PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ ಜಿಲ್ಲೆಗೆ ಶಿವನಗೌಡ ನಾಯಕನಂಥ ರಣಹೇಡಿ ಸಚಿವರಾಗಿ ವಕ್ಕರಿಸಿದ್ದು ಜಿಲ್ಲೆಯ ದೌರ್ಭಾಗ್ಯವೆನ್ನಬೇಕಾಗಿದೆ. ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ವಿಚಾರದಲ್ಲಿ ಎನ್ ಎಚ್೬೩ ಎಡಬಲದಲ್ಲಿ ಭವ್ಯ ಬಂಗಲೆಗಳನ್ನು ಕಟ್ಟಿಕೊಂಡಿರುವ ಶ್ರೀಮಂತರ ಲಾಬಿಗೆ ಮಣಿದಿರುವ ಸಚಿವ ಶಿವನಗೌಡ, ಅಗಲೀಕರಣಕ್ಕೆ ಕ್ರಮ ಕೈಗೊಳ್ಳದಿರುವ ಬಗ್ಗೆ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
ಸಚಿವ ಶಿವನಗೌಡ ನಾಯಕ , ಸಂಸದ ಶಿವರಾಮೇಗೌಡ ಇವರುಗಳು ಸಾಲಾರ್ ಜಂಗ್, ಹಸನರೋಡ್, ಅಗಲೀಕರಣದ ಸಂದರ್ಭದಲ್ಲಿ ಬಡವರು ಅಕ್ಷರಶಃ ಬೀದಿಪಾಲಾಗಿ , ಕಂಗಾಲಾದಾಗ ಮೌನವಹಿಸಿ, ರಾಷ್ಟ್ರೀಯ ಹೆದ್ದಾರಿ ೬೩ಅಗಲೀಕರಣ ವಿಚಾರದಲ್ಲಿ ತಮ್ಮ ಪಕ್ಷದವರಿಗೆ , ಸಂಬಂಧಿಗಳಿಗೆ, ಅದರಲ್ಲೂ ಶ್ರೀಮಂತರಿಗೆ ಹಾನಿಯಾಗುತ್ತದೆ ಎಂಬ ಕಾರಣಕ್ಕಾಗಿ, ಅನಾವಶ್ಯಕ ವಿಳಂಭತೆ, ನಿರ್ಲಕ್ಷ್ಯತನ ತೋರುತ್ತಿರುವದು ಸರಿಯಲ್ಲ. ಕಾನೂನು ದೃಷ್ಟಿಯಲ್ಲಿ ಎಲ್ಲರೂ ಒಂದೇ. ಜನರ ಹಿತ ದೃಷ್ಟಿಯಿಂದ ಅದರಲ್ಲೂ ಹೆದ್ದಾರಿಯಿಂದಾಗುತ್ತಿರುವ ಅಪಘಾತ, ಸಾವು ನೋವು ತಪ್ಪಿಸುವುದಕ್ಕಗಿ ಹೆದ್ದಾರಿಯ ಮಧ್ಯಭಾಗದಿಂದ ಎರಡೂ ಬದಿಗೂ ೨೧ ಮೀಟರ್ ಗಳಂತೆ ಅಗಲ ಮಾಡಬೇಕಾದುದು ಅನಿವಾರ್‍ಯ. ಸತ್ಯಾ ಸತ್ಯತೆ ತಿಳಿದು ತಿಳಿದು ಅಗಲೀಕರಣ ವಿಷಯವಾಗಿ ಸಾಲಾರ್ ಜಂಗ್, ಹಸನರೋಡ್ ರಸ್ತೆ ಮೇಲಿನ ಬಡವರಿಗೆ ಯಾವುದೇ ರೀತಿಯಲ್ಲಿ ರಿಯಾಯಿತಿ ತೋರಿಸದೇ ಕೇವಲ ಶ್ರೀಮಂತರೆಂಬ ಕಾರಣಕ್ಕಾಗಿ ಎನ್ ಹೆಚ್ ೬೩ರಲ್ಲಿ ಎಡಬಲದಲ್ಲಿರುವ ಕೋಟ್ಯಾಧಿಪತಿಗಳಿಗೆ ಅಗಲೀಕರಣಕ್ಕೆ ಸಂಬಂಧಪಟ್ಟಂತೆ ರಿಯಾಯಿತಿ ತೋರಿಸುತ್ತಿರುವುದು ಸಚಿವರ ಅಸಮರ್ಥತೆಯನ್ನು ಎತ್ತಿ ತೋರುತ್ತದೆ. ಜನರ ಬಹುದಿನದ ಬೇಡಿಕೆಯಂತೆ ರಾಷ್ಟ್ರೀಯ ಹೆದ್ದಾರಿ ೬೩ರನ್ನು ಎರಡೂ ಬದಿಗೂ ೨೧ ಮೀಟರ್ ಗಳಂತೆ ಅಗಲೀಕರಣಗೊಳಿಸಲು ಮುಂದಾಗದ ಸಚಿವ ಶಿವನಗೌಡ ನಾಯಕ ರಾಜೀನಾಮೆ ನೀಡಬೇಕು. ರಾಜೀನಾಮೆ ನೀಡದಿದ್ದಲ್ಲಿ ಹೋರಾಟ ಅನಿವಾರ್‍ಯವಾಗುತ್ತದೆ.

ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪರವಾಗಿ
ಬಸವರಾಜ ಶೀಲವಂತರ

Advertisement

0 comments:

Post a Comment

 
Top