ಕೊಪ್ಪಳ ತಾಲೂಕಿನ ಭೂ-ವ್ಯಾಜ್ಯಗಳಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಭೂ-ನ್ಯಾಯಮಂಡಳಿ ವಿಚಾರಣಾ ಸಭೆ ಡಿ. ೧೨ ರಂದು ಬೆಳಿಗ್ಗೆ ೧೧ ಗಂಟೆಗೆ ಕೊಪ್ಪಳ ತಹಸಿಲ್ದಾರರ ಕಚೇರಿಯಲ್ಲಿ ನಡೆಯಲಿದೆ.
ಭೂ-ನ್ಯಾಯ ಮಂಡಳಿಗೆ ಅಧ್ಯಕ್ಷರನ್ನಾಗಿ ಸಹಾಯಕ ಆಯುಕ್ತರನ್ನು ಸರ್ಕಾರ ನೇಮಿಸಿದ್ದು, ಇವರ ಸೂಚನೆಯ ಮೇರೆಗೆ ಇದೀಗ ಕೊಪ್ಪಳ ತಾಲೂಕಿನ ಭೂ-ವ್ಯಾಜ್ಯಗಳಿಗೆ ಸಂಬಂಧಿಸಿದಂತೆ ವಿಚಾರಣಾ ಸಭೆ ನಡೆಸಲಾಗುವುದು. ಸಭೆಯಲ್ಲಿ ಭೂ-ನ್ಯಾಯಮಂಡಳಿ ಸದಸ್ಯರುಗಳಾದ ಕೊಪ್ಪಳದ ಹಾಲೇಶ್ ಕಂದಾರಿ, ಅಳವಂಡಿಯ ವಿರುಪಾಕ್ಷಪ್ಪ, ಬಿಸರಳ್ಳಿಯ ಪ್ರಕಾಶ್, ಕೇಸಲಾಪುರದ ಕೊಟ್ರಯ್ಯ ಅವರು ಪಾಲ್ಗೊಳ್ಳುವರು ಎಂದು ಕೊಪ್ಪಳ ತಹಸಿಲ್ದಾರ್ ಬಿ.ಎಲ್. ಗೋಠೆ ತಿಳಿಸಿದ್ದಾರೆ.

0 comments:
Post a Comment