೂ ಶಾಲೆಯ ಎಲ್ಲಾ ಶಿಕ್ಷಕ ವೃಂದ ,ಮಕ್ಕಳು ಭಾಗವಹಿಸಿದ್ದರು.
ಆರಂಭದಲ್ಲಿ ಚಾಚಾ ನೆಹರೂರವ ಭಾವಚಿತ್ರಕ್ಕೆ ಹಿರಿಯ ಕಲಾವಿದೆ ಸರೋಜಮ್ಮ ದುತ್ತರಗಿ ಪೂಜೆ ನೆರವೇರಿಸಿ ಮಾತನಾಡಿ ಇಂದಿನ ಅಧುನಿಕ ಸಮಾಜದಲ್ಲಿ ಕಲೆ,ಸಾಹಿತ್ಯದ ಅರಿವು ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡುವ ಅಗತ್ಯವಿದೆ. ಆ ದಿಸೆಯಲ್ಲಿ ಎಲ್ಲಾ ಶಿಕ್ಷಕವೃಂದ ಮಕ್ಕಳಲ್ಲಿ ಕಲೆ,ಸಾಹಿತ್ಯ, ಸಂಸ್ಕೃತಿಯಂತಹ ಅನೇಕ ವಿಚಾರಗಳನ್ನು ಹೊರಹೊಮ್ಮಿಸುವ ಕೆಲಸ ಮಾಡಬೇಕು ಎಂದು ಶಿಕ್ಷಕರಿಗೆ ಕಿವಮಾತು ಹೇಳಿದರು.
ಈ ಸಂದರ್ಭದಲ್ಲಿ ಶರಣಪ್ಪ ಬಾಚಲಾಪೂರ ಮಾತನಾಡಿ ಇಂದಿನ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣದ ಜೊತೆಗೆ,ಒಳ್ಳೆ ಸಂಸ್ಕಾರ ಕೊಡುವುದು ಬಹಳ ಮುಖ್ಯವಾಗಿದೆ. ಆ ನಿಟ್ಟಿನಲ್ಲಿ ಈ ಸಂಸ್ಥೆ ಮಾಡುತ್ತಿರುವ ಕಾರ‍್ಯಗಳು ಶ್ಲಾಘನೀಯ. ಇನ್ನೂ ಹೆಚ್ಚಿನ ದಿಶೆಯಲ್ಲಿ ಈ ಸಂಸ್ಥೆ ಶ್ರಮಿಸಲಿ ಎಂದು ಹೇಳಿದರು. ಮುನೀರ್ ಸಿದ್ದಿಖಿ ಸಹ ಮಾತನಾಡಿದರು. ಈ ಸಂದರ್ಭದಲ್ಲಿ ಸಂಸ್ಥೆಯವತಿಯಿಂದ ಸರೋಜಮ್ಮ ದುತ್ತರಗಿಯವರಿಗೆ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಕಾರ‍್ಯಕ್ರಮದಲ್ಲಿ ಮಕ್ಕಳು,ಶಿಕ್ಷಕರು ಚಾಚಾ ನೆಹರು ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು. ಮಕ್ಕಳಿಂದ ಒಂದು ಕಿರು ನಾಟಕ ನಡೆಯಿತು.
ಕಾರ‍್ಯಕ್ರಮದಲ್ಲಿ ಆಶಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಶಿವಕುಮಾರ ಪಾಟೀಲ್ ನಿರೂಪಿಸಿದರು. ಆನಂದ ಡಿ.ಸ್ವಾಗತಿಸಿದರು. ಕೊನೆಯಲ್ಲಿ ಶಿವಲಿಲಾ ಬೆನಕಟ್ಟಿ ವಂದಿಸಿದರು.
0 comments:
Post a Comment