PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ : ಜಿಲ್ಲಾ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಪ್ರಕಟಗೊಂಡಿದೆ. ಬಿಜೆಪಿ -ಜೆಡಿಎಸ್ ಮೈತ್ರಿ ಇಲ್ಲವೆ. ಆಪರೇಷನ್ ಕಮಲದ ಮೂಲಕದ ಜೆಡಿಎಸ್ ನ ಸದಸ್ಯರನ್ನು ಸೆಳೆಯುವಲ್ಲಿ ಬಿಜೆಪಿ ತೊಡಗಿಕೊಂಡರೆ, ಮೀಸಲಾತಿ ಸರಳವಾಗಿ ಬಿಜೆಪಿ ಅಭ್ಯರ್ಥಿಯನ್ನೇ ಜಿ.ಪಂ. ಅಧ್ಯಕ್ಷರನ್ನಾಗಿಸುವತ್ತ ಸಾಗಿದೆ. ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡ ಮಹಿಳೆಗೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಒದಗಿದೆ.
ಮೀಸಲಾತಿಯನ್ವಯ ಹಿರೇಮನ್ನಾಪೂರ ಕ್ಷೇತ್ರದ ಅನ್ನಪೂರ್ಣ ಕಂದಕೂರಪ್ಪ ಇಲ್ಲವೇ ನವಲಿ ಕ್ಷೇತ್ರದ ಜ್ಯೋತಿ ಬಿಲ್ಗಾರ್ ಇವರಲ್ಲೊಬ್ಬರಿಗೆ ಅಧ್ಯಕ್ಷ ಸ್ಥಾನ ಖಚಿತವಾಗಿದ್ದು. ಉಪಾಧ್ಯಕ್ಷ ಸ್ಥಾನಕ್ಕೆ ಮೈತ್ರಿಗೆ ಅಥವಾ ಆಪರೇಷನ್ ಗೆ ಬಲಿಯಾದರೆ ಜೆಡಿಎಸ್ ನ ವನಿತಾ ಗಡಾದ ಇಲ್ಲವೇ ಬಾಗೀರಥಿಬಾಯಿ ಪಾಟೀಲ ಇವರ ನಡುವೆ ಪೈಪೋಟಿ ನಡೆಯಲಿದೆ.

Advertisement

0 comments:

Post a Comment

 
Top