ಜಿಲ್ಲಾ ಪಂಚಾಯತಿ ವತಿಯಿಂದ ೨೦೧೩-೧೪ ನೇ ಸಾಲಿನ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯಡಿ ಜಿಲ್ಲೆಯ ೧೦೯ ಗ್ರಾಮ ಪಂಚಾಯತಿಗಳಿಗೆ ೬೫. ೬೦ ಕೋಟಿ ರೂ.ಗಳ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ಕೆ. ರವಿ ಅವರು ತಿಳಿಸಿದ್ದಾರೆ.
ಉದ್ಯೋಗಖಾತ್ರಿ ಯೋಜನೆಯಡಿ ನೋಂದಾಯಿತ ಕೂಲಿಕಾರರಿಗೆ ಉದ್ಯೋಗದ ನೆರವು ನೀಡಲು, ಸರ್ಕಾರವು ಜಿಲ್ಲೆಯ ೧೩೪ ಗ್ರಾಮ ಪಂಚಾಯತಿಗಳಿಗೆ ೮೦. ೯೬ ಕೋಟಿ ರೂ.ಗಳನ್ನು ನಿಗದಿಪಡಿಸಿ, ೫೯ ಸಾವಿರ ಕುಟುಂಬಗಳಿಗೆ ಉದ್ಯೋಗ ನೀಡಿ, ೨೯. ೫೫ ಲಕ್ಷ ಮಾನವ ದಿನಗಳನ್ನು ಸೃಜಿಸುವ ಗುರಿ ನೀಡಲಾಗಿದೆ. ಸರ್ಕಾರ ನಿಗದಿಪಡಿಸಿರುವ ಗುರಿ ಅನ್ವಯ ಅನುದಾನ ಹಂಚಿಕೆಗೆ ಕ್ರಿಯಾ ಯೋಜನೆ ತಯಾರಿಸಿ ಸಲ್ಲಿಸುವಂತೆ ಜಿಲ್ಲೆಯ ಎಲ್ಲ ೧೩೪ ಗ್ರಾಮ ಪಂಚಾಯತಿಗಳಿಗೆ ಸೂಚನೆ ನೀಡಲಾಗಿತ್ತು. ಈ ಪೈಕಿ ೧೦೯ ಗ್ರಾಮ ಪಂಚಾಯತಿಗಳು ಸಲ್ಲಿಸಿರುವ ೬೫. ೬೦ ಕೋಟಿ ರೂ.ಗಳ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದ್ದು, ಈ ಯೋಜನೆಯಡಿ ಒಟ್ಟು ೧೪೨೧೨ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಆದೇಶಿಸಲಾಗಿದೆ. ಕೊಪ್ಪಳ ತಾಲೂಕಿನ ೩೫ ಗ್ರಾಮ ಪಂಚಾಯತಿಗಳಿಗೆ ೨೧೪೮. ೬೦ ಲಕ್ಷ ರೂ.ಗಳ ಯೋಜನೆಗೆ ಅನುಮೋದನೆ ನೀಡಲಾಗಿದೆ. ಅದೇ ರೀತಿ ಗಂಗಾವತಿ ತಾಲೂಕಿನ ೧೬ ಗ್ರಾಮ ಪಂಚಾಯತಿಗಳಿಗೆ ೯೯೧. ೭೬ ಲಕ್ಷ ರೂ., ಕುಷ್ಟಗಿ ತಾಲೂಕಿನ ೨೮ ಗ್ರಾಮ ಪಂಚಾಯತಿಗಳಿಗೆ ೧೮೧೪. ೯೬ ಲಕ್ಷ ರೂ., ಹಾಗೂ ಯಲಬುರ್ಗಾ ತಾಲೂಕಿನ ೩೦ ಗ್ರಾಮ ಪಂಚಾಯತಿಗಳಿಗೆ ೧೬೦೫. ೫೬ ಲಕ್ಷ ರೂ.ಗಳ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ಕೆ. ರವಿ ತಿಳಿಸಿದ್ದಾರೆ.
0 comments:
Post a Comment