PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ಜೂ. : ಕೊಪ್ಪಳ ನಗರದ ಕುಷ್ಟಗಿ ರಸ್ತೆಯಲ್ಲಿ ರಾಜ್ಯ ಸರಕಾರದಿಂದ ಮಂಜೂರಾದ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ವಾಲ್ಮೀಕಿ ಸಮುದಾಯ ಭವನಕ್ಕೆ ಇಂದು ಉಸ್ತುವಾರಿ ಸಚಿವರಿಂದ ಭೂಮಿ ಪೂಜೆ ನೆರವೇರುವದು.
ನಾಳೆ ಜೂನ ೨೫ ರಂದು ಮದ್ಯಾಹ್ನ ೧೨-೩೦ ಕ್ಕೆ ಕುಷ್ಟಗಿ ರಸ್ತೆಯ ಸಮುದಾಯ ಭವನದ ಜಾಗದಲ್ಲಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿರವರು ಮಾಜಿ ಶಾಸಕ ಹಾಗೂ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಸಂಗಣ್ಣ ಕರಡಿ ಅಧ್ಯಕ್ಷತೆಯಲ್ಲಿ ಭೂಮಿ ಪೂಜೆ ನೆರವೇರಿಸುವರು.
ಈ ಸಂದರ್ಭದಲ್ಲಿ ಸಂಸದರು, ಶಾಸಕರುಗಳು, ಜಿ. ಪಂ., ತಾ. ಪಂ. ಸರ್ವ ಸದಸ್ಯರು, ಚುನಾಯಿತ ಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು, ಗಣ್ಯರು ಭಾಗವಹಿಸುವರು. ಮಾಜಿ ಶಾಸಕ ಸಂಗಣ್ಣ ಕರಡಿಯವರು ತಮ್ಮ ವಿಶೇಷ ಆಸಕ್ತಿಯಿಂದ ತಮ್ಮ ತಾಯಿ ದಿ. ಶ್ರೀಮತಿ ಅಮರಮ್ಮ ಕರಡಿ ರವರ ನೆನಪಿಗಾಗಿ ಒಂದು ಎಕರೆ ಭೂಮಿಯನ್ನು ವಾಲ್ಮೀಕಿ ಸಮುದಾಯ ಭವನ ನಿರ್ಮಾಣಕ್ಕೆ ದಾನವಾಗಿ ನೀಡಿದ್ದು ಜಿಲ್ಲೆಯ ವಾಲ್ಮೀಕಿ ನಾಯಕ ಸಮಾಜದ ಮುಖಂಡರು, ಜನಪ್ರತಿನಿಧಿಗಳು, ನೌಕರ ಬಾಂಧವರು, ಯುವಕ ಸಂಘದವರು ಪಕ್ಷಾತೀತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮಾಜದ ಈ ಕಾರ್ಯಕ್ರಮ ಯಶಸ್ವಿಗೊಳಿಸಲು ಕರ್ನಾಟಕ ವಾಲ್ಮೀಕಿ ಸೇನೆ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ ಹಾಗೂ ಇತರರು ವಿನಂತಿಸಿದ್ದಾರೆ.

Advertisement

0 comments:

Post a Comment

 
Top