PLEASE LOGIN TO KANNADANET.COM FOR REGULAR NEWS-UPDATES


ನೆಮ್ಮದಿ ಕೇಂದ್ರಗಳ ನೌಕರರ ಮನವಿಪತ್ರ.
  ಕರ್ನಾಟಕ ರಾಜ್ಯ ಸರ್ಕಾರವು ಆಗಸ್ಟ್ ೨೦೦೬ ರಿಂದ ನೆಮ್ಮದಿ ಕೇಂದ್ರಗಳನ್ನು ಪ್ರಾರಂಭಿಸಿ ಗ್ರಾಮೀಣ ಜನತೆಗೆ ಅತಿ ಕಡಿಮೆ ವೆಚ್ಚದಲ್ಲಿ,  ಅತಿ ಶೀಘ್ರದಲ್ಲಿ ಜನ್ಮ ಉಥಾರ, ಮರಣ ದಾಖಲು, ಜಾತಿ ಪ್ರಮಾಣಪತ್ರ, ಭೂ ದಾಖಲೆ ಮುಂತಾಗಿ ೪೪ ಸೇವೆಗಳನ್ನು ಇ-ಆಡಳಿತದ ಮೂಲಕ ಲಭಿಸುವಂತೆ ಮಾಡಿ,  ಬಹಳಷ್ಟು ಉಪಕಾರವನ್ನು ಮಾಡಿದೆ.  ರಾಜ್ಯದ ೮೦೧ ಟೆಲೆ ಕೇಂದ್ರಗಳಲ್ಲಿ ನೆಮ್ಮದಿ ಕೇಂದ್ರಗಳಲ್ಲಿ ಕೆಲಸಮಾಡುವ "ಕಂಪ್ಯೂಟರ್ ಆಪರೇಟರ್"ಗಳು ೧೬೦೦ ಜನರು,  ಗ್ರಾಮೀಣ ಭಾಗದವರೇ ಆಗಿದ್ದು,  ಕಳೆದ ಆರು ವರುಷಗಳಿಂದ ಇವರಿಂದ ನಮಗೆ ಉತ್ತಮ ಸೇವೆ ಲಭಿಸುತ್ತಿದೆ.  ಇವರು ಈ ಕೆಲಸದಲ್ಲಿ ಸುದೀರ್ಘ ಅನುಭವವನ್ನು ಪಡೆದುಕೊಂಡಿದ್ದು,  ನಮಗೆ ಬೇಕಾದ ಪ್ರಮಾಣಪತ್ರಗಳು ಹಾಗೂ ಇತರ ಎಲ್ಲ ದಾಖಲೆಗಳು ಬೇಗ ಬೇಗ ದೊರೆಯುತ್ತಿವೆ.  ಇವರ ಗಣಕಯಂತ್ರದ ತಂತ್ರಜ್ಞಾನವನ್ನು ಚೆನ್ನಾಗಿ ಪಡೆದಿದ್ದು,  ನಮ್ಮ ಈ ಗ್ರಾಮಗಳಿಗೇ ಸೇರಿದವರಾಗಿದ್ದಾರೆ.  ನೆಮ್ಮದಿ ಕೇಂದ್ರಗಳ ನೌಕರರ ಸೇವೆ ನಮಗೆ ತೃಪ್ತಿಯನ್ನು ತಂದಿದೆ. 
ಹೀಗಿರುವಾಗ ನಮಗೆ ಬಂದ ಮಾಹಿತಿ ಪ್ರಕಾರ ಸರ್ಕಾರವು ದಿ|| ೫-೬-೨೦೧೨ ರಂದು ಒಂದು ಆದೇಶವನ್ನು ಹೊರಡಿಸಿ,  ರಾಜ್ಯದಲ್ಲಿ ಈಗಿರುವ ೩೨೯ ನಾಡ ಕಚೇರಿಗಳ ಜೊತೆಗೆ ಹೊಸದಾಗಿ ೨೭೨ ನಾಡ ಕಚೇರಿಗಳನ್ನು ಸ್ಥಾಪಿಸಿ,  ಇವುಗಳಿಗೆ ಉಪ ತಹಶೀಲ್ದಾರರು, ಗ್ರಾಮ ಲೆಕ್ಕಿಗರು, ಗ್ರಾಮ ಸಹಾಯಕರನ್ನು ನೇಮಿಸಿ,  ಒಟ್ಟಾರೆ ಈ ೫೦೧ ಕೇಂದ್ರಗಳಲ್ಲಿ ಹೊಸದಾಗಿ ಗಣಕಯಂತ್ರ ಮುಂತಾದ ಯಂತ್ರಗಳನ್ನು ಸ್ಥಾಪಿಸಿ, ಅವುಗಳಿಗೆ ಸೌರಶಕ್ತಿಯನ್ನು ಒದಗಿಸಿ,  ಹೊಸ ಹೊಸ ಪೀಠೋಪಕರಣಗಳನ್ನು ನೀಡುವ ಕೆಲಸದಲ್ಲಿ ತೊಡಗಿದ್ದೀರಿ.  ಅಂತೆಯೇ ೧೭೬ ಕಸಬಾ ಹೋಬಳಿಗಳಲ್ಲಿ ತಾಲೂಕಾ ಕಚೇರಿಗಳಲ್ಲೇ ಹೊಸ ಗಣಕಯಂತ್ರಗಳನ್ನು ಸ್ಥಾಪಿಸಲು ಕೂಡ ಆದೇಶ ಮಾಡಿದ್ದಿರಿ.  ಅಂದರೆ ೭೭೭ ಕೇಂದ್ರಗಳಲ್ಲಿ ಗಣಕಯಂತ್ರಗಳನ್ನು ಹಾಗೂ ಇತರ ಯಂತ್ರಗಳನ್ನು ಸ್ಥಾಪಿಸಿ,  ಇದಕ್ಕಾಗಿ ಸುಮಾರು ಐವತ್ತು ಕೋಟಿ ರೂಪಾಯಿಗಳ ವೆಚ್ಚವನ್ನು ಮಾಡುತ್ತಿರುವುದಾಗಿ ಆದೇಶಿಸಿದೆ. 
ಸಮಸ್ಯೆ ಎಂದರೆ,  ರಾಜ್ಯದಲ್ಲಿ ಒಂದೆಡೆ ಭೀಕರ ಬರಗಾಲವಿದೆ.  ಗ್ರಾಮೀನ ಜನ ಗುಳೆ ಹೋಗುತ್ತಿದ್ದಾರೆ.  ಇವರ ಪರಿಹಾರಕ್ಕೆ ಯೋಗ್ಯ ಕೆಲಸ ಆಗ್ತಾ ಇಲ್ಲ.  ಹಾಗಿದ್ದಾಗ,  ಈ ಪರಿಹಾರ ಕಾರ್ಯಕ್ಕೆ ಹಣವನ್ನು ವೆಚ್ಚ ಮಾಡುವ ಬದಲಾಗಿ,  ಈಗ ನೆಮ್ಮದಿ ಕೇಂದ್ರಗಳಲ್ಲಿ ನಡೆಯುತ್ತಿರುವ ಕೆಲಸವನ್ನೇ ಮಾಡಲು,  ಮತ್ತೆ ಇಷ್ಟೊಂದು ಹೊಸ ಕೇಂದ್ರಗಳನ್ನು ಸ್ಥಾಪಿಸುವುದು ಜನಹಿತ ಕಾರ್ಯವಾಗುವುದಿಲ್ಲ. 
ಆದ್ದರಿಂದ ನಮ್ಮ ಮನವಿಯೆಂದರೆ,  ಈಗಿನ ನೆಮ್ಮದಿ ಕೇಂದ್ರಗಳನ್ನೇ ಸರ್ಕಾರ ಖಾಸಗಿ ಕಂಪನಿಯಿಂದ ವಹಿಸಿಕೊಂಡು,  ಇಲ್ಲಿ ಕೆಲಸಮಾಡುತ್ತಿರುವ ಅನುಭವ-ದಕ್ಷತೆ ಪಡೆದುಕೊಂಡಿರುವ ಕಂಪ್ಯೂಟರ್ ಆಪರೇಟರ್‌ಗಳನ್ನೇ ಸರ್ಕಾರದ ಸೇವೆಯಲ್ಲಿ ವಿಲೀನ ಮಾಡಿಕೊಳ್ಳಬೇಕೆಂದು ನಾವು ಸರ್ಕಾರದಲ್ಲಿ ಬೇಡುತ್ತೇವೆ.  ಇದರಿಂದ ಅತಿಕಡಿಮೆ ವೆಚ್ಚದಲ್ಲಿ,  ಸಮರ್ಪಕ ಸೇವೆಯನ್ನು ನಿರಾತಂಕವಾಗಿ ಮುಂದುವರಿಸಿದಂತಾಗುತ್ತದೆ. 
ಹೊಸ ವ್ಯವಸ್ಥೆಯಿಂದ ಕೋಟ್ಯಾಂತರ ರೂಪಾಯಿ ಹಾಳೂ ವೆಚ್ಚವಾಗುವುದಲ್ಲದೆ,  ಅನುಭವ ಇಲ್ಲದೇಇರುವ ಹೊಸಬರಿಂದ ಸಮರ್ಪಕ ಕಾರ್ಯ ಆಗುವುದಿಲ್ಲ.  ಈಗಿರುವ ಯಂತ್ರಗಳು ವ್ಯರ್ಥವಾಗಿ ಬಿಡುತ್ತವೆ.  ನುರಿತ ಆಪರೇಟರ್‌ಗಳು ನಿರುದ್ಯೋಗಿಗಳಾಗಿ,  ಅವರ ಕುಟುಂಬಗಳು ಬೀದಿಪಾಲಾಗುತ್ತವೆ. 
ಯಾವುದೇ ಕಾರಣಕ್ಕೆ ಈ ೧೬೦೦ ಗ್ರಾಮೀಣ ಯುವಕ-ಯುವತಿಯರನ್ನು ನಿರುದ್ಯೋಗಗೊಳಿಸಿದರೆ,  ನಾವೆಲ್ಲರೂ ಈ ನೌಕರರ ಪರವಾಗಿ,  ಇವರ ಬೆಂಬಲಾರ್ಥ ಗ್ರಾಮಗ್ರಾಮಗಳಲ್ಲಿ ಸರ್ಕಾರದ ವಿರುದ್ಧ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಈ ಮೂಲಕ ಸರ್ಕಾರಕ್ಕೆ ಎಚ್ಚರವನ್ನು ಕೊಡಬಯಸುತ್ತೇವೆ. 
ಎಂದು  ಜಗದೀಶ ಶೆಟ್ಟರ್ ರಿಗೆ  ನೆಮ್ಮದಿ ಕೇಂದ್ರದ ನೌಕರರಿಂದ ಮನವಿ ಸಲ್ಲಿಸಿದರು. 

Advertisement

0 comments:

Post a Comment

 
Top