ಕೊಪ್ಪಳ ಆ.೨,ಇತ್ತೀಚೆಗೆ ನಮ್ಮನ್ನಗಲಿದ ಅಣುವಿಜ್ಞಾನಿ,ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರಿಗೆ ಯೋಗದ ಮೂಲಕ ನಮಸ್ಕರಿಸಿ,ಶ್ರದ್ಧಾಂಜಲಿ ಸಲ್ಲಿಸುವ ವಿನೂತನ ರೀತಿಯ ಕಾರ್ಯಕ್ರಮ ಸಂಸದ ಸಂಗಣ್ಣ ಕರಡಿ, ಹಾಗೂ ಯೋಗಗುರು ಅಶೋಕಸ್ವಾಮಿ ಹಿರೇಮಠ ಅವರ ನೇತೃತ್ವದಲ್ಲಿ ಇಂದು (ರವಿವಾರ) ಬೆಳಿಗ್ಗೆ ನಗರದ ಸಾರ್ವಜನಿಕ ಮೈದಾನದಲ್ಲಿ ಜರುಗಿತು. ಅಣುವಿಜ್ಞಾನಿಯಾಗಿ,ಭಾರತದ ರಕ್ಷಣಾ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡಿದ ಡಾ.ಅಬ್ದುಲ್ ಕಲಾಂ, ದೇಶದ ರಾಷ್ಟ್ರಪತಿಯಂತಹ ಉನ್ನತ ಹುದ್ದೆಗೇರಿದ ಬಳಿಕವೂ ವಿದ್ಯಾರ್ಥಿಗಳಿಗೆ ನಿರಂತರ ಪಾಠ ಮಾಡುವ ಉದಾತ್ತ ಕಾರ್ಯ ಮುಂದುವರೆಸಿ ಜಗತ್ತಿಗೆ ಮಾರ್ಗದರ್ಶಿಯಾಗಿದ್ದರು. ಅಂತಹ ಮಹಾನ್ ವ್ಯಕ್ತಿಗೆ ಕೊಪ್ಪಳ ನಗರದ ವಿವಿಧ ಶಾಲೆ,ಕಾಲೇಜು, ಹಾಸ್ಟೇಲುಗಳ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿ,ವಿದ್ಯಾರ್ಥಿನಿಯರು ವಿವಿಧ ಯೋಗಾಸನಗಳ ಮೂಲಕ ಯೋಗನಮನ ಸಲ್ಲಿಸಿದರು. ಯೋಗಗುರು ಅಶೋಕಸ್ವಾಮಿ ಹಿರೇಮಠ ೨೧ ಬಗೆಯ ನಮಸ್ಕಾರಾಸನಗಳು, ನಂತರ ಡಾ.ಅಬ್ದುಲ್ ಕಲಾಂ ಅವರ ಸ್ಮರಣೆಯೊಂದಿಗೆ ಪ್ರಾಣಾಯಮಗಳನ್ನು ಬೋಧಿಸಿದರು. ಲೋಕಸಭಾ ಸದಸ್ಯ ಸಂಗಣ್ಣ ಕರಡಿ ಎಲ್ಲ ಆಸನಗಳನ್ನು ಲೀಲಾಜಾಲವಾಗಿ ಮಾಡುವ ಮೂಲಕ ಗಮನ ಸೆಳೆದರು. ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಪೂಜಾರ , ದೈಹಿಕ ಶಿಕ್ಷಕರಾದ ಎಂ.ಎಂ.ಮುಜಗೊಂಡ,ವೆಂಕಟೇಶ,ಬಿ.ಪ್ರಾಣೇಶ,ಶರಣಪ್ಪ ಮಣ್ಣೂರ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ನಿವೃತ್ತ ಪ್ರಾಚಾರ್ಯ ಸಿ.ವಿ.ಜಡಿಯವರ್ ನಿರೂಪಿಸಿದರು.
ಡಾ.ಕಲಾಂ ಗೆ ಸಂಸದರ ಸಾರಥ್ಯದಲ್ಲಿ ಯೋಗ ನಮನ.

0 comments:
Post a Comment