PLEASE LOGIN TO KANNADANET.COM FOR REGULAR NEWS-UPDATES


 ಕೊಪ್ಪಳ ಜಿಲ್ಲೆಗೆ ಮಂಜೂರು ಆಗಿರುವ ಕರ್ನಾಟಕ ರಾಜ್ಯ ಬೀಜ ಪ್ರಮಾಣನ ಸಂಸ್ಥೆಯ ಸಹಾಯ ನಿರ್ದೇಶಕರ ಕಾರ್ಯಾಲಯವನ್ನು ಶಾಸಕರಾದ ಸಂಗಣ್ಣ ಕರಡಿ ಅವರು ಉದ್ಘಾಟಿಸಿದರು. 
  ಕೊಪ್ಪಳದ ಸಹಾಯಕ ಕೃಷಿ ನಿರ್ದೇಶಕರ ಆವರಣದಲ್ಲಿ ನಡೆದ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು   ಕೊಪ್ಪಳದಲ್ಲಿ ಬೀಜೋತ್ಪಾದನೆಗಿರುವ ವಿಫುಲ ಅವಕಾಶಗಳನ್ನು ಬಳಸಿಕೊಳ್ಳಲು ಮತ್ತು ರೈತರಿಗೆ ಆರ್ಥಿಕವಾಗಿ ಸಬಲರಾಗಲು ಬೀಜೋತ್ಪಾದನೆ ಚಟುವಟಿಕೆಗಳಲ್ಲಿ ಭಾಗವಹಿಸಲು ಶಾಸಕ ಸಂಗಣ್ಣ ಕರಡಿ ಅವರು ಕರೆ ನೀಡಿದರು. 
  ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳು ಮಾತನಾಡಿ ಕೃಷಿ ವಿಶ್ವವಿದ್ಯಾಲಯದಿಂದ ಕೈಗೊಳ್ಳುವ ಬೀಜೋತ್ಪಾದನೆಯ ಬೀಜ ಗ್ರಾಮ ಯೋಜನೆಯಲ್ಲಿ ರೈತರಿಗೆ ಸಕ್ರೀಯವಾಗಿ ಭಾಗವಹಿಸಲು ತಿಳಿಸಿದರು. ಗುಣಮಟ್ಟದ ಬೀಜೊತ್ಪಾದನೆ ಇಂದಿನ ಅವಶ್ಯಕತೆಯಾಗಿದ್ದು ರೈತರು ಪ್ರಮಾಣಿಕೃತ ಬೀಜ ಬಳಸಿ ವಂಚನೆಯಿಂದ ದೂರವಿರಲು ತಿಳಿಸಿದರು.  
  ಮುಖ್ಯ ಅಥಿತಿಗಳಾಗಿ ಕೃಷಿ ವಿಶ್ವವಿದ್ಯಾಲಯ ರಾಯಚೂರಿನ ಕುಲಪತಿಗಳಾದ ಡಾ: ಬಿ. ವಿ. ಪಾಟೀಲ, ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ, ಜಿಲ್ಲಾ ಪಂಚಾಯತ್ ಅದ್ಯಕ್ಷ ಕೆ. ರಾಘವೇಂದ್ರ ಹಿಟ್ನಾಳ, ನಗರಾಭಿವೃದ್ದಿ ಪ್ರಾಧಿಕಾರದ ಅದ್ಯಕ್ಷ ಅಪ್ಪಣ್ಣ ಪದಕಿ, ನಗರಸಭೆ ಅದ್ಯಕ್ಷ ಸುರೇಶ ದೇಸಾಯಿ, ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಡಾ: ಪದ್ಮಯ್ಯ ನಾಯಕ್, ಕರ್ನಾಟಕ ರಾಜ್ಯ ಬೀಜ ಪ್ರಮಾಣನ ಸಂಸ್ಥೆಯ ನಿರ್ದೇಶಕ ಸಂಗಟಿ, ಜಿಲ್ಲಾ ಕೃಷಿಕ ಸಮಾಜದ ಅದ್ಯಕ್ಷ ಶಿವಣ್ಣ ಮೂಲಿಮನಿ, ರಾಜ್ಯ ಸರ್ಕಾರಿ ನೌಕರರ ಸಂಘದ  ಉಪಾದ್ಯಕ್ಷ ಶಂಭುಲಿಂಗನಗೌಡ ಹಲಗೇರಿ, ಕೃಷಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯ, ಬಿ. ತಿಮ್ಮನಗೌಡ, ಹನುಮೇಶ ನಾಯಕ್, ಶಿವಪ್ಪ ಹಾಗೂ ವಿಸ್ತರಣಾ ನಿರ್ದೇಶಕ ಡಾ: ಕೆ. ಪಿ. ವಿಶ್ವನಾಥ, ಸಹ ವಿಸ್ತರಣಾ ನಿರ್ದೇಶಕ ಡಾ: ಎಸ್. ಎನ್. ಹಂಚಿನಾಳ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಡಾ: ವಸಂತಪ್ಪ ಹಾಗೂ ಸಹಾಯಕ ಕೃಷಿ ನಿರ್ದೇಶಕರಾದ ಮಂಜುಳಾ  ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಡಾ: ಮಲ್ಲಿಕಾರ್ಜುನ ಕೆಂಗನಾಳ ನಿರೂಪಿಸಿದರು, ಶರಣಪ್ಪ ಉಪ ನಿರ್ದೇಶಕರು ಬೀಜ ಪ್ರಮಾಣನ ಇವರು ಪ್ರಾಸ್ಥಾವಿಕವಾಗಿ ಬೀಜ ಪ್ರಮಾಣನ ಬಗ್ಗೆ ವಿವರಿಸಿದರು ಹಾಗೂ ಅಂಜೀನಪ್ಪ ಸಹಾಯಕ ನಿರ್ದೇಶಕರು ಬೀಜ ಪ್ರಮಾಣನ ಇವರು ವಂದಿಸಿದರು.  

Advertisement

0 comments:

Post a Comment

 
Top