ಕೊಪ್ಪಳ : ತೊಂಬತ್ತೈದರ ಇಳಿವಯಸ್ಸಿನಲ್ಲಿಯೂ ತಮ್ಮ ಜೀವನೋತ್ಸಾಹ,ಅಕ್ಷರ ಪ್ರೀತಿಯನ್ನು ಬತ್ತದಂತೆ ನೋಡಿಕೊಂಡು ಕ್ರಿಯಾಶೀಲತೆಯನ್ನು ಮೆರೆದ ಹಿರಿಯ ಸಂಶೋಧಕ ದಿ.ಬಿ.ಸಿ.ಪಾಟೀಲರ ಶ್ರದ್ಧೆ ಮತ್ತು ಕೆಲಸಗಳು ನಮಗೆಲ್ಲ ಮಾದರಿಯಾಗಿವೆ ಎಂದು ಧಾರವಾಡ ಕರ್ನಾಟಕ ವಿ.ವಿ.ಯ ನಿವೃತ್ತ ಪ್ರಾಧ್ಯಾಪಕ ಡಾ.ಬಿ.ವಿ.ಶಿರೂರ ಹೇಳಿದ್ದಾರೆ.
ಅವರು ನಗರದ ದಿ.ಬಿ.ಸಿ.ಪಾಟೀಲರ ನಿವಾಸದ ಆವರಣದಲ್ಲಿ ಕೊಪ್ಪಳ ಜಿಲ್ಲಾ ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಜಂಟಿಯಾಗಿ ಹಮ್ಮಿಕೊಂಡಿದ್ದ ಬಿ.ಸಿ.ಪಾಟೀಲ ಒಂದು ಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಬಿ.ಸಿ.ಪಾಟೀಲರು ಶ್ರೀಗವಿಸಿದ್ಧೇಶ್ವರ ಪ್ರೌಢಶಾಲೆಯ ಮೊದಲ ಮುಖ್ಯೋಪಾಧ್ಯಾಯರಾಗಿ ಮಾಡಿದ ಕಾಂii ಸ್ತುತ್ಯಾರ್ಹವಾದುದು.ಕೊಪ್ಪಳದ ಪ್ರಾಚೀನತೆಯನ್ನು ಗ್ರಹಿಸಿದ್ದ ಪಾಟೀಲರಿಗೆ ಇದನ್ನು ನಾಡಿಗೆ ವಿಶಾಲವಾಗಿ ಪರಿಚಯಿಸಬೇಕೆಂಬ ಹಂಬಲವಿತ್ತು, ಆ ನಿಟ್ಟಿನಲ್ಲಿ ತಮ್ಮ ಇಳಿವಯಸ್ಸಿನಲ್ಲಿಯೂ ಬಹಳಷ್ಟು ಶ್ರಮವಹಿಸಿ ಕೆಲಸಮಾಡಿದರು . ಅವರ ಕನಸುಗಳನ್ನು ನನಸು ಮಾಡಲು ನಾವೆಲ್ಲ ಶ್ರಮಿಸಬೇಕು ಎಂದರು.
ಬಿ.ಸಿ.ಪಾಟೀಲರು ರಚಿಸಿದ ಕಾಯಕಯೋಗಿ ನಾಟಕದ ಕುರಿತು ಮಾತನಾಡಿದ ಪತ್ರಕರ್ತ ಶರಣಪ್ಪ ಬಾಚಲಪೂರ, ಬಸವಣ್ಣನವರ ನೇತೃತ್ವದಲ್ಲಿ ಹನ್ನೆರಡನೇ ಶತಮಾನದಲ್ಲಿ ನಡೆದ ಕಲ್ಯಾಣ ಕ್ರಾಂತಿಯ ಕುರಿತು ಸಾಕಷ್ಟು ಕೃತಿಗಳು ಬಂದಿವೆ ಆದರೆ ಅಡುಭಾಷೆಯಲ್ಲಿ ತುಂಬ ಸರಳವಾಗಿ ಎಲ್ಲರ ಗ್ರಹಿಕೆಗೂ ನಿಲುಕುವಂತೆ ನಾಟಕ ರಚಿಸಿದ್ದಾರೆ ಎಂದರು.
ಬಿ.ಸಿ.ಪಾಟೀಲರ ವಿದ್ಯಾರ್ಥಿಯಾಗಿ ನಂತರ ಸಹೋದ್ಯೋಗಿಯಾಗಿದ್ದಾಗಿನ ತಮ್ಮ ಅನುಭವಗಳನ್ನು ಸಾಹಿತಿ.ಹೆಚ್.ಎಸ್.ಪಾಟೀಲ ಸ್ಮರಿಸುತ್ತ, ಕೊಪ್ಪಳದ ಗತಕಾಲದ ನೆನಪುಗಳನ್ನು ಬಿಚ್ಚಿಟ್ಟರು . ಬಿ.ಸಿ.ಪಾಟೀಲರ ಅಭಿನಂದನಾ ಗ್ರಂಥವನ್ನು ಅವರ ಜೀವಿತಾವಧಿಯಲ್ಲಿಯೇ ತರಬೇಕೆಂಬ ಇಚ್ಛೆ ಕೊನೆಗೂ ಈಡೇರಲೇ ಇಲ್ಲ, ಈಗ ಸಂಸ್ಮರಣ ಗ್ರಂಥವನ್ನಾದರೂ ಹೊರತರಬೇಕು ಎಂದರು.
ಸಾಹಿತಿ ಮಹಾಂತೇಶ ಮಲ್ಲನಗೌಡರ, ಬಿ.ಸಿ.ಪಾಟೀಲರ ವರಕವಿ ನಾಟಕದ ಕುರಿತು ಮಾತನಾಡುತ್ತ,
ದ.ರಾ.ಬೆಂದ್ರೇಯವರ ಜೀವನ ಸಾಧನೆಗಳನ್ನು ದಾಖಲಿಸುವಾಗ ಯಾವುದೇ ವಿವಾzUಳಿಗೆ ಆಸ್ಪದ ಸಿಗಬಾರದು ಎಂಬ ಎಚ್ಚರ ವಹಿಸಿ ಅಧಿಕೃತ ಮಾಹಿತಿಯನ್ನು ಕಲೆಹಾಕಲು ಅವರು ಪಟ್ಟ ಶ್ರಮವನ್ನು ವಿವರಿಸಿದರು.
ಬಿ.ಸಿ.ಪಾಟೀಲರ ಕಿರಿಯ ಸಹೋದರ, ಮಾಜಿ ಸಚಿವ ಮುಂಡರಗಿಯ ಎಸ್.ಎಸ್.ಪಾಟೀಲ ಮಾತನಾಡಿ ನನ್ನ ಅಣ್ಣನ ಬಗೆಗೆ ಅವನ ಜೀವಿತಾವಧಿಯಲ್ಲಿ ಹೆಚ್ಚು ತಿಳಿದುಕೊಳ್ಳದೆ ಹೋದುದು
ವಿಷಾದವುಂಟುಮಾಡಿದೆ. ಪ್ರಸ್ತುತ ರಾಜಕಾರಣ ತುಂಬ ಅಧೋಗತಿಗೆ ಇಳಿದಿದೆ, ಸಮಾಜವನ್ನು ಎಚ್ಚರಿಕೆಯ ಸ್ಥಿತಿಯಲ್ಲಿಡುವ ಹೊಣೆಗಾರಿಕೆ ಸಾಹಿತಿಗಳ ಮೇಲೆ ಹೆಚ್ಚಿದೆ ಎಂದರು.
ಸಮಾರಂಭದ ಅಧ್ಯಕ್ಷತೆವಹಿಸಿದ್ದ ಜಿಲ್ಲಾ ಕ.ಸಾ.ಪ.ಅಧ್ಯಕ್ಷ ಶೇಖರಗೌಡ ಮಾಲಿಪಾಟೀಲ ಮಾತನಾಡಿ
ಬಿ.ಸಿ.ಪಾಟೀಲರನ್ನು ಒಬ್ಬ ಸಾಹಿತಿಯಾಗಿ,ಸಂಶೋಧಕನಾಗಿ ನೋಡಿದ್ದಕ್ಕಿಂತ ಆದರ್ಶ ಶಿಕ್ಷಕನಾಗಿ ಅವರನ್ನು ಕಾಣುತ್ತದ್ದೆವು,ಅವರ ಅಗಲಿಕೆ ಸಾಂಸ್ಕೃತಿಕ ಲೋಕವನ್ನು ಬಡವಾಗಿಸಿದೆ ಎಂದರು.
ಮುಂಡರಗಿಯ ಶ್ರೀಅನ್ನದಾನ ಮಹಸ್ವಾಮಿಗಳು ಸಮಾರಂಭದ ಸಾನಿಧ್ಯವನ್ನು ವಹಿಸಿದ್ದರು.
ಶ್ರೀಮತಿ ಸುಮಂಗಲಾ ಬಿ.ಪಾಟೀಲ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಬಿ.ಸಿ.ಪಾಟೀಲರ ಜೀವನ ಮತ್ತು ಸಾಧನೆಯ ಕುರಿತ ಛಾಯಾ ಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು.
ಅಂಬಿಕಾ ಉಪ್ಪಾರ ಮತ್ತು ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ಜರುಗಿತು. ರಾಜಶೇಖರ ಆಂಗಡಿ ಸ್ವಾಗತಿಸಿದರು,ಮಂಜುನಾಥ.ಡಿ.ಡೊಳ್ಳಿನ ಪ್ರಾಸ್ತಾವಿಕವಾಗಿ ಮಾತನಾಡಿದರು, ಜಿ.ಎಸ್.ಗೋನಾಳ ಕಾರ್ಯಕ್ರಮ ನಿರೂಪಿಸಿದರು,ಶಿವಕುಮಾರ ಕುಕನೂರ ವಂದಿಸಿದರು.

0 comments:
Post a Comment