PLEASE LOGIN TO KANNADANET.COM FOR REGULAR NEWS-UPDATES

ಜಿಲ್ಲೆಯಾದ ಬಳಿಕ ನಗರವು ದಿನೇ-ದಿನೇ ಬೆಳಯುತ್ತಿದ್ದು, ಇತ್ತಿಚಿಗೆ ನಗರದಲ್ಲಿರುವ ಜಿಲ್ಲಾ ಆಸ್ಪತ್ರೆಯು ಜಿಲ್ಲಾಡಳಿತ ಭವನದ ಹತ್ತಿರ ಇರುವ ೨೫೦ ಹಾಸಿಗೆವುಳ್ಳ ಆಸ್ಪತ್ರೆಯ ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡಿದ್ದು, ಕೊಪ್ಪಳ ನಗರ ಹಾಗೂ ತಾಲೂಕಿನ ಗ್ರಾಮಸ್ಥರ ಅನುಕೂಲಕ್ಕಾಗಿ ಪ್ರತಿನಿತ್ಯ ನಿರಂತರ ನಗರ ಸಾರಿಗೆ ಸಂಚಾರದ ವ್ಯವಸ್ಥೆ ಕಲ್ಪಿಸಬೇಕು.

ಜಿಲ್ಲಾ ಆಡಳಿತ ಭವನ, ನೂತನ ಜಿಲ್ಲಾ ಆಸ್ಪತ್ರೆ ಸೇರಿದಂತೆ ನಗರ ಸುತ್ತ-ಮುತ್ತ ಐದಾರು ಕಿ.ಮೀ ವ್ಯಾಪ್ತಿಯೊಳಗೆ ನಗರ ಸಾರಿಗೆ ಬಸ್‌ಗಳು ಬಡ ಜನರಿಗೆ ದರ ಮತ್ತು ಸಮಯಕ್ಕೆ ಅನುಕೂಲವಾಗುವ ರೀತಿಯಲ್ಲಿ ಕ್ರಮಕೈಗೊಳ್ಳಬೇಕು.

ನಗರ ಸಂಚಾರಿ ಬಸ್‌ಗಳು ನಿಲ್ಲುವ ನಿಲ್ದಾಣಗಳನ್ನು ಗುರುತಿಸಿ ಅಲ್ಲಲ್ಲಿ ಆಯಾ ಬಸ್‌ಗಳ ಬರುವ ಸಮಯದ ಮಾಹಿತಿವುಳ್ಳ ಫಲಕಗಳನ್ನು ಹಾಕಬೇಕು. ಕೊಪ್ಪಳ ನಗರದ ಕೇಂದ್ರೀಯ ಬಸ್ ನಿಲ್ದಾಣದಲ್ಲಿ, ನಗರ ಸಾರಿಗೆ ಸಂಚಾರಿ ಬಸ್ ನಿಲ್ದಾಣಗಳಲ್ಲಿ, ಹಾಗೂ ನಗರ ಸಂಚಾರಿ ಬಸ್‌ಗಳಲ್ಲಿ ಅಪರಾಧ ತಡೆ ಮುಂಜಾಗೃತಿ ಕ್ರಮವಾಗಿ ಸಿ.ಸಿ., ಟಿವಿ ಕ್ಯಾಮರ್‌ಗಳನ್ನು ಕಡ್ಡಾಯವಾಗಿ ಅಳವಡಿಸಬೇಕು. ಮುಂತಾದ ಬೇಡಿಕೆಗಳನ್ನು ಈಡೇರಿಸಲು  ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟ ಜಿಲ್ಲಾ ಮಂಡಳಿ  ಆಗ್ರಹಿಸಿದೆ.
ನಿಯೋಗದಲ್ಲಿ ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಬಸವರಾಜ ಶೀಲವಂತರ, ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎ. ಗಫಾರ್,  ಕೆ.ಎಸ್.ಆರ್.ಟಿ.ಸಿ. ಸ್ಟಾಫ್ ಆಂಡ್ ವರ್ಕರ್‍ಸ್ ಯೂನಿಯನ್ ವಿಭಾಗೀಯ ಪ್ರಧಾನ ಕಾರ್ಯದರ್ಶಿ  ಎ.ಬಿ ದಿಂಡೂರ,  ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘ (ಎ.ಐ.ಟಿ.ಯು.ಸಿ. ಸಂಯೋಜಿತ), ಹಿರೇಬಗನಾಳ ಗ್ರಾಮ ಘಟಕದ ಅಧ್ಯಕ್ಷ ಮರಿಸ್ವಾಮಿ ಸಂಗಪ್ಪ ವಡ್ಡರ, ಎ.ಐ.ಟಿ.ಯು.ಸಿ ಮುಖಂಡರಾದ ಮಖಬೂಲ್ ರಾಯಚೂರ, ವೀರಕನ್ನಡಿಗ ಯುವಕ ಸಂಘದ ಅಧ್ಯಕ್ಷ ಶಿವಾನಂದ ಹೊದ್ಲೂರ, ಮುಖಂಡರಾದ ವೆಂಕಟೇಶ ತಿಮ್ಮಪ್ಪ ವಡ್ಡರ, ಜಾಫರಅಲಿ ದಫೇದಾರ ಮತ್ತಿತರರು ನಿಯೋಗದಲ್ಲಿ ಭಾಗವಹಿಸಿದ್ದರು.

Advertisement

0 comments:

Post a Comment

 
Top