ಕೊಪ್ಪಳ: ಎನ್.ಎಸ್.ಎಸ್. ದಿಂದ ವಿದ್ಯಾರ್ಥಿಗಳಲ್ಲಿ ಶಿಸ್ತು ಸಹಕಾರ ಮನೋಭಾವನೆ ಬೆಳೆಯುತ್ತದೆ. ಮತ್ತು ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಸನವಾಗುತ್ತದೆ ಎಂದು ಲೇಬಗೇರಿ ಜಿಲ್ಲಾ ಪಂಚಾಯತ ಸದಸ್ಯರಾದ ವನಿತಾ ಗಡಾದ ಹೇಳಿದರು.
ಅವರು ಕೊಪ್ಪಳ ತಾಲೂಕಿನ ಬುಡಶೆಟ್ನಾಳದಲ್ಲಿ ಕಿನ್ನಾಳ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯ ಹಮ್ಮಿಕೊಂಡ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ವಾರ್ಷಿಕ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಕಿನ್ನಾಳದ ವೇದಮೂರ್ತಿ ಷಡಕ್ಷರಯ್ಯಸ್ವಾಮಿ ಹಿರೇಮಠ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು.
ಕಿನ್ನಾಳ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಭಾರಿ ಪ್ರಾಚಾರ್ಯರಾದ ಎಸ್.ಜಿ. ಹೊಸಬಾವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಚಿಲವಾಡಗಿ ತಾಲೂಕ ಪಂಚಾಯತಿ ಸದಸ್ಯರಾದ ರಮೇಶ ಚೌಡ್ಕಿ, ಗ್ರಾ.ಪಂ ಸದಸ್ಯರಾದ ಗವಿಸಿದ್ದಪ್ಪ ಮೆತಗಲ್, ದ್ಯಾಮವ್ವ ಗಾಳೆಪ್ಪ ಶಿದ್ರ, ಗೌರಮ್ಮ ಹನುಮಂತಪ್ಪ ಚಂಡೂರು, ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಬಸವರಾಜ ಮುರುಡಿ, ಹಿರಿಯರಾದ ಗುರುಬಸಯ್ಯ ಹಿರೇಮಠ, ಗಿರಿಯಪ್ಪ ಯಲಬುರ್ಗಿ, ದೊಡ್ಡನಿಂಗಪ್ಪ ಕುರಿ, ಹನುಮಂತಗೌಡ ಪೋಲಿಸ್ ಪಾಟೀಲ್, ದ್ಯಾಮಪ್ಪ ಬಾವಿ, ಈರಪ್ಪ ಬಸೆಟ್ಟರ್, ಮಲ್ಲಪ್ಪ ತಳವಾರ್, ಮನೋಹರ ಶೆಟ್ಟರ್ ಕುಷ್ಟಗಿ, ಉಪನ್ಯಾಸಕರಾದ ಪ್ರಕಾಶ ಬೋಸ್ಲೆ, ಶ್ರೀಕಾಂತ ಬಂಡಿಹಾಳ, ಹೇಮಾ ಜೆ, ರತ್ನಾಬಾಯಿ.ವಾಯ್.ಕೆ, ಅಹ್ಮದ್ ಮೊಹಿದ್ದೀನ್, ಅಡವಿರಾವ್ ಕಸಬೆ, ವೇದಿಕೆ ಮೇಲೆ ಉಪಸ್ಥಿತರಿದ್ದರು.
ಪ್ರಿಯಾಂಕ ಕೋಗಿಲೆ ಪ್ರಾರ್ಥಿಸಿದರು. ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಎಚ್.ಎಸ್.ತಿಮ್ಮಾರೆಡ್ಡಿ ಸ್ವಾಗತಿಸಿದರು. ಉಪನ್ಯಾಸಕರಾದ ಎಸ್.ಪಿ.ಕುಲಕರ್ಣಿ ನಿರೂಪಿಸಿದರು. ಉಪನ್ಯಾಸಕರಾದ ವಾಸುದೇವ ಅಡವಿಬಾವಿ ವಂದಿಸಿದರು.
0 comments:
Post a Comment