PLEASE LOGIN TO KANNADANET.COM FOR REGULAR NEWS-UPDATES

ಕಾಂಗ್ರೆಸ್ ಸರಕಾರ ಕಳೆದ 10 ವರ್ಷಗಳಿಂದ ದೇಶವನ್ನು ಲೂಟಿ ಮಾಡುತ್ತಿದೆ. ಈ ಸರಕಾರಕ್ಕೆ  ಬ
















ಡವರು,ರೈತರು, ನಿರುದ್ಯೋಗಿಗಳು ಹಾಗೂ ಯುವಕರ ಸಮಸ್ಯೆಗಳಿಗೆ ಪರಿಹಾರ ನೀಡುವಲ್ಲಿ ವಿಫಲವಾಗಿದೆ. ಜೈ ಜವಾನ್ ಜೈ ಕಿಸಾನ್ ಗೆ ಬದಲಿ ಮರ್ ಜವಾನ್ ಮರ್ ಕಿಸಾನ್ ಎನ್ನುವ ಘೋಷಣೆ ಮೊಳಗಿಸುತ್ತಿದೆ ಎಂದು ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ  ಹೇಳಿದರು. ಅವರು ಕೊಪ್ಪಳದ ಹೊರಭಾಗದಲ್ಲಿ  ಬಿಜೆಪಿ ಪಕ್ಷವು ಹಮ್ಮಿಕೊಂಡಿದ್ದ  ಭಾರತ್ ವಿಜಯ ರ್ಯಾಲಿಯಲ್ಲಿ  ಮಾತನಾಡುತ್ತಿದ್ದರು.
ಕಾಂಗ್ರೆಸ್ ಸರಕಾರದ ಮೇಲೆ ಹರಿಹಾಯ್ದ ಮೋದಿ  ನರೇಗಾ ದಂತಹ ಯೋಜನೆಯ ಲಾಭ ನಿಜವಾದ ಕಾರ್ಮಿಕರಿಗೆ, ಬಡವರಿಗೆ, ರೈತರಿಗೆ ಸಿಕ್ಕಿಲ್ಲ ಅದು ಕಾಂಗ್ರೆಸ್ ನ ಜೇಬು ತುಂಬಿಸಿದೆ. ಶಹಜಾದಾ ನಾವು ಆರ್ ಟಿಐ ಕೊಟ್ಟಿದ್ದೇವೆ ಎನ್ನುತ್ತಾರೆ ಅದರಿಂದ ಯಾರಿಗೆ ಲಾಭವಾಗಿದೆ.  ಕಾಂಗ್ರೆಸ್ ನ ಭ್ರಷ್ಟರು ತಿಂದ ದುಡ್ಡು ವಾಪಸ್ ಬಂತಾ?  ಕಲ್ಲಿದ್ದಲ್ಲನ್ನು ಕಳ್ಳತನ ಮಾಡಿದರು. ಟಾಯಲೆಟ್ ನ್ನು  ಸಹ ಬಿಡದೇ ನುಂಗಿದ್ದಾರೆ. ಇವರಿಗೆ ತಕ್ಕ ಪಾಠ ಕಲಿಸುವ ಸಮಯ ಬಂದಿದೆ.  ಕಪ್ಪುಹಣವನ್ನು ಇದುವರೆಗೆ ಕಾಂಗ್ರೆಸ್ ನ್ನವರು ಯಾಕೆ ವಾಪಸ್ ತಂದಿಲ್ಲಾ? ಯಾಕೆಂದ್ರೆ ಅವರೂ ದುಡ್ಡನ್ನು ವಿದೇಶಗಳಲ್ಲಿ ಇಟ್ಟಿದ್ದಾರೆ.  ಇದು ಅತ್ಯಂತ ಭ್ರಷ್ಟ ಸರಕಾರ.  ಸುಪ್ರಿಂ ಕೋರ್ಟ ಆದೇಶ ನೀಡಿದರೂ ಸಹ ಕೇಂದ್ರ ಸರಕಾರ ಗೋದಾಮುಗಳಲ್ಲಿದ್ದ ದವಸದಾನ್ಯಗಳನ್ನು ಬಡವರಿಗೆ ಹಂಚಲಿಲ್ಲ. ಅಕ್ರಮವಾಗಿ ಕಡಿಮೆ ಬೆಲೆಯಲ್ಲಿ ಮಧ್ಯ ತಯಾರಕರಿಗೆ ಮಾರಾಟ ಮಾಡಿತು.  ಇಂತಹ ಭ್ರಷ್ಟ ಸರಕಾರ ಅಧಿಕಾರದಲ್ಲಿರಲು ಯಾವುದೇ ಹಕ್ಕಿಲ್ಲ. ಈ ಸಲದ ಚುನಾವಣೆ ವಿಶೇಷವಾಗಿದೆ . ಪಕ್ಷಗಳು ಸ್ಪರ್ಧಿಸುತ್ತಿಲ್ಲ ಬದಲಾಗಿ ದೇಶವೇ ಸ್ಪರ್ಧೆಗೆ ಇಳಿದಿದೆ. ಈಗಾಗಲೇ ರಿಜಲ್ಟ್  ಸಹ ಘೋಷಣೆಯಾಗಿದೆ.  
      ಈ ಸಲ ಬಲಿಷ್ಠ ಸರಕಾರವನ್ನು ಕಟ್ಟಬೇಕಿದೆ. ದುರ್ಬಲ ಸರಕಾರದಿಂದ ಅಕ್ಕಪಕ್ಕದ ದೇಶದವರು ನಮ್ಮ ಮೇಲೆ ಕಣ್ಣಾಕುವಂತಾಗಿದೆ.  300 ಕಮಲಗಳನ್ನು ಗೆಲ್ಲಿಸಿ ಕೊಡಿ ನಿಮ್ಮೆಲ್ಲ ಕನಸುಗಳನ್ನು ನನಸು ಮಾಡುತ್ತೇನೆ ಎಂದು ಹೇಳಿದರು. 
ವೇದಿಕೆಯ ಮೇಲೆ  ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಸಂಸದ ಶಿವರಾಮೇಗೌಡ, ಮಾಜಿ ಸಚಿವ ವಿರುಪಾಕ್ಷಪ್ಪ ಅಗಡಿ, ಮಾಜಿ ಸಂಸದ ಕೆ.ವಿರುಪಾಕ್ಷಪ್ಪ, ವಿಧಾನ ಪರಿಷತ್ ಸದಸ್ಯ ಹಾಲಪ್ಪ ಆಚಾರ್, ಕುಷ್ಟಗಿಯ ಶಾಸಕ ದೊಡ್ಡನಗೌಡ, ಬಸವರಾಜ್ ದಡೇಸೂಗೂರ,  ಮಾಜಿ ಸಚಿವ ಶ್ರೀರಾಮುಲು,ಡಾ.ಕೆ.ಜಿ.ಕುಲಕರ್ಣಿ, ಬಳ್ಳಾರಿಯ ಮಾಜಿ ಶಾಸಕ ಸೋಮಲಿಂಗಪ್ಪ, ಗಂಗಾವತಿಯ ಮಾಜಿ ಶಾಸಕ ಪರಣ್ಣ ಮುನವಳ್ಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು. 
ಅಕ್ಕಪಕ್ಕದ ಜಿಲ್ಲೆಗಳಿಂದಲೂ ಅಭಿಮಾನಿಗಳು ಬಂದಿದ್ದರಿಂದ ಸಮಾವೇಶದಲ್ಲಿ ಜನಸಾಗರವೇ ಇತ್ತು. 

Advertisement

0 comments:

Post a Comment

 
Top