PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ :- ೧೭/೦೮/೨೦೧೩ ರಿಂದ ೧೮/೦೮/೨೦೧೩ ರ ವರೆಗೆ ಬಳ್ಳಾರಿಯ ಅಂಬಾಬವಾನಿ ಸಂಭಾಗಣದಲ್ಲಿ ಗೊಜು ರ್‍ಯೂ ಕರಾಟೆ ಅಸೋಸಿಯಷನ ಆಫ್ ಕರ್ನಾಟಕ ರವರು ನಡೆಸಿದ ದಕ್ಷಿಣ ಭಾರತ ರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಕೊಪ್ಪಳದ ನ್ಯೂಸ್ಟಾರ್ ಕರಾಟೆ ಕ್ಲಬ್‌ನ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿ ೩ ಪ್ರಥಮ ಸ್ಥಾನ ೨ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. 
ಕತಾ (ಯುದ್ದನೃತ್ಯ) ಕಿರಿಯರ ವಿಭಾಗದಲ್ಲಿ ರುಕ್ಮುಣಿ.ಡಿ.ಬಂಗಾಳಿಗಿಡ ಪ್ರಥಮ ಸಥಾನ ಪಡೆದಿದ್ದಾಳೆ ಅದೇ ರೀತಿ ಕುಮಿತೆ ( ಪೈಟ ) ೪೧ ರಿಂದ ೪೬ ಕೆಜಿ ಕಿರಿಯ ವಿಭಾಗದಲ್ಲಿ ಸೈಯದ್ ಆಫ್ರಿನ್ ಪ್ರಥಮ ಸ್ಥಾನವನ್ನು ಪಡೆದಿದ್ದಾಳೆ. ಕುಮಿತೆಯ (ಪೈಟ್) ೫೬-೬೧ ಕೆಜಿ ಹಿರಿಯ ವಿಭಾಗದಲ್ಲಿ ಮುತ್ತುರಾಜ ಬಂಡಿ ಪ್ರಥಮ ಸ್ಥಾನ ಪಡೆದಿದ್ದಾಳೆ. ಅದೇ ರೀತಿಯಾಗಿ ರಾಮು ಭಜಂತ್ರಿ ಮತ್ತು ಹನುಮಂತ.ಡಿ ಕುಮಿತೆಯ (ಪೈಟ್) ೪೧ ರಿಂದ ೪೬ ಕೆ ಜಿ ಮತ್ತು ೪೭-೫೨ ಕೆ ಜಿ ವಿಭಾಗದಲ್ಲಿ ತೃತೀಯ ಸ್ಥಾನವನ್ನು ಪಡೆದಿದ್ದಾಳೆ. ರಮೆಶ.ಡಿ, ಚಂದ್ರುಶೇಖರ, ಸುನೀಲ ಮರಾಠಿ, ಸ್ಪರ್ಧೆಯಲ್ಲಿ ಭಾಗವಹಿಸಿ  ಸಮಾಧನಕರ ಬಹುಮಾನವನ್ನು ಪಡೆದುಕೊಂಡಿದ್ದಾರೆ. 
ಈ ಕರಾಟೆ ಪಟುಗಳಿಗೆ ಶ್ರೀಕಾಂತ.ಪಿ.ಕಲಾಲ ತರಬೇತಿಯನ್ನು ನೀಡಿದ್ದರು. ಇವರೊಂದಿಗೆ       ಅಂತರಾಷ್ಟ್ರೀಯ ಕರಾಟೆ ಪಟು ಹಾಗೂ ಹಿರಿಯ ತರಬೇತಿದಾರ ಮೌನೇಶ.ಎಸ್.ವಡ್ಡಟಿ ಹಾಗೂ ತರಬೇತಿದಾರರಾದ ಚಿರಂಜಿವಿ.ಎಮ್..ಗಿಣಗೇರಾ, ಶಾಂತವೀರಯ್ಯ ನರೆಗಲ್‌ಮಠ, ಶಂಕರ.ಎ.ವಡ್ಡಟ್ಟಿ, ಸೈಯದ್ ಹೂಗಾರ, ಜೋತೆಗೆ ಕ್ರೀಡೆಆಪಟುಗಳಾದ ಪೋಷಕರಾದ ಸೈಯದ್ ಇಮ್ತಿಯಾಜ್,ಪೈಯಾಜ್ ಪಾಷಾ ಎಮ್ ಯತ್ನಟ್ಟಿ ಅಭಿನಂದಿಸಿದರು. 

Advertisement

0 comments:

Post a Comment

 
Top