ಬಳ್ಳಾರಿ, ನ.20: ಬಳ್ಳಾರಿ ಗ್ರಾಮಾಂ ತರ ಕ್ಷೇತ್ರಕ್ಕೆ ನಡೆಯುತ್ತಿರುವ ಉಪ ಚುನಾವಣೆಯ ಪ್ರಚಾರದ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ನವರನ್ನು ಮತದಾರರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ನಿನ್ನೆ ಇಂಧನ ಸಚಿವೆ ಶೋಭಾ ಕರಂದ್ಲಾಜೆಯವರನ್ನು ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ಇಂದು ಈಶ್ವರಪ್ಪನವರನ್ನು ಹಿಗ್ಗಾಮುಗ್ಗ ತರಾ ಟೆಗೆ ತೆಗೆದುಕೊಂಡ ಮತದಾರರು, ‘‘ಮೊದಲು ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಅಭಿವೃದ್ಧಿ ಮಾಡಿ, ಅನಂತರ ಮತ ಕೇಳಲು ಬನ್ನಿ... ಸರಕಾರದಿಂದ ಈ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ’’ ಎಂದು ಹಿಡಿಶಾಪ ಹಾಕಿದರು.
ಬಿಜೆಪಿ ಅಭ್ಯರ್ಥಿ ಗಾದಿ ಲಿಂಗಪ್ಪನವರ ಪರ ನಿನ್ನೆ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದ ಇಂಧನ ಸಚಿವೆ ಶೋಭಾ ಕರಂದ್ಲಾಜೆಯವರನ್ನು ತರಾ ಟೆಗೆ ತೆಗೆದುಕೊಂಡ ಮತದಾರರು, ‘‘ವಿದ್ಯುತ್ ಇಲ್ಲದೆ ಜನ ಕತ್ತಲಲ್ಲಿ ಬದುಕುತ್ತಿದ್ದಾರೆ. ಚುನಾವಣೆ ಬಂದಾಗ ಕ್ಷೇತ್ರಕ್ಕೆ ಬಂದು ಭರವಸೆ ಕೊಟ್ಟು ಹೋಗುತ್ತೀರಿ, ಆ ಬಳಿಕ ಈ ಕಡೆ ಮುಖ ಮಾಡಲ್ಲ. ಮೊದಲು ವಿದ್ಯುತ್ ನೀಡಿ, ಆ ಬಳಿಕ ಮತ ಕೇಳಿ’’ ಎಂದು ಮತದಾರರು ಪ್ರಚಾರ ಸಭೆಯ ಮಧ್ಯೆ ವಾಗ್ವಾದ ನಡೆಸಿದ್ದರು. ಈ ಸಂದರ್ಭದಲ್ಲಿ ಶೋಭಾ ಕರಂದ್ಲಾಜೆ ಅಸಮಾಧಾನಗೊಂಡಿದ್ದು, ಸಭೆಯಲ್ಲಿದ್ದವರೊಂದಿಗೆ ಪ್ರತಿ ವಾಗ್ವಾದ ನಡೆಸಿ, ಅಲ್ಲಿಂದ ಕಾಲ್ಕಿತ್ತಿ ದ್ದರು. ಇಂದು ಮತ್ತೆ ಈ ಕ್ಷೇತ್ರದ ಮತದಾರರು ಈಶ್ವರಪ್ಪನವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
0 comments:
Post a Comment