PLEASE LOGIN TO KANNADANET.COM FOR REGULAR NEWS-UPDATES

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಅಗಷ್ಟ ೧೫ರಂದು ಜಯ ಕರ್ನಾಟಕ ಸಂಘಟನೆ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾ ಆಸ್ಪತ್ರೆಯ ರೋಗಿಗಳಿಗೆ ಹಾಲು-ಹಣ್ಣು ಬ್ರೇಡ್ ವಿತರಿಸಲಾಯಿತು, ಈ ಕಾರ್ಯಕ್ರಮಕ್ಕೆ ಜಿಲ್ಲಾ ಶಸ್ತ್ರ ಚಿಕಿತ್ಸಿಕರಾದ  ಡಾ||ಲೋಕೇಶರವರು ಚಾಲನೆ ನೀಡಿದರು, ಈ ಕಾರ್ಯಕ್ರಮದಲ್ಲಿ ೫೦ಕ್ಕೂ ಹೆಚ್ಚು ಬಡ ರೋಗಿಗಳಿಗೆ ಹಾಲು-ಹಣ್ಣು ಬ್ರೇಡ್ ವಿತರಿಸಲಾಯಿತು. ಈ ಕಾರ್ಯ
ಕ್ರಮದಲ್ಲಿ ಜಿಲ್ಲಾಧ್ಯಕ್ಷರಾದ  ಹನುಮಂತಪ್ಪ ಕಾಯಿಗಡ್ಡಿ ಜಿಲ್ಲಾ ಮುಖಂಡ ಶಾಂತಕುಮಾರ ಕೌಜಗೇರಿ, ಆಟೋ ಘಟಕದ ಅಧ್ಯಕ್ಷ ನಾಗರಾಜ ನೀಲಗಿರಿ, ನಾಗರಾಜ ಕಬ್ಬೆರ್, ಕಿರಣ ಅರ್ಕಸಾಲಿ, ಅಜಯ್ ಅಗಡಿ, ಪ್ರಭುರಾಜ ಕರ್ಲಿ, ಮಂಜುನಾಥ ಮ್ಯಾಗಳಮನಿ, ಆನಂದ ಮಡಿವಾಳರ, ರಮೇಶ ಹದ್ಲಿ, ಸಂಘಟನೆಯ ಎಲ್ಲಾ ಕಾರ್ಯಕರ್ತರು ಉಪಸ್ಥಿತರಿದ್ದು ಕಾರ್ಯಕ್ರಮ ನಡೆಸಿಕೊಟ್ಟರು.

Advertisement

0 comments:

Post a Comment

 
Top