
ಮುಖ್ಯ ಅತಿಥಿಗಳಾದ ಶಿವಣ್ಣ ರಾಯರಡ್ಡಿ, ತಿಮ್ಮಣ್ಣ ಚೌಡಿ, ಯಂಕಣ್ಣ ಹಳ್ಳೂರು ಇವರು ಮಾತನಾಡಿ ಶ್ರೀ ಕ್ಷೇತ್ರದ ಧಮಾಧಿಕಾರಿಗಳ ಈ ಕಾರ್ಯಕ್ರಮ ನಮ್ಮ ಊರಿಗೆ ಕೊಟ್ಟ ಉಡುಗೊರೆ ಇದನ್ನು ನಾವೆಲ್ಲರು ಒಗ್ಗಟ್ಟಿನಿಂದ ಒಕ್ಕೊರಲಿಂದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು. ಮಹಿಳೆಯರಿಗೆ ಏನೆ ತೊಂದರೆ ಬಂದರೆ ನಿಮ್ಮ ಜೊತೆ ನಾವು ಇದ್ದೇವೆ ಎಂದು ತಿಳಿಸಿದರು. ಪ್ರಸ್ತಾವಿಕವಾಗಿ ಶ್ರೀ ಕ್ಷೇತ್ರದ ಗ್ರಾಮೀಣ ಅಭಿವೃದ್ದಿಯ ಕೊಪ್ಪಳ ಜಿಲ್ಲೆಯ ನಿರ್ದೇಶಕರಾದ ಶಿವರಾಯ ಪ್ರಭು ಇವರು ಶ್ರೀ ಕ್ಷೇತ್ರದ ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು ಮತ್ತು ತಳಕಲ್/ ತಳಬಾಳ, ಕೋಮಲಾಪುರ ಗ್ರಾಮಗಳಲ್ಲಿ ಇಲ್ಲಿಯವರೆಗೆ ನಡೆಸಲಾದ ಅಭಿವೃದ್ದಿ ಯೋಜನೆಯ ಪ್ರಗತಿ ವರದಿಯನ್ನು ತಳಕಲ್ ಸೇವಾ ಪ್ರತಿನಿಧಿಯಾದ ವೀರುಪಾಕ್ಷ ಹದ್ಲಿ ಇವರು ಓದಿದರು ಕಾರ್ಯಕ್ರಮಕ್ಕೆ ಸ್ವಾಗತವನ್ನು ಯಲಬುರ್ಗಾ ಯೋಜನಾಧಿಕಾರಿಗಳಾದ ಹರೀಶ ಆರ್.ಎಸ್ ಮಾಡಿದರು ಕಾರ್ಯಕ್ರಮದಲ್ಲಿ ಮೂರು ಒಕ್ಕೂಟದ ಅಧ್ಯಕ್ಷರಾದ ಬಸಮ್ಮ ವಿರುಪಾಕ್ಷಪ್ಪ ಹದ್ಲಿ, ಸುಮೀತ್ರಾ ಗುಗ್ಗಳ್ಳ, ರತ್ನಮ್ಮ ಆದಾಪೂರ, ತಾ.ಪಂ ಸದಸ್ಯರಾದ ಪದ್ಮಾವತಿ ಭೀಮಪ್ಪ ಕೋಮಲಾಪೂರ ಸೇವಾ ಪ್ರತಿನಿಧಿಗಳಾದ ಶ್ರೀಮತಿ ನೀಲಮ್ಮ ತೋಟದ, ಯಲ್ಲಮ್ಮ ಕೋಮಲಾಪೂರ ಉಪಸ್ಥಿತರಿದ್ದರು ಕಾರ್ಯಕ್ರಮದ ನಿರೂಪಣೆಯನ್ನು ಕುನೂರಿನ ಮೇಲ್ವಿಚಾರಕರಾದ ಕು.ಸವೀತಾ ಮಾಡಿದರು, ವೀರುಪಾಕ್ಷ ಹದ್ಲಿ ಇವರು ವಂದನೆಗಳನ್ನು ಮಾಡಿ ಕಾರ್ಯಕ್ರಮಕ್ಕೆ ವಿರಾಮ ನೀಡಿದರು,.
ಕಾರ್ಯಕ್ರಮದಲ್ಲಿ ಸುಮಾರು ೨೦೦೦ ಸಾವಿರ ಮಹಿಳೆ ಭಾಗವಹಿಸಿದ್ದರು ಮತ್ತು ಕುಂಬ ಮೆರವಣಿಗೆ ಕೂಡ ನಡೆಯಿತು.
0 comments:
Post a Comment
Click to see the code!
To insert emoticon you must added at least one space before the code.