: ಕೊಪ್ಪಳ ನಗರಸಭೆಯಿಂದ ಪ್ರಸಕ್ತ ಸಾಲಿನ ’ನಗರೋತ್ಥಾನ’ ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಯೋಜನೆ ಹಂತ- ೨ ರಲ್ಲಿ ನಗರದ ವಿವಿಧ ವಾರ್ಡ್‌ಗಳಲ್ಲಿ ಸುಮಾರು ೩೦ ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಣ್ಣ ನೀರಾವರಿ ಸಚಿವ ಶಿವರಾಜ್ ಎಸ್ ತಂಗಡಗಿ ಅವರು ಸೋಮವಾರ ಶಂಕುಸ್ಥಾಪನೆ ಹಾಗೂ ಭೂಮಿಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ಕೊಪ್ಪಳ ನಗರಸಭೆ ಕಾರ್ಯಾಲಯ ಆವರಣದಲ್ಲಿ ಏರ್ಪಡಿಸಲಾಗಿದ್ದ ಶಂಕುಸ್ಥಾಪನೆ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕೊಪ್ಪಳ ನಗರದಲ್ಲಿ ಯುಜಿಡಿ ಕಾಮಗಾರಿ, ರಸ್ತೆ ಅಭಿವೃದ್ಧಿ, ೨೪*೭ ಕುಡಿಯುವ ನೀರಿನ ಕಾಮಗಾರಿ ಸೇರಿದಂತೆ ಹಲವಾರು ಬೃಹತ್ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಇದೀಗ ನಗರೋತ್ಥಾನ ಯೋಜನೆಯಡಿ ಕೊಪ್ಪಳ ನಗರದಲ್ಲಿ ೩೦ ಕೋಟಿ ರೂ. ಗಳ ವೆಚ್ಚದಲ್ಲಿ ನಗರದ ಒಟ್ಟು ೨೪ ವಾರ್ಡ್‌ಗಳಲ್ಲಿ, ಸಿಸಿ ರಸ್ತೆ, ಚರಂಡಿ ನಿರ್ಮಾಣ ಮುಂತಾದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ಇದೇ ರೀತಿ ಜಿಲ್ಲೆಯ ಗಂಗಾವತಿ, ಕುಷ್ಟಗಿ ಮತ್ತು ಯಲಬುರ್ಗಾ ಪಟ್ಟಣಗಳಲ್ಲಿಯೂ ನಗರೋತ್ಥಾನ ಯೋಜನೆಯ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು. ಕಾಮಗಾರಿಗಳನ್ನು ತ್ವರಿತವಾಗಿ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವ ಶಿವರಾಜ್ ಎಸ್. ತಂಗಡಗಿ ಅವರು ಹೇಳಿದರು.
ಕೊಪ್ಪಳ ನಗರದ ವಾರ್ಡ್ ಸಂಖ್ಯೆ ೧ ರಲ್ಲಿ ಕಾತರಕಿ ರಸ್ತೆಯಿಂದ ಹುಲಿಕೆರೆ, ಸಿರಸಪ್ಪಯ್ಯನ ಓಣಿಯಲ್ಲಿ ೪೧ ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ, ವಾರ್ಡ್ ಸಂಖ್ಯೆ ೩ ರಲ್ಲಿ ೩೨೯. ೬೬ ಲಕ್ಷ ರೂ. ವೆಚ್ಚದಲ್ಲಿ ಒಟ್ಟು ೦೪ ಕಾಮಗಾರಿ. ವಾರ್ಡ್ ಸಂಖ್ಯೆ ೦೪ ರಲ್ಲಿ ೫೦. ೫೯ ಲಕ್ಷ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿ. ವಾರ್ಡ್ ಸಂಖ್ಯೆ ೫ ರಲ್ಲಿ ೧೪. ೦೭ ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ. ವಾರ್ಡ್ ಸಂಖ್ಯೆ ೬ ರಲ್ಲಿ ೧೦೮. ೯೨ ಲಕ್ಷ ರೂ. ವೆಚ್ಚದಲ್ಲಿ ಲಿಂಕ್ ರಸ್ತೆ ಹಾಗೂ ರಸ್ತೆ ಅಭಿವೃದ್ಧಿ. ವಾರ್ಡ್ ಸಂಖ್ಯೆ ೮ ರಲ್ಲಿ ೪೦. ೩೨ ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ. ವಾರ್ಡ್ ಸಂಖ್ಯೆ ೯ ರಲ್ಲಿ ೧೪ ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ. ವಾರ್ಡ್ ಸಂಖ್ಯೆ ೧೦ ರಲ್ಲಿ ೫೧. ೫೨ ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಅಬಿವೃದ್ಧಿ. ವಾರ್ಡ್ ಸಂಖ್ಯೆ ೧೧ ರಲ್ಲಿ ೧೦೫. ೩೭ ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ. ವಾರ್ಡ್ ಸಂಖ್ಯೆ. ೧೨ ರಲ್ಲಿ ೭೬. ೮೦ ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ. ವಾರ್ಡ್ ಸಂಖ್ಯೆ ೧೩ ರಲ್ಲಿ ೪೭ ಲಕ್ಷ ರೂ. ವೆಚ್ಚದಲ್ಲಿ ರಸ್ತೆ, ಚರಂಡಿ ಹಾಗೂ ಸಿ.ಡಿ. ನಿರ್ಮಾಣ ಕಾಮಗಾರಿ. ವಾರ್ಡ್ ಸಂಖ್ಯೆ ೧೪ ರಲ್ಲಿ ೫. ೭೪ ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ. ವಾರ್ಡ್ ಸಂಖ್ಯೆ ೧೫ ರಲ್ಲಿ ೩೯ ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಹಾಗೂ ಚರಂಡಿ ನಿರ್ಮಾಣ. ವಾರ್ಡ್ ಸಂಖ್ಯೆ ೧೬ ರಲ್ಲಿ ೩೬. ೪೦ ಲಕ್ಷ ರೂ.ಗಳ ಕಾಮಗಾರಿ. ವಾರ್ಡ್ ಸಂಖ್ಯೆ ೧೭ ರಲ್ಲಿ ೩೧ ಲಕ್ಷ ರೂ. ವಾರ್ಡ್ ಸಂಖ್ಯೆ ೧೯ ರಲ್ಲಿ ೧೪೧. ೪೦ ಲಕ್ಷ ರೂ. ವೆಚ್ಚದ ಕಾಮಗಾರಿ. ವಾರ್ಡ್ ಸಂಖ್ಯೆ ೨೦ ರಲ್ಲಿ ೭೭. ೦೭ ಲಕ್ಷ ರೂ. ವೆಚ್ಚದ ಕಾಮಗಾರಿ. ವಾರ್ಡ್ ಸಂಖ್ಯೆ ೨೧ ರಲ್ಲಿ ೫೯. ೮೪ ಲಕ್ಷ ರೂ. ವೆಚ್ಚದ ಕಾಮಗಾರಿ. ವಾರ್ಡ್ ಸಂಖ್ಯೆ ೨೨ ರಲ್ಲಿ ೯೨. ೬೦ ಲಕ್ಷ ರೂ., ವಾರ್ಡ್ ಸಂಖ್ಯೆ ೨೭ ರಲ್ಲಿ ೭೯. ೨೬ ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ. ವಾರ್ಡ್ ಸಂಖ್ಯೆ ೨೮ ರಲ್ಲಿ ೨೨೨. ೬೮ ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ. ವಾರ್ಡ್ ಸಂಖ್ಯೆ ೨೯ ರಲ್ಲಿ ೩೦. ೩೩ ಲಕ್ಷ ರೂ. ವೆಚ್ಚದ ಕಾಮಗಾರಿ. ವಾರ್ಡ್ ಸಂಖ್ಯೆ ೩೦ ರಲ್ಲಿ ೫೦ ಲಕ್ಷ ರೂ. ವೆಚ್ಚದ ಕಾಮಗಾರಿ ಹಾಗೂ ವಾರ್ಡ್ ಸಂಖ್ಯೆ ೩೧ ರಲ್ಲಿ ೯೭. ೯೨ ಲಕ್ಷ ರೂ. ವೆಚ್ಚದಲ್ಲಿ ರಸ್ತೆ. ಚರಂಡಿ ಹಾಗೂ ಸಿ.ಡಿ. ನಿರ್ಮಾಣ ಕಾಮಗಾರಿಯನ್ನು ನಗರೋತ್ಥಾನ ಯೋಜನೆಯಡಿ ಹಮ್ಮಿಕೊಳ್ಳಲಾಗಿದೆ ಎಂದು ನಗರಸಭೆ ಪ್ರಭಾರಿ ಪೌರಾಯುಕ್ತ ಮಂಜುನಾಥ್ ಅವರು ಕಾಮಗಾರಿಯ ವಿವರಗಳನ್ನು ನೀಡಿದರು.
ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ನಗರಸಭೆ ಅಧ್ಯಕ್ಷೆ ಲತಾ ಸಂಡೂರ, ಉಪಾಧ್ಯಕ್ಷ ಅಮ್ಜದ್ ಪಟೇಲ್, ಜಿಲ್ಲಾಧಿಕಾರಿ ಕೆ.ಪಿ. ಮೋಹನ್‌ರಾಜ್, ಪ್ರಭಾರಿ ಪೌರಾಯುಕ್ತ ಮಂಜುನಾಥ್, ಮಾಜಿ ಶಾಸಕ ಕೆ. ಬಸವರಾಜ್ ಹಿಟ್ನಾಳ್ ಸೇರಿದಂತೆ ನಗರಸಭೆ ಆಡಳಿತ ಮಂಡಳಿಯ ವಿವಿಧ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನಂತರ ಸಚಿವರು, ಶಾಸಕರು ಹಾಗೂ ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷರು ಅಲ್ಲದೆ ನಗರಸಭೆಯ ಸದಸ್ಯರುಗಳೊಂದಿಗೆ ನಗರದ ವಿವಿಧ ವಾರ್ಡುಗಳಿಗೆ ಭೇಟಿ ನೀಡಿ, ನಗರೋತ್ಥಾನ ಯೋಜನೆಯಡಿ ಹಮ್ಮಿಕೊಳ್ಳಲಾದ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು. ಸಚಿವ ಶಿವರಾಜ್ ತಂಗಡಗಿ ಅವರು ನಗರದ ಅಂಬೇಡ್ಕರ್ ವೃತ್ತದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ನಮನ ಸಲ್ಲಿಸಿದರು. ಅಲ್ಲದೆ ಇದೇ ವಾರ್ಡ್‌ನ ಓಣಿಯಲ್ಲಿ ಸಂಚರಿಸಿ ಸಾರ್ವಜನಿಕರ ಕುಂದುಕೊರತೆಗಳ ಬಗ್ಗೆ ಮಾಹಿತಿ ಪಡೆದುಕೊಂಡು, ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
0 comments:
Post a Comment