PLEASE LOGIN TO KANNADANET.COM FOR REGULAR NEWS-UPDATES

ಹೊಸದಿಲ್ಲಿ, ಆ.23: ಉಪವಾಸ ನಿರತ ಅಣ್ಣಾ ಹಝಾರೆ ಬಳಗದೊಂದಿಗೆ ಸಂಧಾನ ನಡೆಸಲು ಕೇಂದ್ರದ ಯುಪಿಎ ಸರಕಾರವು ತನ್ನ ‘ಸಂಕಷ್ಟಹಾರಕ’ ವಿತ್ತ ಸಚಿವ ಪ್ರಣವ್ ಮುಖರ್ಜಿಯವರನ್ನು ನೇಮಿಸಿದೆ. ಇದೇ ಸಂದರ್ಭದಲ್ಲಿ ಅಣ್ಣಾ ಬಳಗದ ಜನಲೋಕಪಾಲ ಕರಡಿನ ಕೆಲವು ಪ್ರಸ್ತಾಪಗಳನ್ನು ಬಿಜೆಪಿ ತಿರಸ್ಕರಿಸಿದ್ದು, ಮಸೂದೆ ಅಂಗೀಕಾರಕ್ಕೆ ಅಣ್ಣಾ ಬಳಗ ವಿಧಿಸಿರುವ ಗಡುವು ಅಂಗೀಕಾರಾರ್ಹವಲ್ಲವೆಂದು ಹೇಳಿದೆ.
ಅಣ್ಣಾ ಬಳಗದ ಅರವಿಂದ ಕೇಜ್ರಿವಾಲ್, ಮುಖರ್ಜಿಯವರೊಂದಿಗೆ ತಮ್ಮ ಪರವಾಗಿ ಯಾರು ಮಾತುಕತೆ ನಡೆಸುವರೆಂಬುದನ್ನು ಅಣ್ಣಾ ನಿರ್ಧರಿಸಲಿದ್ದಾರೆಂದು ಇಂದು ಮಾಧ್ಯಮಗಳಿಗೆ ತಿಳಿಸಿದರು. ಮುಖರ್ಜಿ, ಎ.ಕೆ. ಆ್ಯಂಟನಿ ಹಾಗೂ ಪಿ. ಚಿದಂಬರಂರೊಂದಿಗೆ ಚರ್ಚೆ ನಡೆಸಿದ ಪ್ರಧಾನಿ ಮನಮೋಹನ್ ಸಿಂಗ್, ಉಪವಾಸ ಕೊನೆಗೊಳಿಸುವಂತೆ ಕೋರಿ ಹಝಾರೆಯವರಿಗೆ ಪತ್ರವೊಂದನ್ನು ಬರೆದಿದ್ದಾರೆ. ಸರಕಾರವು ಅವರ ಆರೋಗ್ಯದ ಬಗ್ಗೆ ಕಳವಳ ಹೊಂದಿದೆಯೆಂದು ಪ್ರಧಾನಿ ಪತ್ರದಲ್ಲಿ ಹೇಳಿದ್ದಾರೆ.
ಹಝಾರೆ ಬಳಗದ ಜನಲೋಕಪಾಲ ಮಸೂದೆಯನ್ನು ಸಂಸದೀಯ ಸ್ಥಾಯಿ ಸಮಿತಿಗೆ ಪರಿಶೀಲನೆಗಾಗಿ ಕಳುಹಿಸಬಹುದೇ ಎಂಬುದನ್ನು ಲೋಕಸಭಾಧ್ಯಕ್ಷೆಯಲ್ಲಿ ಸರಕಾರ ವಿಚಾರಿಸುವುದೆಂದು ಪ್ರಧಾನಿ ಪತ್ರದಲ್ಲಿ ತಿಳಿಸಿದ್ದಾರೆ. ಇದೇ ವೇಳೆ, ಸಂಸದ ರಾಹುಲ್ ಗಾಂಧಿ ಪ್ರಧಾನಿಯನ್ನು ಭೇಟಿಯಾಗಿ ಕಾರ್ಯವ್ಯೆಹದ ಕುರಿತು ಚರ್ಚೆ ನಡೆಸಿದ್ದಾರೆ. ಪ್ರಧಾನಿ ಮಾತುಕತೆಯ ಮೂಲಕ ಸಮಸ್ಯೆಗೆ ಪರಿಹಾರ ಬಯಸಿದ್ದಾರೆಂದು ಕಾನೂನು ಸಚಿವ ಸಲ್ಮಾನ್ ಖುರ್ಶಿದ್ ತನ್ನ ಭೇಟಿಯ ವೇಳೆ ಅರವಿಂದ ಕೇಜ್ರಿವಾಲ್‌ಗೆ ತಿಳಿಸಿದರೆಂದು ಆ ವೇಳೆ ಜತೆಯಿದ್ದ ಹಕ್ಕು ಕಾರ್ಯಕರ್ತ ಅಖಿಲ್ ಗೊಗೋಯಿ ತಿಳಿಸಿದ್ದಾರೆ.
ಮುಖರ್ಜಿಯವರೊಂದಿಗೆ ಮಾತುಕತೆ ಪ್ರಕ್ರಿಯೆಯ ಕುರಿತು ತಾವು ಚರ್ಚಿಸಿದೆವೆಂದು ಅವರು ಹೇಳಿದ್ದಾರೆ. ಸರಕಾರದೊಂದಿಗೆ ಮಾತುಕತೆಗೆ ಕೇಜ್ರಿವಾಲ್ ಹಾಗೂ ವಕೀಲ ಪ್ರಶಾಂತ್ ಭೂಷಣ್‌ರನ್ನು ಹಝಾರೆ ನೇಮಿಸಬಹುದೆಂಬ ಸೂಚನೆ ನೀಡಿದ ಅವರು, ಆದಾಗ್ಯೂ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವ ಅಧಿಕಾರ ಹಝಾರೆಯವರಿಗೆ ಸೇರಿದೆ ಎಂದಿದ್ದಾರೆ. ಇದೇ ವೇಳೆ ಈಗ ಮಂಡಿಸಲಾಗಿರುವ ಈಗ ಮಂಡಿಸಲಾಗಿರುವ ಲೋಕಪಾಲ ಮಸೂದೆಯನ್ನು ಹಿಂದೆಗೆದು ಪರಿಣಾಮಕಾರಿ ಮಸುದೆಯನ್ನು ಮಂಡಿಸುವಂತೆ ಬಿಜೆಪಿಯಿಂದು ಆಗ್ರಹಿಸಿದೆ. ಆದಾಗ್ಯೂ, ಅಣ್ಣಾ ಬಳಗದ ಜನಲೋಕಪಾಲ ಕರಡಿನ ಕೆಲವು ಪ್ರಸ್ತಾಪಗಳು ಹಾಗೂ ಮಸೂದೆ ಅಂಗೀಕಾರಕ್ಕೆ ಅದು ವಿಧಿಸಿರುವ ಗಡುವು ಅಂಗೀಕಾರಾರ್ಹವಲ್ಲವೆಂದು ಪಕ್ಷ ಹೇಳಿದೆ.
ಸ್ಥಾಯಿ ಸಮಿತಿಯ ಬಳಿಯಿರುವ ಈಗಿನ ಮಸೂದೆ ದುರ್ಬಲ ಹಾಗೂ ನಿಷ್ಪ್ರಯೋಜಕ. ಅದನ್ನು ಹಿಂದೆಗೆದು ‘ಪರಿಣಾಮಕಾರಿ’ ಮಸೂದೆಯನ್ನು ಮಂಡಿಸಬೇಕೆಂದು ರಾಜ್ಯಸಭೆಯ ಬಿ.ಜೆ.ಪಿ ಉಪನಾಯಕ ಎಸ್.ಎಸ್. ಅಹ್ಲುವಾಲಿಯ ಪತ್ರಕರ್ತರೊಡನೆ ಆಗ್ರಹಿಸಿದರು. ‘ಅಣ್ಣಾ ಬಳಗದ ಜನಲೋಕಪಾಲ ಮಸೂದೆಗೆ ಒಪ್ಪಿಗೆ ಇದೆಯೇ’ ಎಂಬ ಪ್ರಶ್ನೆಗೆ, ಕರಡಿನ ಕೆಲವು ಕರಡಿನ ಕೆಲವು ಭಾಗ ಒಪ್ಪಿಗೆಯಿದೆ. ಇನ್ನು ಕೆಲವು ಭಾಗವನ್ನು ಸುಧಾರಿಸಬಹುದಾಗಿದೆ. ಮತ್ತೆ ಕೆಲವೊಂದು ಪ್ರಸ್ತಾಪಗಳಿಗೆ ತಮ್ಮ ಒಪ್ಪಿಗೆಯಿಲ್ಲವೆಂದು ಅವರು ಉತ್ತರಿಸಿದರು. ಮಸೂದೆಯನ್ನು ಆ.30ರ ಮೊದಲು ಅಂಗೀಕರಿಸಬೇಕೆಂಬ ಅಣ್ಣಾ ಬಳಗದ ಗಡುವಿನ ಕುರಿತಾಗಿಯೂ ಪಕ್ಷಕ್ಕೆ ಅಸಮಾಧಾನವಿದೆಯೆಂದ ಅಹ್ಲುವಾಲಿಯ, ಇದಕ್ಕೆ ಸಂಸದೀಯ ನಡವಳಿಕೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದ್ದು, ಅದಕ್ಕೆ ಸಮಯ ತಗಲಬಹುದು ಎಂದರು

Advertisement

0 comments:

Post a Comment

 
Top