PLEASE LOGIN TO KANNADANET.COM FOR REGULAR NEWS-UPDATES



ಕಾವ್ಯ ಹುಟ್ಟುವುದೇ ನಿಶ್ಯಬ್ದದಲ್ಲಿ. ಕವಿತೆ ಎನ್ನುವುದು ಕರಕುಶಲ ಕಲೆಯಂತೆ. ಅಕ್ಷರ ಎನ್ನುವುದು ಮಹಾಬೆಳಕು. ಅದು ಎಲ್ಲರಿಗೂ ದಾರಿ ತೋರಿದೆ. ಕಾವ್ಯ ಎಂದರೆ ಮೌನ ಮಾತಾಗುವ ಬಗೆ. ದುಷ್ಟರು ಎಂದಿಗೂ ಕವಿಗಳಾಗುವುದಿಲ್ಲ. ಕವಿಗಳಿಂದ ಯಾವತ್ತೂ ಪ್ರಪಂಚಕ್ಕೆ ಕೆಟ್ಟದ್ದಾಗಿಲ್ಲ ಎಂದು ಖ್ಯಾತ ಬರಹಗಾರ ಈರಪ್ಪ ಕಂಬಳಿ ಹೇಳಿದರು. ಅವರು ಕನ್ನಡನೆಟ್.ಕಾಂ ಕವಿಸಮೂಹ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ೫೯ನೇ ಕವಿಸಮಯದಲ್ಲಿ ಮಾತನಾಡುತ್ತಿದ್ದರು.
ಪ್ರೇರಣೆ ಮತ್ತು ಅನುಕರಣೆ ಯಾವತ್ತೂ ಇರುವಂಥಹದ್ದು ಬೆಳೆಯುವ ಬರಹಗಾರರಲ್ಲಿ ಇದು ಸಾಮಾನ್ಯ. ಬೆಳೆಯುವ ಹಂತದಲ್ಲಿರುವವರು ಹಿರಿಯರ ಸಾಹಿತ್ಯ, ಕಾವ್ಯ ಓದಬೇಕು. ಕವಿತೆ ಎಂದರೆ ಹಣತೆ ಹಚ್ಚಿದಂತೆ. ಸಾಮಾಜಿಕ ಜವಾಬ್ದಾರಿಯನ್ನು ಅರಿತು ಕವಿ ಬರೆಯಬೇಕು ಎಂದರು.
ಇದಕ್ಕೂ ಮೊದಲು ನಡೆದ ಕವಿಗೋಷ್ಠಿಯಲ್ಲಿ ಮುನಿಯಪ್ಪ ಹುಬ್ಬಳ್ಳಿ- ದಹನ, ಕೆ.ಬಿ.ಬ್ಯಾಳಿ-ನಾವು ನಗಬೇಕು ರುಬಾಯಿ, ಪುಷ್ಪಾ- ಕೊನೆತನಕ, ಡಾ. ಮಮ್ತಾಜ್ ಬೇಗಂ- ಕಂದನ ಕಳವಳ, ಲಲಿತಾ ಭಾವಿಕಟ್ಟಿ- ಕಾಯುವ ಕಾಯಕ, ಕಾಡ ಮಲ್ಲೆ, ಪುಷ್ಪಲತಾ ಏಳುಬಾವಿ- ತುಂಗೆಯ ತೀರದ ದಾಹ, ಸುಮತಿ ಹಿರೇಮಠ- ನೆನಕೆಯ ಗೂಡು, ಡಾ.ರೇಣುಕಾ ಕರಿಗಾರ-ಸಂಸ್ಕೃತ ಕವನ, ವಿಠ್ಠಪ್ಪ ಗೋರಂಟ್ಲಿ- ಬೆಳಕಿನ ಹಂಬಲ, ಗುರುರಾಜ ದೇಸಾಯಿ- ಕಪ್ಪು ಹಣ, ಎನ್. ಜಡೆಯಪ್ಪ- ತುಂಗೆಯ ತೀರದ ದಾಹ, ವೀರಣ್ಣ ಹುರಕಡ್ಲಿ- ನಮ್ಮಜ್ಜ , ಅರುಣಾ ನರೇಂದ್ರ-ರಂಗೋಲಿ, ವಿ.ಬಿ.ರಡ್ಡೇರ್- ಬರವಿದ್ದರೇನಂತೆ,ನಟರಾಜ ಸವಡಿ- ಪ್ರೇಮೋತ್ಸವ, ಸಿರಾಜ್ ಬಿಸರಳ್ಳಿ- ಪ್ರೀತಿಯೆಂದರೆ,ಈರಪ್ಪ ಕಂಬಳಿ-ಮಹಾಭಾರತದ ವೀರರು ಕವನಗಳನ್ನು ವಾಚನ ಮಾಡಿದರು.
ಕಾರ್‍ಯಕ್ರಮದಲ್ಲಿ ನಾಗೇಂದ್ರ ಪ್ರಸಾದ, ಶಿವಪ್ಪ ನೀರಲಗಿ, ಶಿವಾನಂದ ಹೊದ್ಲೂರ, ಹನುಮಂತಪ್ಪ ಅಂಡಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಿರೂಪಿಸಿದರೆ ಎನ್ .ಜಡೆಯಪ್ಪ ವಂದಿಸಿದರು.

Advertisement

0 comments:

Post a Comment

 
Top