PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ ನ.   : ಕೆನರಾ ಬ್ಯಾಂಕ್ ಮತ್ತು ವಿ.ಆರ್.ಡಿ.ಎಮ್. ಟ್ರಸ್ಟನಿಂದ ಪ್ರಾಯೋಜಿತ  ದೇಶಪಾಂಡೆ ರುಡ್‌ಸೆಟ್ ಸಂಸ್ಥೆ (ರಿ), ಹಳಿಯಾಳ, ಇವರು ನಬಾರ್ಡ್ ಬೆಂಗಳೂರು ಪ್ರಾಯೋಜಕತ್ವದಲ್ಲಿ ದ್ವಿಚಕ್ರ ವಾಹನ ರಿಪೇರಿ ಹಾಗೂ ಕಂಪ್ಯೂಟರ್ ಹಾರ್ಡವೇರ್ ತರಬೇತಿಯು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ದೇಶಪಾಂಡೆ ರುಡ್‌ಸೆಟ್ ಸಂಸ್ಥೆಯಲ್ಲಿ ನಡೆಯಲಿದೆ. 
ದ್ವಿಚಕ್ರ ವಾಹನ ತರಬೇತಿಯು ಡಿಸೆಂಬರ್ ೧೨ ರಿಂದ ೩೦ ದಿನ, ಹಾಗೂ ಕಂಪ್ಯೂಟರ ಹಾರ್ಡವೇರ್ ತರಬೇತಿಯು ಡಿಸೆಂಬರ ೨೦ ರಿಂದ ೪೫ ದಿನಗಳವರೆಗೆ ತರಬೇತಿಗಳನ್ನು ನಡೆಸಲಾಗುವುದು. ತರಬೇತಿಯು ಊಟ, ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿರುತ್ತದೆ. ೧೮ ರಿಂದ ೪೫ ವರ್ಷದೊಳಗಿನ ಆಸಕ್ತ ಯುವಕರು ತರಬೇತಿಯಲ್ಲಿ ಭಾಗವಹಿಸಬಹುದು.
ಅರ್ಜಿ ಸಲ್ಲಿಸಲು ಇಚ್ಛಿಸುವವರು ತಮ್ಮ ಹೆಸರು, ವಿಳಾಸ, ದೂರವಾಣಿ/ಮೊಬೈಲ್ ಸಂಖ್ಯೆ, ಪಡೆಯಲಿಚ್ಛಿಸುವ ತರಬೇತಿ, ವಿದ್ಯಾರ್ಹತೆ, ತರಬೇತಿ ವಿಷಯದಲ್ಲಿ ಅನುಭವ ಮುಂತಾದ ವಿವರಗಳನ್ನೊಳಗೊಂಡ ಅರ್ಜಿಯನ್ನು ಬಿಳಿ ಹಾಳೆಯಲ್ಲಿ ಬರೆದು, ನಿರ್ದೇಶಕರು, ದೇಶಪಾಂಡೆ ರುಡ್‌ಸೆಟ್ ಸಂಸ್ಥೆ, ದಾಂಡೇಲಿ ರಸ್ತೆ, ಹಳಿಯಾಳ (ಉ.ಕ.), ಇವರಿಗೆ ನ. ೩೦ ರೊಳಗಾಗಿ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಮತ್ತು ಸಂಸ್ಥೆಗೆ ಬರುವಾಗ ತರಬೇಕಾದ ದಾಖಲಾತಿಗಳ ಬಗೆಗೆ ಸಂಸ್ಥೆಯ ದೂರವಾಣಿ ಸಂಖ್ಯೆ  ೦೮೨೮೪-೨೨೦೮೦೭, ೯೪೮೨೧೮೮೭೮೦ / ೯೪೮೩೪೮೫೪೮೯ ನ್ನು ಸಂಪರ್ಕಿಸಲು ಸಂಸ್ಥೆಯು ತಿಳಿಸಿದೆ. 

Advertisement

0 comments:

Post a Comment

 
Top