PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ, ಜೂ. ೨೫. ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಗಣನೀಯ ಸಂಖ್ಯೆಯಲ್ಲಿರುವ ವಾಲ್ಮೀಕಿ ನಾಯಕ ಜನಾಂಗದ ಪ್ರೀತಿ, ಶ್ರೀರಕ್ಷೆಗೆ ತಾವು ಕೃತಜ್ಞರಾಗಿರುವುದಾಗಿ ಮಾಜಿ ಶಾಸಕ, ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಂಗಣ್ಣ ಕರಡಿ ಹೇಳಿದರು.
ಅವರು ನಗರದ ಕುಷ್ಟಗಿ ರಸ್ತೆಯಲ್ಲಿ ರಾಜ್ಯ ಸರಕಾರದಿಂದ ಮಂಜೂರಾದ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ವಾಲ್ಮೀಕಿ ಸಮುದಾಯ ಭವನದ ಭೂಮಿ ಪೂಜೆ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡುತ್ತಿದ್ದರು.
ಮೂರು ಬಾರಿ ಶಾಸಕನಾಗಲು ಹಾಗೂ ರಾಜಕೀಯವಾಗಿ ಮುಂದೆಬರಲು ವಾಲ್ಮೀಕಿ ನಾಯಕ ಸಮಾಜದ ಬೆಂಬಲ ಮತ್ತು ಪ್ರೀತಿ ಯಾವಾಗಲೂ ನನ್ನ ಜೊತೆಗಿದೆ, ನನ್ನನ್ನೂ ಕೂಡ ಆ ಸಮಾಜದ ಬಂಧುಗಳು ತಮ್ಮ ಒಂದು ಭಾಗವಾಗಿ ಪರಿಗಣಿಸಿದ್ದು, ನನ್ನ ಮತ್ತು ನನ್ನ ಕುಟುಂಬದ ನೆನಪು ಸದಾ ಅವರ ಜೊತೆ ಇರಲೆಂದು ತಾಯಿಯವರ ನೆನಪಿನಲ್ಲಿ ಭೂಮಿ ಕೊಡಿಸಿದ್ದೇನೆ. ಭವ್ಯವಾದ ವಾಲ್ಮೀಕಿ ಭವನ ಪೂರ್ಣಗೊಳ್ಳಲು ಎಲ್ಲಾ ಸಹಕಾರ ನೀಡುವದಾಗಿ ಸಂಗಣ್ಣ ಕರಡಿ ಹೇಳಿದರು.
ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿರವರು, ಹಿಂದುಳಿದ ವಾಲ್ಮೀಕಿ ನಾಯಕ ಜನಾಂಗವು ಸ್ವಾಭಿಮಾನ ಪ್ರೀತಿ ವಿಶ್ವಾಸಗಳಿಗೆ ಹೆಸರುವಾಸಿಯಾಗಿದೆ. ತಮ್ಮ ಸ್ವಕ್ಷೇತ್ರ ಅಥಣಿಯಲ್ಲೂ ಸಹ ಈ ಸಮಾಜ ನನ್ನೊಂದಿಗೆ ಸಹೋದರ ಬಾಂಧವ್ಯ ಹೊಂದಿದೆ. ಬ್ರೀಟೀಷರ ವಿರುದ್ಧ ಹೋರಾಡಿ ಪ್ರಾಣ ತ್ಯಾಗ ಮಾಡಿದ ವೀರ ಸಿಂಧೂರ ಲಕ್ಷ್ಮಣ ತಮ್ಮ ಕುಟುಂಬದ ಹಿರಿಯರೊಂದಿಗೆ ಒಡನಾಟ ಹೊಂದಿದ್ದರು, ಆತನ ಹುಟ್ಟೂರು ಸಿಂಧೂರು ಗ್ರಾಮ ತಮ್ಮ ಊರಿನ ಪಕ್ಕದಲ್ಲಿಯೇ ಇರುವದನ್ನು ಸ್ಮರಿಸಿದರು. ಕೊಪ್ಪಳದ ವಾಲ್ಮೀಕಿ ಭವನಕ್ಕೆ ಒಂದು ಕೋಟಿ ಬಿಡುಗಡೆ ಆಗಿದೆ, ಇನ್ನೂ ಹೆಚ್ಚಿನ ಹಣಕಾಸಿನ ನೆರವಿನ ಅಗತ್ಯಬಿದ್ದರೇ ತಾವೂ ಸಹ ನೆರವಾಗುವದಾಗಿ ಹೇಳಿದರು. ಈ ಸಂದರ್ಭದಲ್ಲಿ ಸಂಸದ ಶಿವರಾಮಗೌಡ, ಜಿ. ಪಂ. ಅಧ್ಯಕ್ಷೆ ಜ್ಯೋತಿ ಬಿಲ್ಗಾರ, ಜಿಲ್ಲಾ ಪಂ. ಸದಸ್ಯ ನಾಗನಗೌಡ ಮಾಲಿಪಾಟೀಲ, ಸದಸ್ಯೆ ವನಿತಾ ಗಡಾದ, ಎಪಿಎಂಸಿ ಅಧ್ಯಕ್ಷ ಶರಣಪ್ಪ ಸಜ್ಜನ, ಉಪಾಧ್ಯಕ್ಷ ಜಯಪ್ಪ ತಿಗರಿ, ನಗರಸಭೆ ಅಧ್ಯಕ್ಷ ಸುರೇಶ ದೇಸಾಯಿ, ತಾ. ಪಂ. ಸದಸ್ಯ ರಾಮಣ್ಣ ಚೌಡ್ಕಿ, ಬಿಜೆಪಿ ಜಿಲ್ಲಾಧ್ಯಕ್ಷ ಗಿರೇಗೌಡ, ಯುವ ಮುಖಂಡ ನವೀನಕುಮಾರ ಗುಳಗಣ್ಣವರ, ಮಾಜಿ ಜಿ. ಪಂ. ಸದಸ್ಯ ದೇವೇಂದ್ರಪ್ಪ ತಳವಾರ, ಜಿಲ್ಲಾ ವಾಲ್ಮೀಕಿ ಸಮಾಜದ ಗೌರವ ಅಧ್ಯಕ್ಷ ಹನುಮಮಂತಪ್ಪ ಮಾದಿನೂರು, ನಗರಸಭೆ ಸದಸ್ಯೆ ಇಂದಿರಾ ಭಾವಿಕಟ್ಟಿ, ವಾಲ್ಮೀಕಿ ಗುರುಪೀಠದ ಧರ್ಮದರ್ಶಿ ರಾಮಣ್ಣ ಕಲ್ಲನವರ, ಟಿ. ರತ್ನಾಕರ ಕುಕನೂರ, ಎಂ. ಎಚ್. ವಾಲ್ಮೀಕಿ, ಮಾರ್ಕಂಡೆಪ್ಪ ಕಲ್ಲನವರ, ಶರಣಪ್ಪ ನಾಯಕ, ಪರೀಕ್ಷಿತರಾಜ್, ಯಮನೂರಪ್ಪ ನಾಯಕ ತಳವಾರ, ರುಕ್ಮಣ್ಣ ಶ್ಯಾವಿ, ದೇವಪ್ಪ ಕಟ್ಟಿಮನಿ, ಪ್ರಭುಗೌಡ ಪಾಟೀಲ, ದೇವೇಂದ್ರಪ್ಪ ಡೊಳ್ಳಿನ, ಕೋಟೇಶ ದದೇಗಲ್, ಮಾರುತಿ ಪೂಜಾರ ಗಿಣಗೇರಾ, ಸುರೇಶ ಡೊಣ್ಣಿ, ಹನುಮಂತಪ್ಪ ಗುದಗಿ ಇತರರಿದ್ದರು.
ಸನ್ಮಾನ : ಸಮುದಾಯ ಭವನ ಮಂಜೂರು ಮಾಡಿದ ರಾಜ್ಯ ಸರಕಾರದ ಪರವಾಗಿ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಮತ್ತು ತಮ್ಮ ತಾಯಿ ದಿ. ಮಾತೋಶ್ರೀ ಮಹಾಂತಮ್ಮ ಅಮರಪ್ಪ ಕರಡಿ ರವರ ನೆನಪಿಗಾಗಿ ಒಂದು ಎಕರೆ ಭೂಮಿಯನ್ನು ವಾಲ್ಮೀಕಿ ಸಮುದಾಯ ಭವನ ನಿರ್ಮಾಣಕ್ಕೆ ದಾನವಾಗಿ ನೀಡಿದ ಮಾಜಿ ಶಾಸಕ ಸಂಗಣ್ಣ ಕರಡಿಯ ಜಿಲ್ಲೆಯ ವಾಲ್ಮೀಕಿ ನಾಯಕ ಸಮಾಜದ ಮುಖಂಡರು, ಜನಪ್ರತಿನಿಧಿಗಳು, ನೌಕರ ಬಾಂಧವರು, ಯುವಕ ಸಂಘದವರು ಸನ್ಮಾನಿಸಿ ಗೌರವಿಸಿದರು.
ಶೀಘ್ರ ನಿರ್ಮಾಣದ ಭರವಸೆ : ಈ ಭವನ ನಿರ್ಮಾಣವನ್ನು ನಿರ್ಮಿತಿ ಕೇಂದ್ರ ವಹಿಸಿಕೊಂಡಿದ್ದು, ಮುಂದಿನ ೮ ತಿಂಗಳಲ್ಲಿ ಉತ್ತಮ ರೀತಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವದೆಂದು ಕೇಂದ್ರದ ಯೋಜನಾ ವ್ಯವಸ್ಥಾಪಕ ಶಶಿಧರ ತಿಳಿಸಿದರು.
ಮಂಜುನಾಥ ಡಿ. ಡೊಳ್ಳಿನ ಪ್ರಾಸ್ತಾವಿಕವಾಗಿ ಮಾತನಾಡಿ ಹಲವು ವಿಷಯಗಳನ್ನು ಪ್ರಸ್ತಾಪಿಸಿದರು. ಕರ್ನಾಟಕ ವಾಲ್ಮೀಕಿ ಸೇನೆ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ ಕಾರ್ಯಕ್ರಮ ನಿರೂಪಿಸಿದರು, ಶಿಕ್ಷಕ ರಾಮಣ್ಣ ತಳವಾರ ವಂದಿಸಿದg

Advertisement

0 comments:

Post a Comment

 
Top