ತಿಳಿಸಿದೆ.
ಅಂದು ಸಾಲುಮರದ ತಿಮ್ಮಕ್ಕನವರು ತಾಲೂಕಿನ ವಿವಿಧ ಶಾಲೆಗಳಲ್ಲಿ ಗಿಡ ನೆಡಲಿದ್ದಾರೆ ಮತ್ತು ಮಕ್ಕಳೊಂದಿಗೆ ಪರಿಸರದ ಕುರಿತು ಸಂವಾದ ಮಾಡಲಿದ್ದಾರೆ. ನಂತರ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಸಾಲುಮರದ ತಿಮ್ಮಕ್ಕನವರಿಗೆ ಸೂಕ್ತ ಗೌರವ ಧನ ನೀಡಲು ಶಿಕ್ಷಕರ ಕಲಾವೃಂದ 'ಮೈಸೂರ ಹುಲಿ ಟಿಪ್ಪು ಸುಲ್ತಾನ' ಎಂಬ ಐತಿಹಾಸಿಕ ನಾಟಕವನ್ನು ಪ್ರದರ್ಶನ ಮಾಡಲಿದ್ದಾರೆ. ಶಿಕ್ಷಕರ ಕಲಾವೃಂದವು ಈಗಾಗಲೇ ಜಿಲ್ಲೆಯಲ್ಲಿ ಹಲವು ಐತಿಹಾಸಿಕ, ಪೌರಾಣಿಕ ನಾಟಕ ಪ್ರದರ್ಶನ ಮಾಡಿ ಅಂಧ-ಅನಾಥ ಮಕ್ಕಳ, ರಂಗ ಭೂಮಿಯ ಹಿರಿಯ ಕಲಾವಿದರಿಗೆ ಸಹಾಯ ಮಾಡಿದೆ. ಈ ಬಾರಿ ಪರಿಸರ ಜಾಗೃತಿ ಮೂಡಿಸುವುದರ ಜೊತೆಗೆ ತಿಮ್ಮಕ್ಕನವರಿಗೆ ಸೂಕ್ತ ಗೌರವ ಧನ ನೀಡಲು ತೀರ್ಮಾನಿಸಿದೆ. ಆದ್ದರಿಂದ ಸಾರ್ವಜನಿಕರು ಸಹಿತ ಸಹಾಯ ಧನ ನೀಡಬಹುದು. ಸಹಾಯ ಮಾಡಲಿಚ್ಚಿಸುವವರು ಶಿಕ್ಷಕರ ಪತ್ತಿನ ಸಂಘದಲ್ಲಿ ಇಲ್ಲವೆ ಆದಿನ (ಸಪ್ಟಂಬರ ೦೫) ಖುದ್ದಾಗಿ ನೀಡಬಹುದಾಗಿದೆ. ಸಂಪರ್ಕ : ಪ್ರಾಣೇಶ ಪೂಜಾರ - ೯೯೦೨೮೯೩೬೭೧, ಸುರೇಶ ಅರಕೇರಿ ಅಧ್ಯಕ್ಷರು ಶಿಕ್ಷಕರ ಪತ್ತಿನ ಸಹಕಾರ ಸಂಘ - ೯೯೦೨೧೩೧೯೦೮,
0 comments:
Post a Comment