PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ ಆ. ೫ : ಕಲಾವಿದರಲ್ಲಿಯ ರಂಗ ಪ್ರತಿಭೆಯನ್ನು ಪ್ರೋತ್ಸಾಹಿಸಿ ಬೆಳೆಸುವ ಹಿನ್ನೆಲೆಯಲ್ಲಿ ರಂಗಯಾನ ) ಮತ್ತು ಸಮುದಾಯ ಸಾಂಸ್ಕೃತಿಕ ಕಲಾ ಸಂಸ್ಥೆ ಇವುಗಳ ಜಂಟೀ ಆಶ್ರಯದಲ್ಲಿ ಆ. ೨೪, ೨೫ ಹಾಗೂ ೨೬ ರಂದು ಮೂರು ದಿನಗಳ ಕಾಲ ರಂಗ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಿದೆ.
ಈ ಶಿಬಿರದಲ್ಲಿ ಮೂರು ದಿನಗಳ ಕಾಲ ರಂಗ ಭೂಮಿಗೆ ಸಂಬಂಧಿಸಿದ ಉಪನ್ಯಾಸಗಳು ಜರುಗುವುವು. ಪತ್ರಕರ್ತ ಸೋಮರಡ್ಡಿ ಅಳವಂಡಿ ರಂಗಭೂಮಿ ಮತ್ತು ಮಾಧ್ಯಮ, ಡಾ. ವಿ. ಬಿ. ರಡ್ಡೇರ ರಂಗಭೂಮಿ ಇತಿಹಾಸ, ನೀನಾಸಂ ಪದವೀಧರ ರಂಗನಾಥ ಕೋಳೂರು ಅಭಿನಯ ಹಾಗೂ ನಿರ್ದೇಶನ, ಸರಕಾರಿ ಅಭಿಯೋಜಕ ಬಿ.ಎಸ್. ಪಾಟೀಲ್ ಜಾನಪದ ರಂಗಭೂಮಿ, ಹೊಸಪೇಟೆ ಆಕಾಶವಾಣಿ ಕಾರ್ಯಕ್ರಮ ಸಂಯೋಜಕ ಮಂಜುನಾಥ ಡೊಳ್ಳಿನ ಬಾನುಲಿ ನಾಟಕಗಳು, ರಂಗ ಪುತ್ಥಳಿ ರಘುನಂದನ ಬೆಂಗಳೂರು ತೊಗಲು ಬೊಂಬೆಯಾಟ, ಎಸ್. ಎಂ. ಕಂಬಾಳಿಮಠ ವಸ್ತ್ರಾಲಂಕಾರ, ರಂಗ ಪರಿಕರ ಹಾಗೂ ರಂಗ ಸಜ್ಜಿಕೆ, ಬೆಳಕು ವಿನ್ಯಾಸ ಮತ್ತು ಪ್ರಸಾದನ ನೀನಾಸಂ ಪದವೀಧರ ಹೇಮರಾಜ ವೀರಾಪುರ, ರಂಗ ವ್ಯಾಯಾಮ ಕಲಾವಿದ ವೈ. ಬಿ. ಜೂಡಿ, ಶಾರದಾ ಸಂಗೀತ ಪಾಠ ಶಾಲೆ ಕಿನ್ನಾಳ ರಂಗ ಸಂಗೀತ ವಿಷಯಗಳ ಕುರಿತು ಉಪನ್ಯಾಸ ನೀಡುವರು.
ಕೊಪ್ಪಳ ಜಿಲ್ಲೆಯ ೧೮ ರಿಂದ ೩೦ ವರ್ಷದೊಳಗಿನ ಆಸಕ್ತ ಪುರುಷ ಮತ್ತು ಮಹಿಳಾ ಕಲಾವಿದರು ರಂಗ ತರಬೇತಿ ಶಿಬಿರದಲ್ಲಿ ಭಾಗವಹಿಸಬಹುದಾಗಿದೆ. ಭಾಗವಹಿಸುವ ಎಲ್ಲ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಗುವುದು ಎಂದು ಸಮುದಾಯ ಸಾಂಸ್ಕೃತಿಕ ಕಲಾ ಸಂಸ್ಥೆಯ ಅಧ್ಯಕ್ಷ ವೈ. ಬಿ. ಜೂಡಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ. ೯೫೩೮೮೨೫೧೭೩ ನ್ನು ಸಂಪರ್ಕಿಸಲು ಕೋರಲಾಗಿದೆ.

Advertisement

0 comments:

Post a Comment

 
Top