PLEASE LOGIN TO KANNADANET.COM FOR REGULAR NEWS-UPDATES

  ವಿಧಾನಸಭಾ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಯಾವುದೇ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ನಿಗಾ ವಹಿಸಲು ಹಾಗೂ ಕ್ಷಿಪ್ರ ಕಾರ್ಯಾಚರಣೆಗೆ ಅನುಕೂಲವಾಗುವಂತೆ ಕೊಪ್ಪಳ ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ ೦೩ ತಂಡಗಳಂತೆ ಒಟ್ಟು ೧೫ ಫ್ಲೈಯಿಂಗ್ ಸ್ಕ್ವಾಡ್ (ವಿಚಕ್ಷಣ ದಳ) ನೇಮಕ ಮಾಡಲಾಗಿದೆ.

  ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳ ಅಕ್ರಮ ಕಾರ್ಯಚಟುವಟಿಕೆಗಳಿಗೆ ಕಡಿವಾಣ ಹಾಕಲು ವಿಚಕ್ಷಣ ದಳ ನೇಮಕ ಮಾಡಲಾಗಿದೆ.  ಮತದಾರರನ್ನು ಓಲೈಸುವ ಧಾವಂತದಲ್ಲಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಎಸಗುವ ಅಕ್ರಮಗಳನ್ನು ತಡೆದು, ಅವರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲು ಈ ದಳ ಕ್ಷಿಪ್ರ ಕಾರ್ಯಾಚರಣೆ ನಡೆಸಲಿದೆ.  ರಾಜ್ಯದಲ್ಲಿ ಈ ವಿಧಾನವನ್ನು ಇದೇ ಮೊದಲಬಾರಿ ಜಾರಿಗೆ ತರಲಾಗಿದ್ದು, ಇವರಿಗೆ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳೆಂಬ ಹೊಸ ಅಸ್ತ್ರವನ್ನೂ ಸಹ ನೀಡಲಾಗಿದೆ.  ಈ ವಿಚಕ್ಷಣ ದಳ ತಮ್ಮ ವ್ಯಾಪ್ತಿಯಲ್ಲಿನ ವಿವಿಧ ಸೆಕ್ಟರ್ ಅಧಿಕಾರಿಗಳ ತಂಡದೊಂದಿಗೆ ಸಮನ್ವಯ ಸಾಧಿಸಿ, ಸೂಕ್ತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಲಿದೆ.  ಪ್ರತಿ ಫ್ಲೈಯಿಂಗ್ ಸ್ಕ್ವಾಡ್ ತಂಡದಲ್ಲಿ ಹಿರಿಯ ಅಧಿಕಾರಿಗಳು ತಂಡದ ಮುಖ್ಯಸ್ಥರಾಗಲಿದ್ದು.  ಇವರ ಜೊತೆಗೆ ಆಯಾ ತಾಲೂಕು ತಹಸಿಲ್ದಾರರಿಂದ ನೇಮಕಗೊಳ್ಳುವ ಓರ್ವ ಸಿಬ್ಬಂದಿ, ಒಬ್ಬರು ಪೊಲೀಸ್ ಇನ್ಸ್‌ಪೆಕ್ಟರ್, ಒಬ್ಬರು ಪೊಲೀಸ್ ಕಾನ್ಸಟೇಬಲ್ ಹಾಗೂ ಓರ್ವ ವಿಡಿಯೋಗ್ರಾಫರ್ ಸೇರಿದಂತೆ ಒಟ್ಟು ಐವರು ಕಾರ್ಯ ನಿರ್ವಹಿಸಲಿದ್ದಾರೆ.  ಕೊಪ್ಪಳ ಜಿಲ್ಲೆಯ ೦೫ ವಿಧಾನಸಭಾ ಕ್ಷೇತ್ರಗಳಿಗೆ ನೇಮಿಸಲಾಗಿರುವ ಫ್ಲೈಯಿಂಗ್ ಸ್ಕ್ವಾಡ್ ತಂಡದ ಮುಖ್ಯಸ್ಥರ ವಿವರ ಇಂತಿದೆ.  ಕುಷ್ಟಗಿ ವಿಧಾನಸಭಾ ಕ್ಷೇತ್ರಕ್ಕೆ ಸಣ್ಣ ನೀರಾವರಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ಮಾರುತಿ ಗೋಖಲೆ- ೯೪೪೯೨೬೭೪೧೧.  ರೇಷ್ಮೆ ಇಲಾಖೆ ಉಪನಿರ್ದೇಶಕ ಟಿ. ದಾದನೂರು -೯೬೧೧೫೮೭೭೧೧ ಮತ್ತು ಹಿರಿಯ ಭೂವಿಜ್ಞಾನಿ ಆರ್.ಎಸ್. ರಾವಲ್- ೯೪೪೮೭೬೩೭೫೬ ಅವರನ್ನು ಪ್ರತಿ ಫ್ಲೈಯಿಂಗ್ ಸ್ಕ್ವಾಡ್‌ನ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.
  ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಜಿ.ಪಂ. ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ್- ೯೪೮೦೮೭೧೦೦೧.  ಸಹಾಯಕ ಕಾರ್ಯದರ್ಶಿ ಗಂಗಾಧರ- ೯೪೮೦೮೭೧೦೦೫.  ಮತ್ತು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಜಿಲ್ಲಾ ವ್ಯವಸ್ಥಾಪಕ ನಾರಾಯಣರಾವ್- ೯೪೪೮೪೯೬೦೨೮.  ಗಂಗಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸರ್ವಶಿಕ್ಷಣ ಅಭಿಯಾನದ ಡಿವೈಪಿಸಿ ಗುರುಲಿಂಗಯ್ಯ- ೯೪೪೮೯೯೯೪೦೨.  ಸಹಕಾರ ಸಂಘಗಳ ಉಪನಿಬಂಧಕ ಕೆ. ಮುನಿಯಪ್ಪ- ೯೪೪೮೨೬೨೦೬೨ ಮತ್ತು ಕರ್ನಾಟಕ ಮೂಲ ಸೌಕರ್ಯ ಅಭಿವೃದ್ಧಿ ನಿಗಮ ಉಪನಿರ್ದೇಶಕ ಹೆಚ್.ವಿ. ಸುರೇಶ್- ೯೪೮೦೮೨೮೨೪೯.  ಯಲಬುರ್ಗಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಂಬೇಡ್ಕರ್ ಅಭಿವೃದ್ಧಿ ನಿಗಮ ಜಿಲ್ಲಾ ವ್ಯವಸ್ಥಾಪಕ ಡಿ.ಹೆಚ್. ಕುಲಕರ್ಣಿ- ೯೪೪೮೩೩೬೫೦೨.  ಕರ್ನಾಟಕ ರಾಜ್ಯ ಬೀಜ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಹೆಚ್.ವಿ. ಕುಸುಗಲ್- ೯೪೪೮೩೫೮೦೫೩ ಮತ್ತು ಕೈಮಗ್ಗ ಹಾಗೂ ಜವಳಿ ಇಲಾಖೆ ಸಹಾಯಕ ನಿರ್ದೇಶಕ ಶಿವರಾಜ ಕುಲಕರ್ಣಿ- ೯೪೪೮೩೪೯೨೮೮.  ಕೊಪ್ಪಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಜಿಲ್ಲಾ ಜಲಾನಯನ ಅಭಿವೃದ್ಧಿ ಅಧಿಕಾರಿ ಡಾ. ಮಲ್ಲಿಕಾರ್ಜುನ- ೯೪೮೦೫೬೪೩೧೧.  ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆ ಉಪನಿರ್ದೇಶಕ ಶಾಂತವೀರಪ್ಪ- ೯೪೪೮೫೩೪೬೦೪ ಮತ್ತು ಪರಿಸರ ಅಧಿಕಾರಿ ಪಿ. ಆನಂದ್- ೯೪೪೯೦೦೮೧೩೭ ಇವರನ್ನು ಫ್ಲೈಯಿಂಗ್ ಸ್ಕ್ವಾಡ್ ತಂಡಗಳ ಮುಖ್ಯಸ್ಥರನ್ನಾಗಿ ನೇಮಿಸಲಾಗಿದ್ದು, ಅಕ್ಷರ ದಾಸೋಹದ ಶಿಕ್ಷಣಾಧಿಕಾರಿ ದೊಡ್ಡಬಸಪ್ಪ ನೀರಲಕೇರಿ- ೯೪೮೦೮೩೫೬೯೫ ಇವರನ್ನು ವಿಶೇಷ ತಂಡದಲ್ಲಿ ಕಾಯ್ದಿರಿಸಿದ ಅಧಿಕಾರಿನ್ನಾಗಿ ನೇಮಿಸಿ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಆದೇಶ ಹೊರಡಿಸಿದ್ದಾರೆ.


Advertisement

0 comments:

Post a Comment

 
Top