ಅನಂತಕುಮಾರ, ಸದಾನಂದಗೌಡ, ಪ್ರಹ್ಲಾದ್ ಜೋಷಿ, ಈಶ್ವರಪ್ಪ ಸೇರಿ ಹಲವರ ಆಗಮನ
ಕೊಪ್ಪಳ,ಅ.೨೦: ಮೆಕ್ಕೆಜೋಳ, ಭತ್ತಕ್ಕೆ ಸೂಕ್ತ ಬೆಂಬಲ ಬೆಲೆ ಹಾಗೂ ಕಬ್ಬು ಬೆಳೆಗಾರರಿಗೆ ಏಕರೂಪ ರೀತಿಯ ಬೆಳೆ ಸೇರಿದಂತೆ ಕೃಷ್ಣ ಬಿ ಸ್ಕೀಂ ಮೂರನೇ ಹಂತದ ಕಾಮಗಾರಿ ಸೇರಿದಂತೆ ಸಿಂಗಟಾಲೂರು ಏತ ನೀರಾವರಿ ಯೋಜನೆ ಕಾಮಗಾರಿ ತ್ವರಿತಗತಿಯಲ್ಲಿ ಪ್ರಾರಂಭಸಲು ಒತ್ತಾಯಿಸಿ ಜಿಲ್ಲೆಯ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಇದೇ ದಿ. ೨೪ ರಂದು ಕೊಪ್ಪಳದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಂಗಣ್ಣ ಕರಡಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಕೊಪ್ಪಳ ಜಿಲ್ಲಾ ಬಿಜೆಪಿ ಪಕ್ಷದ ಜಿಲ್ಲಾ ವಕ್ತಾರ ಚಂದ್ರಶೇಖರ ಗೌಡ ಪಾಟೀಲ್ ಹಲಿಗೇರಿ ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿದ ಅವರು, ದಿ. ೨೪ ರಂದು ನಡೆಯಲಿರುವ ಪಕ್ಷದ ಬೃಹತ್ ಪ್ರತಿಭಟನಾ ರ‍್ಯಾಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ, ಪಕ್ಷದ ರಾಜ್ಯಾಧ್ಯಕ್ಷ ಪ್ರಹ್ಲಾದ್‌ಜೋಷಿ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ, ಮಾಜಿ ಸಚಿವರುಗಳಾದ ಲಕ್ಷ್ಮಣ ಸವದಿ, ಬಸವರಾಜ ಬೊಮ್ಮಾಯಿ, ವಿಧಾನ ಪರಿಷತ್ ಸದಸ್ಯರಾದ ಅಮರನಾಥ ಪಾಟೀಲ್, ಎಸ್.ಟಿ. ಮೊರ್ಚಾ ರಾಜ್ಯಾಧ್ಯಕ್ಷ ಸೋಮಲಿಂಗಪ್ಪ, ವಿಧಾನ ಪರಿಷತ್ ಸದಸ್ಯ ಹಾಗೂ ಪಕ್ಷದ ರಾಜ್ಯ ಉಪಾಧ್ಯಕ್ಷ ಹಾಲಪ್ಪ ಆಚಾರ, ಸಂಸದ ಶಿವರಾಮಗೌಡ, ಶಾಸಕ ದೊಡ್ಡನಗೌಡ ಪಾಟೀಲ್, ಮಾಜಿ ಶಾಸಕ ಪರಣ್ಣ ಮನವಳ್ಳಿ, ಕೊಪ್ಪಳ ಲೋಕಸಭಾ ಕ್ಷೇತ್ರದ ಪಕ್ಷದ ಉಸ್ತುವಾರಿ ಎಚ್. ಗಿರೇಗೌಡ, ಮುಖಂಡ ದಡೇಸ್ಗೂರ ಬಸವರಾಜ್ ಸೇರಿದಂತೆ ಅನೇಕರು ರ‍್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ.
ರೈತರು ಬೆಳೆದ ಮೆಕ್ಕೆಜೋಳಕ್ಕೆ ೨೦೦೦ ರೂ. ನಿಗದಿಪಡಿಸಬೇಕು ಒಂದು ಎಕರೆಗೆ ಕನಿಷ್ಠ ೧೫ ಸಾವಿರ ಖರ್ಚಾಗುತ್ತದೆ ಅದರಂತೆ ಭತ್ತ ಗ್ರೇಡ್ ೧ಗೆ ೨೫೦೦ ಗ್ರೇಡ್ ೨ಗೆ ೨೦೦೦ ಸಾವಿರ ಬೆಂಬಲ ಬೆಲೆ ನಿಗದಿಪಡಿಸಬೇಕು ಕಬ್ಬು ಬೆಳೆಗಾರರಿಗೆ ಏಕರೂಪ ನೀಡಿ ಜಾರಿಗೊಳಿಸಿ ಅದಕ್ಕೆ ಸೂಕ್ತ ಬೆಂಬಲ ಬೆಲೆ ನಿಗದಿಪಡಿಸಬೇಕು ಭಾಗ್ಯ ನಗರದ ರೈಲ್ವೆ ಗೇಟ್ ೬೨ ಮತ್ತು ಕಿನ್ನಾಳ ರಸ್ತೆಯ ರೈಲ್ವೆ ಗೇಟ್ ೬೪ಕ್ಕೆ ಕೆಳಸೇತುವೆ ಮೇಲ್ ಸೇತುವೆ ನಿರ್ಮಾಣಕ್ಕೆ ಈ ಹಿಂದಿನ ನಮ್ಮ ಬಿಜೆಪಿ ಸರ್ಕಾರ ತಮ್ಮ ಪಾಲಿನ ಹಣ ಬಿಡುಗಡೆ ಮಾಡಿ ಅದಕ್ಕೆ ಚಾಲನೆ ಕೊಡಲು ಮುಂದಾಗಿತ್ತು. ಭೂಸ್ವಾಧೀನ ವಿಷಯದಲ್ಲಿ ಈಗಿನ ಕಾಂಗ್ರೆಸ್ ಸರ್ಕಾರ ನಿರ್ಲಕ್ಷ ಧೋರಣೆ ಬಿಟ್ಟು ಈ ಕಾಮಗಾರಿ ಪ್ರಾರಂಭಿಸಲು ಕಾಳಜಿ ವಹಿಸಬೇಕು.
ಸಿಂಗಟಾಲೂರ ಏತ ನೀರಾವರಿ ಕೊಪ್ಪಳ ತಾಲೂಕಿನಲ್ಲಿ ೧೭ ಕಿ.ಮೀ. ಮಂಜುರಾತಿ ನಮ್ಮ ಸರ್ಕಾರ ಮಾಡಿದ್ದು, ಅಳವಂಡಿ, ಬೆಟಗೇರಿ, ಬಹದ್ದೂರ ಬಂಡಿ ಭಾಗದಲ್ಲಿ ತ್ವರಿತ ಗತಿಯಲ್ಲಿ ಕಾಮಗಾರಿ ಪ್ರಾರಂಭಿಸಬೇಕು ಅಲ್ಲದೇ ಪಡಿತರ ಚೀಟಿ ಹಾಗೂ ಸಾಮಾಗ್ರಿ ವಿತರಣೆಯಲ್ಲಿ ತಾರತಮ್ಮ ಸರಿಪಡಿಸಬೇಕು. ವಿಧ್ಯಾರ್ಥಿಗಳ ಪ್ರವೇಶ ಹಾಗೂ ಪರೀಕ್ಷೆ ಸಂದssದಲ್ಲಿ ಆಧಾರ ಕಾರ್ಡ ಕಡ್ಡಾಯಗೊಳಿಸಿದ ಈಗಿನ ಸರ್ಕಾರಕ್ಕೆ ಸುಪ್ರೀಂ ಕೋರ್ಟಿನ ಆದೇಶ ಅನ್ವಯಿಸುವುದಿಲ್ಲವೊ ಹೇಗೆ ಎಂಬುದು ತಿಳಿಯದಂತಾಗಿದೆ. ಕೊಪ್ಪಳಕ್ಕೆ ಇಂಜಿನಿಯರಿಂಗ್ ಕಾಲೇಜು ಮಂಜೂರಾತಿ ಸೇರಿದಂತೆ ಜಿಲ್ಲೆಯಲ್ಲಿನ ವಿವಿಧ ಜನ ಉಪಯೋಗಿ ಯೋಜನೆಗಳಲ್ಲಿನ ಕಾಂಗ್ರೆಸ್ ಸರ್ಕಾರದ ತಾರತಮ್ಯದ ನೀತಿಯನ್ನು ಖಂಡಿಸಿ ದಿ. ೨೪ ರಂದು ಪಕ್ಷದ ರಾಷ್ಟ್ರೀಯ ಹಾಗೂ ರಾಜ್ಯದ ವರಿಷ್ಠರ ಸಮ್ಮುSದಲ್ಲಿ ಮತ್ತು ಪಕ್ಷದ ಜಿಲ್ಲಾಧ್ಯಕ್ಷ ಸಂಗಣ್ಣ ಕರಡಿ ಇವರ ನೇತೃತ್ವದಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನಾ ರ‍್ಯಾಲಿಯಲ್ಲಿ ಜಿಲ್ಲೆಯ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು, ರೈತರು, ಯುವಕರು, ಹಾಗೂ ಪಕ್ಷದ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ರ‍್ಯಾಲಿ ಯಶಸ್ವಿಗೊಳಿಸಬೇಕೆಂದು ಕೊಪ್ಪಳ ಜಿಲ್ಲಾ ಬಿಜೆಪಿ ಪಕ್ಷದ ಜಿಲ್ಲಾ ವಕ್ತಾರ ಚಂದ್ರಶೇಖರ ಗೌಡ ಪಾಟೀಲ್ ಹಲಿಗೇರಿ ತಿಳಿಸಿದ್ದಾರೆ.
0 comments:
Post a Comment