ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಕೊಪ್ಪಳ ತಾಲೂಕಿನ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಸ್ಥಾನದಲ್ಲಿ ಫೆ.೨೫ ರಂದು ಭಾರತ ಹುಣ್ಣಿಮೆ ನಿಮಿತ್ಯ ವಿಶೇಷ ಪೂಜಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಹುಣ್ಣಿಮೆಯ ದಿನದಂದು ಲಕ್ಷಾಂತರ ಭಕ್ತಾಧಿಗಳು ಕ್ಷೇತ್ರಕ್ಕೆ ಆಗಮಿಸಲಿದ್ದು, ಅಂದು ರಾತ್ರಿ ೯.೦೦ ಗಂಟೆಗೆ ಗುಗ್ಗರಿ ಮುಟ್ಟಿಗೆ ಪೂಜೆ ನೆರವೇರಿಸಲಾಗುವುದು. ಹುಣ್ಣಿಮೆಗೆ ಬರುವ ಲಕ್ಷಾಂತರ ಭಕ್ತರಿಗಾಗಿ ಅಗತ್ಯ ಕುಡಿಯುವ ನೀರಿನ ವ್ಯವಸ್ಥೆ, ಬೆಳಕಿನ ವ್ಯವಸ್ಥೆ, ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಲಾಗಿದೆ. ಹುಣ್ಣಿಮೆ ಪ್ರಯುಕ್ತ ಫೆ.೨೫ ಮತ್ತು ೨೬ ರಂದು ದೇವಸ್ಥಾನದಲ್ಲಿ ವಾಹನಗಳ ಪೂಜೆ, ಕುಂಕುಮಾರ್ಚನೆಯ ಪೂಜೆ ವ್ಯವಸ್ಥೆ ಇರುವುದಿಲ್ಲ. ದೇವಿಯ ದರ್ಶನಕ್ಕೆ ಮಾತ್ರ ಅವಕಾಶವಿರುತ್ತದೆ. ಭಕ್ತಾದಿಗಳು ಸಹಕರಿಸಬೇಕು ಎಂದು ಶ್ರೀ ಹುಲಿಗೆಮ್ಮ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಸಿ.ಎಚ್. ಚಂದ್ರಮೌಳಿ ತಿಳಿಸಿದ್ದಾರೆ.
0 comments:
Post a Comment