PLEASE LOGIN TO KANNADANET.COM FOR REGULAR NEWS-UPDATES

ಅಂಬೇಡ್ಕರ್ ರ ಉದ್ದೇಶಗಳಿಗೆ ಆಶಯಗಳಿಗೆ ವ್ಯತಿರಿಕ್ತವಾಗಿ ಇಂದು ಬಹುಸಂಖ್ಯಾತ ದಲಿತರು ನಡೆದುಕೊಳ್ಳುತ್ತಿದ್ದಾರೆ. ಅಂಬೇಡ್ಕರ್ ರಲ್ಲಿ ಪರ್ಯಾಯ ಸಂಸ್ಕೃತಿಯ ಹುಡುಕಾಟ ,ಬಡತನದ ವಿರುದ್ದ ಸಿಟ್ಟಿತ್ತು. ಆದರೆ ಇಂದಿನ ದಲಿತ ಸಮುದಾಯ ಕೇವಲ ಆರ್ಥಿಕವಾಗಿ ಪ್ರಭಲವಾಗಲು ಮೀಸಲಾತಿಯನ್ನು ಉಪಯೋಗಿಸಿಕೊಂಡು ಉಳಿದ ಆಶಯಗಳಿಗೆ, ಸಿದ್ದಾಂತಗಳಿಗೆ ವಿರುದ್ದವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಕವಿ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಹೇಳಿದರು. ಅವರು ನಗರದಲ್ಲಿ ನಡೆಯುತ್ತಿರುವ 3ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷೀಯ ಭಾಷಣ ಮಾಡುತ್ತಿದ್ದರು. ಪ್ರಸ್ತುತ ಜಾತಿ ಪದ್ದತಿಗಳ ಬಗ್ಗೆ ವಿಷಾಧ ವ್ಯಕ್ತಪಡಿಸಿದ ಕವಿ ಜಾತಿ ವ್ಯವಸ್ಥೆ ಇನ್ನೂ ಗಟ್ಟಿಯಾಗುತ್ತಲಿರುವುದು ಆತಂಕಕಾರಿ ಎಂದರು. ಜನವರ್ಗದ ವೈಚಾರಿಕ ದಿಕ್ಕನ್ನು ನಿಯಂತ್ರಿಸುವ ಕೆಲಸವನ್ನು ಸಾಹಿತ್ಯ ಮಾಡುತ್ತಾ ಬಂದಿದೆ. ಬೇರೆ ಬೇರೆ ಭಾಷೆಯ ಸಾಹಿತ್ಯವನ್ನು ಅಂತರ್ವಿನಿಯಮ ಮಾಡಿಕೊಂಡು ದಲಿತ ಸಾಹಿತ್ಯದ ಪರಿದಿಯನ್ನು ಹಿಗ್ಗಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

Advertisement

0 comments:

Post a Comment

 
Top