PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ - ತಾಲೂಕಿನ ಹನುಮನಹಳ್ಳಿಗೆ ಅಭಿನವ ಗವಿಸಿದ್ಧೇಶ್ವರ ಸ್ವಾಮಿಗಳು ಭೇಟಿ ನೀಡಿ, ಜನರ ಸಂಕಷ್ಟಗಳನ್ನು ಕೇಳಿದರು ಮಳೆ ಇಲ್ಲದೆ ಬೆಳೆ ನಾಶವಾಗುತ್ತಿರುವುದನ್ನು ನೋಡಿ, ಜನರಿಗೆ ಎದೆಗುಂದದೆ ಸಂಯಮದಿಂದಿರಿ ಮುಂದಿನ ದಿನಗಳಲ್ಲಿ ಮಳೆ ಬರುತ್ತದೆ ಎಂದು ದೈರ್ಯ ತುಂಬಿದರು. ನಂತರ ಹನುಮನಹಳ್ಳಿ ಸರಕಾರಿ ಶಾಲೆಗೆ ಬೇಟಿ ನೀಡಿ ಮಕ್ಕಳೊಂದಿಗೆ ಹಲವು ವಿಷಯಗಳನ್ನು ಕೇಳಿದರು ಶ್ರೀಗಳು ಕೇಳಿದ ಪ್ರಶ್ನೆಗಳಿಗೆ ಮಕ್ಕಳು ಮುಗ್ಧತೆಯಿಂದ ಉತ್ತರಿಸಿದರು. ಮಕ್ಕಳ ಜಾಣತನ, ಮಾತು ಕೇಳಿ ಶ್ರೀಗಳು ಹರ್ಷವ್ಯಕ್ತ ಪಡಿಸಿದರು ಹನುಮನಹಳ್ಳಿಯಲ್ಲಿ ಜನರಿಂದ ಕಾಣಿಕೆ ಸಂಗ್ರಹಿಸಲಾದ ೩೮೬೨ ರೂಗಳನ್ನು ಕೊಟ್ಟು ಶಾಲೆಯ ಅಭಿವೃದ್ದಿಗೆ ಬಳಸಿಕೊಳ್ಳುವಂತೆ ಶಿಕ್ಷಕರಿಗೆ ತಿಳಿಸಿದರು. ಊರಿನ ಹಿರಿಯರಿಗೆ ಮಕ್ಕಳನ್ನು ಪ್ರತಿನಿತ್ಯ ಶಾಲೆಗೆ ಕಳುಹಿಸಿ, ದುಡಿಯಲು ಹಚ್ಚಬೇಡಿ ಎಂದು ಕಿವಿ ಮಾತು ಹೇಳಿದರು. ಊರಿನ ಹಿರಿಯರಾದ ಕುಬೇರಪ್ಪ ಬಡಿಗೇರ, ಉಮೇಶಪ್ಪ, ಬಸವರಾಜ ಮುಂಡರಗಿ, ದುರಗಪ್ಪ ಮಾಸ್ತರ, ದುರಗಪ್ಪ ಮುರಡಿ, ಯಮನೂರಪ್ಪ ಬಗನಾಳ, ಶಿಕ್ಷಕರಾದ ಶಶಿಧರ ಜೀರಗಿ, ಪ್ರಾಣೇಶ ಪೂಜಾರ ಮುರಿಗೇಶ ಸಜ್ಜನ್, ವಿಜಯಲಕ್ಷ್ಮೀ, ಮಲ್ಲಪ್ಪ, ಕೊಟ್ರೇಶ ಹೈದ್ರಿ, ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Advertisement

0 comments:

Post a Comment

 
Top