ಈ ದೇಶದ ಪ್ರತಿ ಮಗುವಿಗೆ ಶಿಕ್ಷಣದ ಅವಶ್ಯಕತೆಯಿದೆ. ಎಲ್ಲರಿಗೂ ಉತ್ತಮವಾದ ಗುಣಾತ್ಮಕವಾದ ಶಿಕ್ಷಣ ದೊರೆತರೆ ದೇಶದ ಆರ್ಥಿಕ ಪರಸ್ಥಿತಿ ಸುಧಾರಿಸುತ್ತದೆ. ಅದಕ್ಕೆ ಪ್ರತಿಯೊಬ್ಬರು ಶಿಕ್ಷಣಕ್ಕೆ ಮೊದಲ ಆಧ್ಯತೆ ನೀಡಬೇಕು ಎಂದು ಶಾಸಕ ಇಕ್ಬಾಲ್ ಅನ್ಸಾರಿ ನುಡಿದರು.
ಅವರು ಇಂದು ಗಂಗಾವತಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕೊಪ್ಪಳ ತಾಲೂಕಿನ ಲೇಬಗೇರಿಯ ಸರಕಾರಿ ಪ್ರೌಢಶಾಲೆಯ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡುತ್ತಿದ್ದರು.
ವಿದ್ಯಾರ್ಥಿಗಳು ಭಾಷಾ ವಿಷಯದ ಜೊತೆ ವಿಜ್ಞಾನ, ಗಣಿತದಂತಹ, ವಿಷುಯಗಳಲ್ಲಿ ಹೆಚ್ಚಿನ ಪ್ರಾವಿಣ್ಯತೆ ಸಾಧಿಸಿದರೆ ಭವಿಷ್ಯ ರೂಪಿಸಿಕೊಳ್ಳಲುಸಾಧ್ಯ. ವಿದ್ಯಾರ್ಥಿಗಳು ತಂದೆ ತಾಯಿಗಳ ಆಸೆಯಂತೆ ಚೆನ್ನಾಗಿ ಓದಿ ಅವರ ಪಾಲಿಗೆ ಆಸ್ತಿಯಾಗಬೇಕು. ವಿಶೇಷವಾಗಿ ಹೆಣ್ಣುಮಕ್ಕಳು ಹೆಚ್ಚು ಶಿಕ್ಷಣ ಪಡೆದರೆ ಸಮಾಜಕ್ಕೆ ದೇಶಕ್ಕೆ ಒಳ್ಳೆಯದಾಗುತ್ತದೆ.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿ.ಪಂ. ನ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧಕ್ಷ ಅಮರೇಶ ಕುಳಗಿ, ಜಿ.ಪಂ ಸದಸ್ಯ ಶ್ರಿಮತಿ ವನಿತಾ ಗಡಾದ, ತಾ.ಪಂ ಸದಸ್ಯ ಬಾಳಪ್ಪ ಬೂದಗುಂಪಿ, ಎ.ಪಿ.ಎಂ.ಸಿ ಅಧ್ಯಕ್ಷ ಡಿ. ಮಲ್ಲಣ್ಣ ಮಾತನಾಡಿದರು. ಕಾರ್ಯಕ್ರಮದಲ್ಲಿ ಬಿಇಓ ಬಸವರಾಜಯ್ಯ ಲೇಬಗೇರಿ ಗ್ರಾ.ಪಂ ಉಪಾಧ್ಯಕ್ಷ ನಾಗರಾಜ ತೋಟದ, ಸದಸ್ಯರಾದ ಯಲ್ಲಪ್ಪ ಗೊಲ್ಲರ, ಶರಣಪ್ಪ ಹರಿಜನ, ಶ್ರೀಮತಿ ದೇವಮ್ಮ ಗುರಿಕಾರ, ಶ್ರೀಮತಿ ಅನ್ನಪೂರ್ಣಮ್ಮ ತಳವಾರ, ಮುಖಂಡರುಗಳಾದ ಮಲ್ಲೇಶಪ್ಪ ಗೂಮಗೇರಿ, ಸಂಗಮೇಶ ಬಾದವಾಡಗಿ, ಬಸವಕುಮಾರ ಪಟ್ಟಣಶೆಟ್ಟರ, ಅಂದಪ್ಪ ಮರೇಬಾಳ, ಮೈಲಾರಪ್ಪ ನಿಟ್ಟಾಲಿ ಉಪಸ್ಥಿತರಿದ್ದರು,
ಗ್ರಾ,ಪಂ ಅಧ್ಯಕ್ಷ ರಾಮಣ್ಣ ಚೌಡಕಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಎ.ಪಿ.ಅಂಗಡಿ ಸ್ವಾಗತಿಸಿದರು, ಮುಖ್ಯೋಪಾದ್ಯಾಯ ಮಹಾಂತಯ್ಯ ಸೊಪ್ಪಿಮಠ ಪ್ರಾಸ್ತಾವಿಕ ಮಾತನಾಡಿದರು. ವೀರಣ್ಣ ಕುಂಬಾರ ನಿರೂಪಿಸಿದರು, ಸುನಿಲ್ ನವಲೆ ವಂದಿಸಿದರು, ಈ ಸಂದರ್ಭದಲ್ಲಿ ಪ್ರೌಢಶಾಲೆಗೆ ಭೂದಾನ ಮಾಡಿದ ಬಸವರಾಜ ಪೂಜಾರ ರಾಮಣ್ಣ ಪೂಜಾರ ಅವರನ್ನು ಸನ್ಮಾನಿಸಲಾಯಿತು.
0 comments:
Post a Comment