PLEASE LOGIN TO KANNADANET.COM FOR REGULAR NEWS-UPDATES


ಜನ ಸಂಖ್ಯೆಯ ಹೆಚ್ಚಳವು ದೇಶದ ಪ್ರಗತಿಗೆ ಮಾರಕವಾಗಿದೆ ಎಂದು ಸಿ.ಪಿ.ಎಸ್.ಶಾಲೆಯ ಪ್ರಭಾರಿ ಮುಖ್ಯೋಪಾದ್ಯಾಯರಾದ ವಿರುಪಾಕ್ಷಪ್ಪ ಬಾಗೋಡಿ ಹೇಳಿದರು
ಅವರು ಸರ್ಕಾರಿ ನೌಕರರ ಸಂಘ ಮತ್ತು ಸಿ.ಪಿ.ಎಸ್.ಶಾಲೆಯ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವಜನಸಂಖ್ಯಾ ದಿನಾಚರಣೆಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತ,ಅತಿಯಾದ ಜನಸಂಖ್ಯೆಯ ಹೆಚ್ಚಳದಿಂದ ಜನರ ಅವಶ್ಯಕತೆಗೆ ತಕ್ಕಂತೆ ಆಹಾರ ಪೂರೈಕೆ ,ಸಂಪನ್ಮೂಲಗಳ ಕೊರತೆ,ಸ್ಥಳದ ಅಭಾವ ಮುಂತಾದ ಅನೇಕ ಸಮಸ್ಯೆಗಳು ಎದುರಾಗುವುದರ ಜೊತೆಯಲ್ಲಿ ದೇಶವು ಪ್ರಗತಿಯತ್ತ ಮುಂದುವರೆಯಲು ಸಾಧ್ಯವಿಲ್ಲ.ಅಲ್ಲದೆ ಜನಸಂಖ್ಯೆಯು ಇದೇ ರೀತಿಯಲ್ಲಿ ಹೆಚ್ಚುತ್ತಾ ಹೋದರೆ ಮುಂದಿನ ದಿನಮಾನಗಳಲ್ಲಿ ಅನೇಕ ರೀತಿಯ ಸಂಕಷ್ಟಗಳನ್ನು ಮಾನವರು ಎದುರಿಸಬೇಕಾಗುತ್ತದೆ ಎಂದು ಹೇಳಿದರು.
 ನಂತರ ಸರ್ಕರಿ ಅಂಗವಿಕಲ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ ಮಾತನಾಡುತ್ತ,ಜನಸಂಖ್ಯೆಯ ಹೆಚ್ಚಳದಿಂದಾಗು ಪರಿಣಾಮಗಳು ಮತ್ತು ಜನಸಂಖ್ಯೆಯ ನಿಯಂತ್ರಣದ ಕುರಿತಾಗಿ ಹೆಚ್ಚಿನ ರೀತಿಯಲ್ಲಿ ಜನರಲ್ಲಿ ಜಾಗೃತಿ ಮೂಡಿಸಬೇಕು.ಸರ್ಕಾರ ಜಾರಿಗೆ ತಂದ ಅನೇಕ ಯೋಜನೆಗಳ ಜೊತೆಯಲ್ಲಿ ಜನಸಂಖ್ಯೆಯ ವಿಷಯದ ಕುರಿತು ಬೀದಿ ನಾಟಕ,ಬಾಷಣ ಸ್ಪರ್ಧೆ,ಪ್ರಬಂಧದಂತ ಅನೇಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದರ ಮೂಲಕ ಜನರಲ್ಲಿ ಅರಿವು ಮೂಡಿಸಲು ಸಾಧ್ಯ ಎಂದು ಹೇಳಿದರು.  ಕಾರ್ಯಕ್ರಮದಲ್ಲಿ ಶಿಕ್ಷಕರಾದ ಗುರುರಾಜ ಕಟ್ಟಿ, ವಿಜಯಾ ಹಿರೇಮಠ,ರತ್ನಾ, ವಿಜಯಲಕ್ಷ್ಮೀ ಮುಂತಾದವರು ಹಾಜರಿದ್ದರು.ಕಾರ್ಯಕ್ರಮವನ್ನು ಶಿಕ್ಷಕಿಯರಾದ ಶಂಕ್ರಮ್ಮ ಬಂಗಾರಶೆಟ್ಟರ್ ನಿರೂಪಿಸಿದರು.ಶಿಕ್ಷಕರಾದ ಮೋಹಿನ್ ಪಾಷಾಬಿ ಸ್ವಾಗತಿಸಿ,ಗಂಗಮ್ಮ ತೋಟದ ವಂದಿಸಿದರು.

Advertisement

0 comments:

Post a Comment

 
Top