ದೀಪಾವಳಿಯು ಬೆಳಕಿನ ಹಬ್ಬವಾಗಿದ್ದು ಇದು ಮನೆ ಮತ್ತು ಮನದ ಕತ್ತಲೆಯನ್ನು ನಿವಾರಿಸಿ ಬೆಳಕನ್ನು ನೀಡುವ ಹಬ್ಬ, ಈ ಹಬ್ಬವು ಮಕ್ಕಳ ನವಿಲಿನೊಂದಿಗೆ ಅವರು ಬಳಸುವ ವಿವಿಧ ರೀತಿಯ ಪಟಾಕಿಗಳಿಂದ ಉಂಟಾಗುವ ಶಬ್ದದಿಂದ ಹೆಚ್ಚಿನ ಆನಂದ ಸಂತೋಷವನ್ನು ಪಡುತ್ತಾರೆ. ಇದರ ಜೊತೆಯಲ್ಲಿಯೆ ಹಿರಿಯರಿಗೆ ಕಿರಿ ಕಿರಿಯಾದರೆ ಮಕ್ಕಳ ಸಂತೋಷಕ್ಕೆ ಅಡ್ಡಿ ಪಡಿಸದೇ ತಾವ ಪಾಲ್ಗೊಳ್ಳುವುದು ಅನಧಿಕಾಲದಿಂದಲೂ ಬಂದಂಥಹ ಸಂಪ್ರದಾಯವಾಗಿರುತ್ತದೆ.
ಭಾರತೀಯರು ದೀಪಾವಳಿಯ ಹಬ್ಬವನ್ನು ದೇಶದಾದ್ಯಂತ ಅತೀ ವಿಜೃಂಭಣೆಯಿಂದ ಆಚರಿಸುತ್ತಾರೆ. ಆರೆ ಈ ಸಂತೋಷದ ಸಮಯದಲ್ಲಿ ಉಂಟಾಗುವ ಶಬ್ದ ಮಾಲಿನ್ಯ, ವಾಯು ಮಾಲಿನ್ಯ ಮತ್ತು ಘನ ತ್ಯಾಜ್ಯವು ವರ್ಷದಿಂದ ವರ್ಷಕ್ಕೂ ಹೆಚ್ಚಾಗುತ್ತದೆ. ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರವು ವಿವಿಧ ರೀತಿಯ ಕಾನೂನುಗಳನ್ನು ಹೊರಡಿಸಿರುತ್ತದೆ. ಮತ್ತು ಪೂರಕವಾಗಿ ಮಂಡಳಿಯು ಸಾರ್ವಜನಿಕರಲ್ಲಿ ಅದರಲ್ಲಿಯೂ ಮುಖ್ಯವಾಗಿ ಮಕ್ಕಳಿಗೆ ಅರಿವು ಮೂಡಿಸುವ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತದೆ.
ಬೆಳಕಿನ ಹಬ್ಬವಾದ ದೀಪಾವಳಿಯು ಪ್ರತಿ ವರ್ಷದಂತೆ ಈ ವರ್ಷವೂ ಆಚರಣೆಗೊಳ್ಳುತ್ತದೆ, ಕಳೆದ ಐದು ವರ್ಷಗಳ ದೀಪಾವಳಿ ಹಬ್ಬಗಳ ಆಚರಣೆಗಳ ಸಮಯದಲ್ಲಿ ಉಂಟಾದ ಅವಘಡಗಳನ್ನು ಅವಲೋಕಿಸಿದಾಗ ಒಂದಿಲ್ಲ ಒಂದು ಪ್ರದೇಶದಲ್ಲಿ ಪಟಾಕಿಗಳ ಸುಡುವಿಕೆಯಿಂದಾಗಿ ಅನೇಕರ ಬಾಳು ಅಂದಕಾರವಾಗಿರುವುದುಲ್ಲದೇ ಸಮೀಕ್ಷೆಯನ್ವಯ ಇಂತಹ ಅವಘಡಗಳ ಪ್ರಮಾಣವು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವುದು ನೋವಿನ ಸಂಗತಿಯಾಗಿರುತ್ತದೆ. ಇಂತಹ ಅಬ್ಬರದ ಅಪಾಯಕಾರಿ ಪಟಾಕಿಗಳು ನಾಗರಿಕರ ಶಾಂತಿ ಕದಡುವುದರೊಂದಿಗೆ ಪರಿಸರ ಮಾಲಿನ್ಯ ಹಾಗೂ ವಿಷಕಾರಿ ರಸಾಯನಿಕ ತ್ಯಾಜ್ಯದ ಸಮಸ್ಯೆಯನ್ನು ಉಲ್ಬಣಗೊಳಿಸುತ್ತದೆ.
ಇದರ ಜೊತೆಯಲ್ಲಿಯೇ ಶಬ್ದ ಮಾಲಿನ್ಯವನ್ನು ಪರಿಸರ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಪಟಾಕಿಗಳಿಗೆ ಸಂಬಂಧಿಸಿದಂತೆ ಹೊರಡಿಸಿದ ಮಾರ್ಗಸೂಚಿಯಂತೆ ೧೨೫ ಡೆಸಿಬಲ್ಸ ಅಥವಾ ೧೪೫ ಡೆಸಿಬಲ್ಸ ಗಿಂತ ಹೆಚ್ಚು ಶಬ್ದ ಮಾಲಿನ್ಯ ಉಂಟುಮಾಡುವ ಅದರಲ್ಲಿಯೂ ೪ ಮೀಟರ್ ಅಂತರದಲ್ಲಿ ಬಳಸುವುದನ್ನು ನಿಷೇದಿಸಲಾಗಿರುತ್ತದೆ. ಇದನ್ನು ಕಟ್ಟು ನಿಟ್ಟಾಗಿ ಪಾಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿರುತ್ತದೆ.
ಸರ್ವೋಚ್ಚ ನ್ಯಾಯಾಲಯವು ಪಟಾಕಿಗಳಿಗೆ ಸಂಬಂಧಿಸಿದಂತೆ ರಿಟ್ ಪಿಟಿಷನ್ (ಸಿ) ಸಂಖ್ಯೆ: ೭೨/೧೯೯೮ ರ ದಿ.೧೮-೦೭-೨೦೦೫ ರಂದು ಹಲವಾರು ನಿರ್ದೇಶನಗಳನ್ನು ಸಹ ನೀಡಿರುತ್ತದೆ. ಈ ಆದೇಶದನ್ವಯ ರಾತ್ರಿ ೧೦ ಗಂಟೆಯಿಂದ ಬೆಳಿಗ್ಗೆ ೬.೦೦ ಗಂಟೆಯೊಳಗೆ ಪಟಾಕಿಗಳ ಸ್ಪೋಟವನ್ನು ಸಂಪೂರ್ಣವಾಗಿ ನಿಷೇದಿಸಿರುತ್ತದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ದೀಪಾವಳಿ ಹಬ್ಬದ ಶುಭಾಷಯಗಳನ್ನು ಕೋರುತ್ತ, ದೀಪಾವಳಿ ಹಬ್ಬವನ್ನು ಸಡಗರ ಸಂಭ್ರಮ ಸಂತೋಷದಿಂದ ಆಚರಿಸುವಾಗ ಅಬ್ಬರದ ಅಪಾಯಕಾರಿ ಪಟಾಕಿಗಳನ್ನು ಬಳಸದೇ ನಾಗರಿಕರ ಹಾಗೂ ಸುತ್ತಮುತ್ತಲಿನ ಪರಿಸರದ ಶಾಂತತೆಯನ್ನು ಕದಡದೆ ಸರ್ಕಾರವು ಸಾರ್ವಜನಿಕ ಹಿತದೃಷ್ಟಿಯಿಂದ ನಿಗದಿಪಡಿಸಿದ ೧೨೫ ಡೆಸಿಬಲ್ಸಗಳಿಗಿಂತ ಕಡಿಮೆ ಪ್ರಮಾಣದ ಶಬ್ದದಿಂದ ಕೂಡಿದ ಪಟಾಕಿಗಳ ಬಳಕೆಯನ್ನು ಮಾತ್ರ ಮಾಡುವುದಲ್ಲದೇ ಕೇವಲ ಬೆಳಕು ಚೆಲ್ಲುವ ಮಿತಕಾರಿ ಪಟಾಕಿಗಳನ್ನು ಬಳಸಿ ಕುಟುಂಬದವರೊಂದಿಗೆ ಸಂತೋಷ ಹಂಚಿಕೊಳ್ಳಬೇಕು ಹಾಗೂ ದೀಪಾವಳಿ ಹಬ್ಬವು ಎಲ್ಲರ ಬಾಳಿನ ಅಂದಕಾರವನ್ನು ಹೊಡೆದೋಡಿಸಿ ಬೆಳಕನ್ನು ಚೆಲ್ಲಲಿ ಎಂದು ಪರಿಸರ ಅಧಿಕಾರಿ ಬಿ.ರುದ್ರೇಶ ಅವರು ತಿಳಿಸಿದ್ದಾರೆ.
0 comments:
Post a Comment