PLEASE LOGIN TO KANNADANET.COM FOR REGULAR NEWS-UPDATES


ಹುಬ್ಬಳ್ಳಿ, ನ.26: ನಗರದ ಸಬರ್‌ಬಂದ್ ಪೊಲೀಸ್ ಠಾಣಾ ವ್ಯಾಪ್ತಿಯ ರೈಲ್ವೆ ಇಲಾಖೆಯ ಮೈದಾನದಲ್ಲಿ ಕ್ರೈಸ್ತ ಸಂಘಟನೆಗಳು ಆಯೋಜಿಸಿದ್ದ ‘ಏಸು ಕ್ರಿಸ್ತ ಉತ್ಸವ’ಕ್ಕೆ ಸಂಘಪರಿವಾರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣ ವಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಮಧ್ಯಸ್ಥಿಕೆಯಿಂದ ಪರಿಸ್ಥಿತಿ ತಿಳಿಯಾಗಿದ್ದು, ಏಸು ಕ್ರಿಸ್ತನ ಉತ್ಸವಕ್ಕೆ ಅನುಮತಿ ನೀಡಲಾಗಿದೆ.

ಇಲ್ಲಿನ ‘ಚಿಲ್ಲಿ’ ಮೈದಾನದಲ್ಲಿ ಮೂರು ದಿನ ಕಾಲ ಏಸು ಕ್ರಿಸ್ತ ಉತ್ಸವಕ್ಕೆ ಕ್ರೈಸ್ತ ಸಂಘಟನೆಗಳು ಪೊಲೀಸ್ ಇಲಾಖೆ ಯಿಂದ ಅನಮತಿ ಪಡೆದುಕೊಂಡಿದ್ದರು. ಆದರೆ, ವಿಎಚ್‌ಪಿ, ಬಜರಂಗದಳ ಹಾಗೂ ಸಂಘ ಪರಿವಾರದ ಕಾರ್ಯಕರ್ತರು ಸಭೆ ನಡೆಸಲು ರೈಲ್ವೆ ಇಲಾಖೆಯಿಂದ ಅನುಮತಿ ಪಡೆದಿಲ್ಲ. ಆದರೂ, ಪೊಲೀಸ್ ಇಲಾಖೆ ಅನುಮತಿ ನೀಡಿದ್ದು, ಕ್ರೈಸ್ತೀಕರಣಕ್ಕೆ ಬೆಂಬಲ ನೀಡಿದ್ದಾರೆ. ಅಂತಹ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿ ಶನಿವಾರ ನಗರದ ವಿವಿಧೆಡೆ ಪ್ರತಿಭಟನೆ, ರಸ್ತೆ ತಡೆ, ಕಲ್ಲು ತೂರಾಟ ನಡೆಸಿದರು. ಅಲ್ಲದೆ, ರಸ್ತೆ ಮಧ್ಯೆ ಟಯರ್ ಸುಟ್ಟು ಕಾನೂನು ಸುವ್ಯವಸ್ಥೆಗೆ ಧಕ್ಕೆಯುಂಟು ಮಾಡಲು ಯತ್ನಿಸಿದರು.

ಆ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಕ್ರೈಸ್ತ ಮುಖಂಡರು ಹಾಗೂ ವಿಎಚ್‌ಪಿ, ಬಜರಂಗ ದಳದ ಮುಖಂಡರ ಸಂಧಾನ ಸಭೆ ನಡೆಯಿತು. ಉಭಯ ಮುಖಂಡರ ಮನವೊಲಿಸುವಲ್ಲಿ ಜಗದೀಶ್ ಶೆಟ್ಟರ್ ಯಶಸ್ವಿಯಾಗಿ ದ್ದಾರೆ. ಕ್ರೈಸ್ತ ಸಂಘಟನೆಗಳು ನೆಡೆಸಲುದ್ದೇಶಿಸಿದ್ದ ಏಸು ಕ್ರಿಸ್ತ ಉತ್ಸವಕ್ಕೆ ಅನುಮತಿ ನೀಡಲು ನಿರ್ಧರಿಸಿದ್ದಾರೆ.

ಈ ಸಂದರ್ಭದಲ್ಲಿ ಮಾಧ್ಯಮ ಗಳೊಂದಿಗೆ ಮಾತನಾಡಿದ ಸಚಿವ ಜಗದೀಶ್ ಶೆಟ್ಟರ್, ಕ್ರೈಸ್ತ ಸಂಘಟನೆ ಗಳು ಆಯೋಜಿಸಿರುವ ಮೂರು ದಿನಗಳ ಏಸು ಕ್ರಿಸ್ತನ ಉತ್ಸವಕ್ಕೆ ಅನುಮತಿ ನೀಡಲಾಗಿದೆ. ಯಾವುದೇ ಕಾರಣಕ್ಕೂ ಬಲವಂತದ ಮತಾಂತರಕ್ಕೆ ಅವಕಾಶವಿಲ್ಲ ಎಂದು ಎಚ್ಚರಿಸಿದರು.

ಸಂಧಾನ ಸಭೆಯಲ್ಲಿ ಸಂಸದ ಪ್ರಹ್ಲಾದ್ ಜೋಶಿ, ಕ್ರೈಸ್ತ ಸಂಘಟನೆಗಳ ಮುಖಂಡರು ಹಾಗೂ ವಿಎಚ್‌ಪಿ, ಬಜರಂಗದಳದ ಮುಖಂಡರು ಪಾಲ್ಗೊಂಡಿದ್ದರು

Advertisement

0 comments:

Post a Comment

 
Top