PLEASE LOGIN TO KANNADANET.COM FOR REGULAR NEWS-UPDATES


ಭಟ್ಟರಹಂಚಿನಾಳ : ನಿವೇಶನ ಹಕ್ಕುಪತ್ರಕ್ಕಾಗಿ ಹೋರಾಟ,
ಕೊಪ್ಪಳ,ನ : ಸ.ನಂ. ೬೪/ಬಿ ಜಮೀನಿನಲ್ಲಿ ಸುಮಾರು ೪೦ ವರ್ಷಗಳಿಂದ ಗುಡಿಸಲುಗಳನ್ನು ಹಾಕಿಕೊಂಡು ವಾಸವಾಗಿರುವ ಗಂಗಾವತಿ ತಾಲೂಕಿನ ಭಟ್ಟರಹಂಚಿನಾಳ ನಿವಾಸಿಗಳಿಗೆ ಹಕ್ಕು ಪತ್ರ ನೀಡುವಂತೆ ಆಗ್ರಹಿಸಿ ಕಳೇದ ೧೩ ದಿನಗಳಿಂದ ಜಿಲ್ಲಾಡಳಿತ ಭವನದ ಎದುರು ಅಹೋರಾತ್ರಿ ಧರಣಿ ನಡೆಸುತ್ತಿದ್ದು, ಈ ವರೆಗೂ ಯಾವುದೇ ಜನಪ್ರತಿನಿಧಿಗಳಾಗಲಿ ಅಧಿಕಾರಿಗಳಾಗಲಿ ಸ್ಪಂದಿಸಿಲ್ಲ ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ತಾಲೂಕ ಅಧ್ಯತಕ್ಷ ಗಂಗಾಧರಯ್ಯ ತಿಳಿಸಿದ್ದಾರೆ.
ಈ ಪೈಕಿ ಸುಮಾರು ೩೫ ದಲಿತ ಕುಟುಂಬಗಳಿಗೆ ತಾ.ಪಂ. ವಿತರಿಸಿದ ನಿವೇಶನಗಳಿಗೆ ಸಂಬಂಧಿಸಿದ ೧ ಎಕರೆ ೨೧ ಗುಂಟೆ ಸರಕಾರಿ ಜಮೀನು ತಮಗೆ ಸೇರಿದ್ದು ಎಂದು ಮಾಸೂಮಸಾಬ ಮತ್ತು ಖಾಜಾಮೈನುದ್ದೀನ್ ಎಂಬುವರು ನ್ಯಾಯಾಲಯಕ್ಕೆ ಮೊರೆ ಹೋಗಿದ್ದಾರೆ. ಈ ವಿವಾದದಲ್ಲಿ ಉಚ್ಛ ನ್ಯಾಯಾಲಯವು ಸದರಿ ಜಮೀನು ಮಾಸೂಮಸಾಬ ಮತ್ತು ಖಾಜಾಮೈನುದ್ದೀನ್ ಅವರದು ಎಂದು ತೀರ್ಪು ನೀಡಿದೆ. ಆದರೆ ಈ ವಿವಾದದಲ್ಲಿ ಮೇಲ್ಮನವಿದಾರರ ಹಿತಗಳಿಗೆ ಧಕ್ಕೆಯಾಗದಂತೆ ತೀರ್ಪನ್ನು ಜಾರಿಗೊಳಿಸುವಂತೆ ರಾಜ್ಯ ಉಚ್ಛ ನ್ಯಾಯಾಲಯ ನಿರ್ದೇಶಿಸಿ ಅವರಿಗೆ ಅಗತ್ಯ ಪರಿಹಾರ ನೀಡಬೇಕೆಂದು ನ್ಯಾಯಾಲಯ ಸೂಚಿಸಿದೆ ಎಂದು ತಿಳಿಸಿದ್ದಾರೆ.
ಸರಕಾರ ನ್ಯಾಯಾಲಯದ ತೀರ್ಪನ್ನು ಜಾರಿಗೊಳಿಸುವ ಅಂಗವಾಗಿ ಹಕ್ಕುದಾರರಿಗೆ ಅಗತ್ಯ ಪರಿಹಾರ ನೀಡಿ ಅಲ್ಲಿ ವಾಸವಿರುವ ಬಡ ಕುಂಟುಂಬಗಳಿಗೆ ನಿವೇಶನ ಹಕ್ಕುಪತ್ರ ವಿತರಿಬೇಕು ಎಂದು ಆಗ್ರಹಿಸಿ ಜಿ.ಪಂ. ಈ.ಓ ಅವರಿಗೆ ಮನವಿಯ ನೀಡಲಾಗಿದೆ ಎಂದದಿದ್ದಾರೆ.
ಧರಣಿಯಲ್ಲಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಮುಖಂಡರಾದ ಎ. ನರಸಪ್ಪ, ಲಿಂಗಪ್ಪ  ಹಣವಾಳ, ಮರಿಯಪ್ಪ ಕೊಡ್ಲಿ, ಎಂ. ನರಸಿಂಹಲು, ಚಿಂತಲಕುಂಟಿ ನರಸಪ್ಪ, ಹುಸೇನಪ್ಪ ಕನಕಗಿರಿ, ಪರಿಶಮ್ಮ, ಮರಿಯಮ್ಮ ಮುಳ್ಳುರು, ನೀಲಮ್ಮ ಬಾಲಗುಡ್ಡಮು, ಸಂತೋಷಮ್ಮ ಸೇರಿದಂತೆ ಇತರರು ಭಾಗವಹಿಸಿದ್ದರು.

Advertisement

0 comments:

Post a Comment

 
Top