PLEASE LOGIN TO KANNADANET.COM FOR REGULAR NEWS-UPDATES


Koppal Hindi Bed College
ಕೊಪ್ಪಳ  : ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ನಮ್ಮ ರಾಷ್ಟ್ರದ ಐಕ್ಯತೆಗೆ ಭಾಷಾ ಸೌಹಾರ್ದತೆ ಸಹಕಾರಿಯಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಟೇಲಿಂಗಾಚಾರ್ ಅವರು ಹೇಳಿದರು.
  ರಾಷ್ಟ್ರೀಯ ಐಕ್ಯತಾ ಸಪ್ತಾಹದ ಅಂಗವಾಗಿ ನಗರದ ಹಿಂದಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಏರ್ಪಡಿಸಲಾಗಿದ್ದ ಭಾಷಾ ಸೌಹಾರ್ದತಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
  ನಮ್ಮ ದೇಶ ಸಾಂಸ್ಕೃತಿಕ, ಸಾಮಾಜಿಕ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ವಿಶ್ವದ ಏಕೈಕ ರಾಷ್ಟ್ರವಾಗಿದೆ.  ನಮ್ಮ ದೇಶದ ವಿವಿಧತೆಯ ಸಂಸ್ಕೃತಿಯನ್ನು ಬೆಸೆಯುವ ಏಕೈಕ ಮಾರ್ಗವೆಂದರೆ ಅದು ಬಾಷಾ ಸೌಹಾರ್ದತೆಯಾಗಿದೆ.  ಭಾಷೆಯ ಬಗ್ಗೆ ಸಂಕುಚಿತ ಸ್ವಭಾವ ತೊರೆದು ವಿಶಾಲ ಮನೋಭಾವನೆ ರೂಢಿಸಿಕೊಳ್ಳುವತ್ತ ನಾಡಿನ ಜನತೆ ಮುಂದಾಗಬೇಕು.  ಭಾರತೀಯರೆಲ್ಲ ಒಂದು ಎಂಬ ಮನೋಭಾವನೆಗೆ ಭಾಷಾ ಸೌಹಾರ್ದತೆ ಸಹಕಾರಿಯಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಟೇಲಿಂಗಾಚಾರ್ ಅವರು ಹೇಳಿದರು.
  ಸಮಾರಂಭದಲ್ಲಿ ಭಾಗವಹಿಸಿದ್ದ ಹಿರಿಯ ಸಾಹಿತಿ ಹೆಚ್.ಎಸ್. ಪಾಟೀಲ್ ಅವರು ಮಾತನಾಡಿ ನಮ್ಮ ದೇಶದಲ್ಲಿ ಜಾತಿ, ಮತ, ಪ್ರದೇಶ, ಉಡುಗೆ, ತೊಡುಗೆ ಎಲ್ಲದರಲ್ಲಿ ವೈವಿಧ್ಯತೆಯನ್ನು ನಾವು ಕಾಣುತ್ತೇವೆ.  ಮುಖ್ಯವಾಗಿ ಭಾಷೆಯಲ್ಲಿಯೂ ಸಹ ವೈವಿಧ್ಯತೆ ಇದೆ.  ಆದರೆ ಭಾಷೆಯ ಮೂಲಕ ನಾವೆಲ್ಲರೂ ಭಾವನೆಗಳಲ್ಲಿ ಒಂದಾಗಬೇಕಿದೆ.  ಈ ಐಕ್ಯತೆಯನ್ನು ಸಾಧಿಸುವುದು ಕೇವಲ ಭಾಷಾ ಸೌಹಾರ್ದತೆಯಿಂದ ಎಂದು ಅಭಿಪ್ರಾಯಪಟ್ಟರು.
  ಮನುಷ್ಯನ ಭಾವನೆಗಳನ್ನು ಭಾಷೆಯ ಮೂಲಕ ಬೆಸೆಯಬಹುದು.  ಆತ್ಮೀಯ ಸಂಬಂಧವನ್ನು ಬೆಳೆಸುವುದು, ಭಾಷೆ, ಭಾಷೆಯಲ್ಲಿ ಸೌಹಾರ್ದತೆ ಮೂಡಿದಾಗಲೇ ರಾಷ್ಟ್ರೀಯ ಐಕ್ಯತೆ ಸಾಧ್ಯ.  ಸರ್ವ ಭಾಷಾ ಸಹಿಷ್ಣುತೆ ನಮ್ಮಲ್ಲಿ ಇರಬೇಕು ಎಂದು ಹಿಂದಿ ಬಿ.ಇಡಿ ಕಾಲೇಜು ಉಪನ್ಯಾಸಕ ಆನಂದ ಜಿ. ಸಾಳುಂಕಿ ಅವರು ಈ ಸಂದರ್ಭದಲ್ಲಿ ನುಡಿದರು.
  ಸಮಾರಂಭದ ಅಂಗವಾಗಿ ಕವಿಗೋಷ್ಠಿ ಏರ್ಪಡಿಸಲಾಯಿತು.  ಹಿಂದಿ ಬಿ.ಇಡಿ. ಕಾಲೇಜಿನ ಸಂಯೋಜಕ ಡಾ. ಕೆ.ಬಿ. ಬ್ಯಾಳಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.  ಡಾ. ಬಿ.ಆರ್. ಬೆಳ್ಳುಬ್ಬಿ, ಅನ್ವರ ಹುಸೇನ್, ಸಿ.ವಿ. ಜಡಿಯವರ್ ಮುಂತಾದವರು ಕವನಗಳ ವಾಚನ ಮಾಡಿದರು.  ಭಾಗ್ಯನಗರದ ಸರ್ಕಾರಿ ಪ.ಪೂ. ಕಾಲೇಜು ಪ್ರಾಂಶುಪಾಲ ಸಿ.ವಿ. ಜಡಿಯವರ್ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು.   ಚೌರಮ್ಮ ವಾಣಿಶ್ರೀ ಹಾಗೂ ಕರಿಯಮ್ಮ ಅವರು ಪ್ರಾರ್ಥಿಸಿದರು.  ಸರ್ವ ಶಿಕ್ಷಣ ಅಭಿಯಾನದ ಸಹಾಯಕ ಸಮನ್ವಯಾಧಿಕಾರಿ ಸಂಗಪ್ಪ ಕಿರಸೂರು ಅವರು ಸ್ವಾಗತಿಸಿ, ವಂದಿಸಿದರು

Advertisement

0 comments:

Post a Comment

 
Top